Saturday, 23rd November 2024

Hindu Janajagruti Samiti: ಕೆನಡಾದ ಹಿಂದೂ ದೇವಸ್ಥಾನದ ಮೇಲೆ ದಾಳಿ; ಕಠಿಣ ಕ್ರಮಕ್ಕೆ ಆಗ್ರಹ

Hindu Janajagruti Samiti

ಬೆಂಗಳೂರು: ಕೆನಡಾದ ಬ್ರೆಂಪ್ಟನ್ ಪ್ರದೇಶದಲ್ಲಿ ಇತ್ತೀಚೆಗೆ ಹಿಂದೂ ದೇವಸ್ಥಾನದ ಮೇಲೆ ’ಸಿಖ್ ಫಾರ್ ಜಸ್ಟೀಸ್ʼ ಸಂಘಟನೆ ಮತ್ತು ಖಲಿಸ್ತಾನಿ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ದಾಳಿ ಮಾಡಿದ್ದರು. ಆದರೆ ಈ ಹಿಂಸಾತ್ಮಕ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಕೆನಡಾ ಸರ್ಕಾರ (Canada Government) ಅವರನ್ನು ರಕ್ಷಿಸುವ ಕೆಲಸ ಮಾಡಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಹಿಂದೆಯೂ ಕೆನಡಾದಲ್ಲಿ ದೇವಸ್ಥಾನಗಳ ಮೇಲೆ ದಾಳಿಗಳು ನಡೆದಿವೆ. ಕೆನಡಾ ಸರ್ಕಾರವು ಈ ಎಲ್ಲಾ ದಾಳಿಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೆನಡಾ ಸರ್ಕಾರವನ್ನು ಎಚ್ಚರಿಸಲು ಭಾರತದಲ್ಲಿ ಅವರ ರಾಯಭಾರಿ ಕಚೇರಿ ಎದುರು ಹಿಂದುತ್ವವಾದಿ ಸಂಘಟನೆಗಳೊಂದಿಗೆ ಪ್ರತಿಭಟನೆ ನಡೆಸುವುದಾಗಿ ಹಿಂದೂ ಜನಜಾಗೃತಿ ಸಮಿತಿ (Hindu Janajagruti Samiti) ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ | KPSC Jobs: ಮೋಟಾರ್‌ ವೆಹಿಕಲ್‌ ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಅವರು, ಭಾರತೀಯ ಹೈಕಮೀಷನರ್ ಅವರು ಕೆನಡಾದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಮಾಹಿತಿಯಿದ್ದರೂ, ಅವರ ಮತ್ತು ದೇವಸ್ಥಾನದ ಭದ್ರತೆಗಾಗಿ ಅಥವಾ ಈ ದಾಳಿಯನ್ನು ತಡೆಯಲು ಕೆನಡಾ ಸರ್ಕಾರವು ಯಾವುದೇ ನಿರ್ದಿಷ್ಟ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಗಮನಿಸಿದಾಗ ಈ ದಾಳಿಯಲ್ಲಿ ಕೆನಡಾ ಸರ್ಕಾರವೂ ಭಾಗಿಯಾಗಿದೆಯೇ? ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಆರೋಪಿಸಿರುವ ಅವರು, ಖಲಿಸ್ತಾನಿ ಭಯೋತ್ಪಾದಕರು ಹರದೀಪ ಸಿಂಗ ನಿಜ್ಜರ ಹತ್ಯೆಯ ಬಳಿಕ ಕೆನಡಾದಲ್ಲಿ ನಿರಂತರವಾಗಿ ಹಿಂದೂಗಳ ಮತ್ತು ದೇವಸ್ಥಾನಗಳ ಮೇಲೆ ನಡೆಯುವ ದಾಳಿಯನ್ನು ತಡೆಯುವಲ್ಲಿ ಕೆನಡಾ ಸರ್ಕಾರವು ಸಂಪೂರ್ಣ ವಿಫಲವಾಗಿದೆ.

ಈ ಸುದ್ದಿಯನ್ನೂ ಓದಿ | BESCOM: ಬೆಸ್ಕಾಂಗೆ ‘ಚಾರ್ಜ್ ಇಂಡಿಯಾ 2024 ಎಕ್ಸಲೆನ್ಸ್’ ಪ್ರಶಸ್ತಿ; ಚಾರ್ಜಿಂಗ್‌ ಸ್ಟೇಷನ್‌ನಲ್ಲಿ ರಾಜ್ಯ ನಂ.1

ಆದ್ದರಿಂದ ಭಾರತ ಸರ್ಕಾರವು ಈ ವಿಷಯವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ಕೆನಡಾ ಸರ್ಕಾರದ ವಿರುದ್ಧ ಕ್ರಮ ಕೈಕೊಳ್ಳಲು ಒತ್ತಡ ಹೇರಬೇಕು ಎನ್ನುವುದು ಭಾರತ ಸರ್ಕಾರದ ಬಳಿ ನಮ್ಮ ಬೇಡಿಕೆಯಾಗಿದೆ. ದಾಳಿ ನಡೆಸಿರುವ ಸಂಘಟನೆಯ ಭಾರತದಲ್ಲಿರುವ ಎಲ್ಲಾ ಬೆಂಬಲಿಗರ ವಿರುದ್ಧ ಭಾರತ ಸರ್ಕಾರವು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.