Wednesday, 6th November 2024

Saree Blouse Fashion: ಪ್ರಯೋಗಾತ್ಮಕ ಸೀರೆ ಪ್ರಿಯರನ್ನು ಸೆಳೆದ ಕಂಟೆಂಪರರಿ ಬ್ಲೌಸ್‌ ಫ್ಯಾಷನ್‌

Saree Blouse Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇತ್ತೀಚೆಗೆ ಕಂಟೆಂಪರರಿ ಡಿಸೈನ್‌ನ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ಇವು ಮಹಿಳೆಯರನ್ನು ಮಾತ್ರವಲ್ಲ, ಕಾಲೇಜು ಯುವತಿಯರನ್ನು ಸೆಳೆದಿವೆ. ಡೈಲಿ ಧರಿಸುವ ಸೀರೆಗಳಿಗೂ ನಾನಾ ಬಗೆಯ ಪ್ರಯೋಗಾತ್ಮಕ ಇಂಡೋ-ವೆಸ್ಟರ್ನ್‌ ಶೈಲಿಯ ಕಂಟೆಂಪರರಿ ಡಿಸೈನ್‌ (Contemporary Design) ಹೊಂದಿದ ಸೀರೆ ಬ್ಲೌಸ್‌ಗಳನ್ನು (Saree Blouse Fashion) ಧರಿಸುವುದು ಸಾಮಾನ್ಯವಾಗತೊಡಗಿದೆ.

ಚಿತ್ರಕೃಪೆ: ಪಿಕ್ಸೆಲ್‌

ಹೊಸ ರೂಪದಲ್ಲಿ ಬ್ಲೌಸ್‌ಗಳು

ಈ ಹಿಂದೆ ಸೀರೆ ಬ್ಲೌಸ್‌ ಎಂದರೆ ಅದನ್ನು ಹೊಲೆಸುವುದೇ ಒಂದು ಟಾಸ್ಕ್‌ ಆಗಿತ್ತು. ಅವು ನೋಡಲು ಗೌರವಯುತವಾಗಿ ಕಾಣುವಂತಹ ಡಿಸೈನ್‌ ಹೊಂದಿರುತ್ತಿದ್ದವು. ಆದರೆ, ಇದೀಗ ಕಂಪ್ಲೀಟ್‌ ಸೀರೆ ಬ್ಲೌಸ್‌ ಚಿತ್ರಣ ಬದಲಾಗಿದೆ. ಸೀರೆಗೆ ಮ್ಯಾಚಿಂಗ್‌ ಆಗಲಿ ಬಿಡಲಿ, ನೋಡಲು ಆಕರ್ಷಕವಾಗಿರಲಿ ಬಿಡಲಿ, ಬಿಂದಾಸ್‌ ಡಿಸೈನ್‌ ಹೊಂದಿದ ಕಂಟೆಂಪರರಿ ವಿನ್ಯಾಸದ ಬ್ಲೌಸ್‌ಗಳು ರೂಲ್ಸ್‌-ರೆಗ್ಯುಲೇಷನ್‌ ದಾಟಿ, ಹೊಸ ರೂಪದಲ್ಲಿ ಮಹಿಳೆಯರನ್ನು ಸಿಂಗರಿಸುತ್ತಿವೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ರೇಷ್ಮಾ.

ಕಂಟೆಂಪರರಿ ವೆರೈಟಿ ಬ್ಲೌಸ್‌ ವಿನ್ಯಾಸ

ಬ್ಯಾಕ್‌ಲೆಸ್‌, ಕಟೌಟ್‌, ಆಫ್‌ ಶೋಲ್ಡರ್‌, ಸ್ಕಿನ್‌ ಟೈಟ್‌ ಫುಲ್‌ ಸ್ಲೀವ್‌, ಹೈ ಕಾಲರ್‌ ನೆಕ್‌, ಬಟನ್‌ ಚೈನಾ ಕಾಲರ್‌ ನೆಕ್‌ಲೈನ್‌, ಲಾಂಗ್‌ ಲೆಂಥ್‌, ಶರ್ಟ್‌ ಬ್ಲೌಸ್‌, ಟಾಪ್‌ ಸ್ಟೈಲ್‌ ಬ್ಲೌಸ್‌ಗಳು ಚಾಲ್ತಿಯಲ್ಲಿವೆ. ಇನ್ನು, ಈ ಜನರೇಷನ್‌ನ ಹುಡುಗಿಯರಿಗೆ ಇಷ್ಟವಾಗುವಂತಹ ಇಂಡೋ-ವೆಸ್ಟರ್ನ್‌ ಶೈಲಿಯ ರೆಡಿಮೇಡ್‌ ಕ್ರಾಪ್‌ ಟಾಪ್‌ ಶೈಲಿಯ ಹಾಗೂ ನವನವೀನ ಎಂದೆನಿಸುವಂತಹ ಕಟೌಟ್‌ ಸೀರೆ ಬ್ಲೌಸ್‌ಗಳು ಪ್ರಿಯವಾಗಿವೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ದೀಕ್ಷಾ.

ಹಳೆ ಸೀರೆಗೂ ನ್ಯೂ ಲುಕ್‌ ನೀಡುವ ಬ್ಲೌಸ್‌ಗಳಿವು

ಇಂದು ಹಳೆಯ ಸೀರೆಗಳಿಗೆ ಕಂಟೆಂಪರರಿ ಬ್ಲೌಸ್‌ ಧರಿಸಿ ಹೊಸ ರೂಪ ನೀಡುವವರು ಹೆಚ್ಚಾಗಿದ್ದಾರೆ. ಇದರೊಂದಿಗೆ ವರ್ಕಿಂಗ್‌ ವುಮೆನ್‌ ಕೆಟಗರಿಯವರು ಕಂಟೆಪರರಿ ಡಿಸೈನ್‌ನಲ್ಲಿ ಪ್ರಯೋಗಾತ್ಮಕ ಬ್ಲೌಸ್‌ ಸ್ಟೈಲಿಂಗ್‌ ಮಾಡತೊಡಗಿದ್ದಾರೆ ಎನ್ನುತ್ತಾರೆ ಡಿಸೈನರ್‌ ಜೀವಿತಾ.

ಈ ಸುದ್ದಿಯನ್ನೂ ಓದಿ | Winter Fashion 2024: ಚಳಿಗಾಲದ ಫ್ಯಾಷನ್; ಏನಿದೆ ಹೊಸ ಟ್ರೆಂಡ್?

ಪರ್ಸನಾಲಿಟಿಗೆ ತಕ್ಕಂತಿರಲಿ ಕಂಟೆಂಪರರಿ ಬ್ಲೌಸ್‌

ಕಂಟೆಪರರಿ ವಿನ್ಯಾಸದ ಬ್ಲೌಸ್‌ ಧರಿಸುವವರ ಬಾಡಿ ಮಾಸ್‌ ಇಂಡೆಕ್ಸ್‌ಗೆ ತಕ್ಕಂತೆ ಧರಿಸಬೇಕು. ಇಲ್ಲವಾದಲ್ಲಿ ಒಂದಕ್ಕೊಂದು ಹೊಂದದೇ ನೋಡುಗರಿಗೆ ಮುಜುಗರವೆನಿಸಬಹುದು.
ಕುಳ್ಳಗಿರುವವರು ಆದಷ್ಟೂ ಕ್ರಾಪ್‌ ಟಾಪ್‌ ಶೈಲಿಯವನ್ನು, ಪಫ್‌ ಸ್ಲೀವ್‌, ಬಲೂನ್‌ ಸ್ಲೀವ್‌, ವೈಡ್‌ ನೆಕ್‌ಲೈನ್‌ ಇರುವಂತಹ ಕಂಟೆಂಪರರಿ ವಿನ್ಯಾಸದ ಬ್ಲೌಸ್‌ಗಳ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಉದ್ದಗಿರುವವರಿಗೆ ಯಾವುದಾದರೂ ಸರಿಯೇ ಮ್ಯಾಚ್‌ ಆಗುತ್ತದೆ.
ಉಡುವ ಸೀರೆಗೆ ಸೂಕ್ತವೆನಿಸುವ ವಿನ್ಯಾಸದ ಬ್ಲೌಸ್‌ ಆರಿಸಿಕೊಳ್ಳಿ.
ಮಾಡರ್ನ್‌ ಹುಡುಗಿಯರಿಗೆ ಪ್ರಯೋಗಾತ್ಮಕ ವಿನ್ಯಾಸದವು ಚೆನ್ನಾಗಿ ಕಾಣುತ್ತವೆ.
ಮೊದಲು ಟ್ರಯಲ್‌ ನೋಡಿ, ನಂತರ ಧರಿಸಿ.
ಸಂದರ್ಭಕ್ಕೆ ಸೂಟ್‌ ಆಗುವಂತಹದ್ದನ್ನು ಪ್ರಿಫರ್‌ ಮಾಡಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)