Wednesday, 6th November 2024

Vickypedia: ಒಂಟಿ ಹುಡುಗ-ಹುಡುಗಿಯರ ಆಂತಮ್‌ ವಿಕ್ಕಿಪೀಡಿಯ ವಿಕಾಸ್‌ನ ಈ ಸಾಂಗ್ಸ್‌; ವೈರಲ್‌ ಹಾಡು ಕೇಳಿದ್ದೀರಾ?

Vickypedia

ಬೆಂಗಳೂರು: ʼನಾನು ನಂದಿನಿ, ಬೆಂಗಳೂರು ಬಂದೀನಿʼ ಹಾಡಿನ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹವಾ ಎಬ್ಬಿಸಿದವರು ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ (Vickypedia) ಖ್ಯಾತಿಯ ವಿಕಾಸ್‌ (Vikas). ವಿಭಿನ್ನ, ಕಾಮಿಡಿ ವಿಡಿಯೊ ಮೂಲಕವೇ ಗಮನ ಸೆಳೆಯುತ್ತಿರುವ ಅವರು ಆಗಾಗ ವಿವಿಧ ಭಾಷೆಗಳ ಜನಪ್ರಿಯ ಹಾಡುಗಳಿಗೆ ಕನ್ನಡದ ಲಿರಿಕ್ಸ್‌ ಬರೆದು ಹೊಸದಾಗಿ ಪ್ರೆಸೆಂಟ್‌ ಮಾಡುವ ಮೂಲಕ ಲಕ್ಷಾಂತರ ಮಂದಿಯ ಮೊಗದಲ್ಲಿ ನಗು ಮೂಡಿಸುತ್ತಾರೆ. ಇದೀಗ ಅಂತಹದ್ದೇ ಹಾಡಿನೊಂದಿಗೆ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಇದೀಗ ಹೊಸ ಹಾಡು ಸಿಂಗಲ್‌ ಹುಡುಗ-ಹುಡುಗಿಯರ ಸುಪ್ರಭಾತ ಆಗಿ ಬದಲಾಗಿದೆ (Viral Video).

ʼಸಿಂಗಲ್ಸ್‌ ಬಾಯ್ಸ್‌, ಸಿಂಗಲ್‌ ಬಾಯ್ಸ್‌ʼ

ಸಿಂಗಲ್‌ ಹುಡುಗರಿಗಾಗಿಯೇ ರಚಿಸಿದ ಹಾಡು ಇದು. ʼಜಿಂಗಲ್‌ ಬೆಲ್ಸ್‌ʼ ಟ್ಯೂನ್‌ನಲ್ಲಿ ಈ ಹಾಡನ್ನು ಕಟ್ಟಿ ಕೊಡಲಾಗಿದೆ. ಇಂಗ್ಲಿಷ್‌ ಮತ್ತು ಕನ್ನಡ ಪದಗಳನ್ನು ಬಳಸಿ ಈ ಹಾಡನ್ನು ರಚಿಸಲಾಗಿದೆ. ಒಂಟಿ ಹುಡುಗರ ಜೀವನ ಶೈಲಿ, ಬವಣೆ, ಜಾಲಿ ಇತ್ಯಾದಿಗಳನ್ನು ಬಹಳ ಮಜವಾಗಿ ತಿಳಿಸಲಾಗಿದೆ. ʼಸಿಂಗಲ್‌ ಬಾಯ್ಸ್‌ ಸಿಂಗಲ್‌ ಬಾಯ್ಸ್‌, ಸಿಂಗಲ್‌ ಆಲ್‌ ದಿ ವೇʼ ಎಂದು ಈ ಹಾಡು ಆರಂಭವಾಗುತ್ತದೆ. ಹಾಡನ್ನು ಅನೂಪ್‌ ಸುಧೀ ರಚಿಸಿದ್ದು, ತೇಜಸ್‌ ನಿರ್ದೇಶಿಸಿದ್ದಾರೆ. ಅಮಿತ್‌ ಚಿಟ್ಟೆ ಕೊರಿಯೋಗ್ರಫಿ ಇದ್ದು, ವಿವೇಕ್‌ ಕ್ಯಾಮೆರಾ ನಿರ್ವಹಿಸಿದ್ದಾರೆ. ಸಚಿತ್‌ ಕ್ಲಾರೆ ಹಾಡಿರುವ ಜತೆಗೆ ಸಂಗೀತ ನೀಡಿದ್ದಾರೆ. ಈ ಹಾಡು ಇಲ್ಲಿದೆ.

ʼಸಿಂಗಲ್ ಗರ್ಲ್ಸ್, ಸಿಂಗಲ್ ಗರ್ಲ್ಸ್ʼ

ಇದೇ ರೀತಿ ಒಂಟಿ ಹುಡುಗಿಯರಾಗಿ ರಚಿಸಿದ ಹಾಡು ʼಸಿಂಗಲ್ ಗರ್ಲ್ಸ್. ಸಿಂಗಲ್ ಗರ್ಲ್ಸ್ʼ. ಜಿಂಗಲ್‌ ಬೆಲ್‌ ರೈಮ್ಸ್‌ನ ಟ್ಯೂನ್‌ಗೆ ಈ ಹಾಡನ್ನೂ ರಚಿಸಲಾಗಿದೆ. ಈ ಹಾಡಿನಲ್ಲಿ ಹುಡುಗಿಯರು ಮದುವೆಯಾಗದೇ ಇರಲು ಕಾರಣವನ್ನು ವಿಕಾಸ್ ತಿಳಿಸಿದ್ದಾರೆ. ಮದುವೆಯಾಗದೇ ಇರುವ ಹುಡುಗಿಯ ಆಸೆ ಏನು? ಮದುವೆ ಯಾಕಾಗಿ ಆಗಲ್ಲ? ಅವಳ ಗುರಿ ಏನು ಎನ್ನುವ ಬಗ್ಗೆ ತಿಳಿಸಿದ್ದಾರೆ. ಬಹಳ ತಮಾಷೆಯಾಗಿ ಗಂಭೀರ ವಿಚಾರವನ್ನು ಪ್ರಸ್ತುತ ಪಡಿಸಿರುವ ರೀತಿ ಗಮನ ಸೆಳಯುತ್ತಿದೆ. ಈ ಹಾಡನ್ನೂ ʼಸಿಂಗಲ್ಸ್‌ ಬಾಯ್ಸ್‌, ಸಿಂಗಲ್‌ ಬಾಯ್ಸ್‌ʼ ಹಾಡು ರಚಿಸಿದ ಅದೇ ಟೀಂ ಪ್ರಸ್ತುತಪಡಿಸಿದೆ.

ಸದ್ಯ ಈ ಎರಡೂ ಹಾಡಿಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ವಿಕ್ಕಿಪೀಡಿಯಾ ಅವರ ಕ್ರಿಯೇಟಿವಿಟಿ ನೆಟ್ಟಿಗರ ಮನ ಗೆದ್ದಿದೆ. ಈಗಾಗಲೇ ಈ ವಿಡಿಯೊಗಳನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ.

ತಮಾಷೆ ಮೂಲಕ ಪಾಠ

ತಮಾಷೆ ಮೂಲಕವೇ ನೀತಿ ಪಾಠ ಬೋಧಿಸುವುದು ವಿಕ್ಕಿಪೀಡಿಯಾ ಅವರ ವೈಶಿಷ್ಟ್ಯ. ಬೆಂಗಳೂರಿನಲ್ಲಿ ನೆರೆ ಕಾಣಿಸಿಕೊಂಡಾಗ ʼಕೃಷ್ಣ ಪ್ರಯಣ ಸಖಿʼ ಚಿತ್ರದ ʼದ್ವಾಪರಾ ದಾಟುತಾʼ ಧಾಟಿಯಲ್ಲಿ ʼಮೋರಿ ಉಕ್ಕೈತೆʼ ಹಾಡು ರಚಿಸಿದ್ದರು. ಜತೆಗೆ ದೀಪಾವಳಿ ಮತ್ತು ದಿವಾಳಿ ವ್ಯತ್ಯಾಸವನ್ನು ಬಹಳ ಮಾರ್ಮಿಕವಾಗಿ ತಿಳಿಸಿದ್ದರು. ಮಾತ್ರವಲ್ಲ ಕರ್ನಾಟಕ ರಾಜ್ಯೋತ್ಸವದಂದು ʼಆಪ್ತಮಿತ್ರʼ ಚಿತ್ರದ ನಾಗವಲ್ಲಿ ದೃಶ್ಯವನ್ನು ಬಳಸಿ ಕನ್ನಡದ ಮಹತ್ವ ಸಾರಿದ್ದರು. ಹೀಗೆ ಪ್ರತಿ ಬಾರಿಯೂ ಸಂದರ್ಭಕ್ಕೆ ತಕ್ಕಂತೆ ವಿವಿಧ ಸನ್ನಿವೇಶ ಬಳಿಸಿ ವಿಶಿಷ್ಟ ವಿಡಿಯೊ ಮೂಲಕ ನೋಡುಗರ ಗಮನ ಸೆಳೆಯುತ್ತಾರೆ.

ಈ ಸುದ್ದಿಯನ್ನೂ ಓದಿ: Actor Darshan: ಜೀವ ಬೆದರಿಕೆ; ನಟ ದರ್ಶನ್‌, ಅಭಿಮಾನಿಗಳ ವಿರುದ್ಧ ಲಾಯರ್‌ ಜಗದೀಶ್‌ ದೂರು