Sunday, 24th November 2024

Celebrity Travel Fashion: ವಿಂಟರ್‌ ಟ್ರಾವೆಲ್‌ ಫ್ಯಾಷನ್‌‌‌ಗೆ ಕನ್ನಡದ ಪಾಪ್‌ ಐಕಾನ್‌ ಸಂಗೀತಾ ಸಿಂಪಲ್‌ ಸಲಹೆ ಹೀಗಿದೆ

Celebrity Travel Fashion

ಸಂದರ್ಶನ: ಶೀಲಾ ಸಿ. ಶೆಟ್ಟಿ

ಕನ್ನಡದ ಪಾಪ್‌ ಐಕಾನ್‌ ಸಂಗೀತಾ ಎಸ್‌. ರಾಜೀವ್‌, ತಮ್ಮ ಸ್ವಿಟ್ಜರ್‌ಲ್ಯಾಂಡ್‌ ಪ್ರವಾಸದಲ್ಲಿ, ಕೊರೆಯುವ ಚಳಿಯಲ್ಲೂ, ವಿಂಟರ್‌ ಟ್ರಾವೆಲ್‌ ಫ್ಯಾಷನ್‌ನಲ್ಲಿ (Celebrity Travel Fashion) ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಟ್ರಾವೆಲ್‌ ಲುಕ್‌ ಈ ಸೀಸನ್‌ಗೆ ಮ್ಯಾಚ್‌ ಆಗಿರುವುದು ಮಾತ್ರವಲ್ಲ, ಟ್ರೆಂಡಿಯಾಗಿಯೂ ಇದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು.

ಚಿತ್ರಗಳು: ಸಂಗೀತಾ ಎಸ್‌. ರಾಜೀವ್‌, ಕನ್ನಡ ಪಾಪ್‌ ಐಕಾನ್‌

ಅಂದಹಾಗೆ, ಕನ್ನಡದ ಪಾಪ್‌ ಸ್ಟಾರ್‌, ಪಾಪ್‌ ಐಕಾನ್‌ ಎಂದೇ ಹೆಸರು ಮಾಡಿರುವ ಯುವ ಗಾಯಕಿ ಸಂಗೀತಾ ಎಸ್‌. ರಾಜೀವ್‌, ಈಗಾಗಲೇ ಸಾಕಷ್ಟು ಕನ್ನಡದ ಪಾಪ್‌ ಆಲ್ಬಂಗಳನ್ನು ಮಾಡುವುದರ ಮೂಲಕ ಯುವ ಜನಾಂಗವನ್ನು ಸೆಳೆದಿದ್ದಾರೆ. ಅಪ್ಪಟ ಕನ್ನಡದ ಹಾಡುಗಳನ್ನು ಪಾಪ್‌ ಶೈಲಿಯಲ್ಲಿ, ಹೆಜ್ಜೆ ಹಾಕುತ್ತಲೇ ಹಾಡುವ ಸಂಗೀತಾ, ವಿಶ್ವವಾಣಿ ನ್ಯೂಸ್‌ನೊಂದಿಗೆ ತಮ್ಮ ಟ್ರಾವೆಲ್‌ ಫ್ಯಾಷನ್‌ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೇ, ಓದುಗರಿಗೆ ವಿಂಟರ್‌ ಟ್ರಾವೆಲ್‌ ಫ್ಯಾಷನ್‌ ಟಿಪ್ಸ್ ಕೂಡ ನೀಡಿದ್ದಾರೆ.

ನಿಮ್ಮ ಟ್ರಾವೆಲ್‌ ಫ್ಯಾಷನ್‌ನಲ್ಲಿ ಏನೇನಿದೆ?

ಮೊದಲಿಗೆ ಕಂಫರ್ಟ್ ಉಡುಪುಗಳಿಗೆ ಆದ್ಯತೆ ನೀಡುತ್ತೇನೆ. ಚಳಿಗಾಲದಲ್ಲಿ ಲೇಯರ್‌ ಲುಕ್‌, ಕೋಟ್ಸ್, ಶ್ರಗ್ಸ್, ಶಾಲ್‌ಗಳು ಸೇರಿಕೊಂಡಿವೆ.

ನಿಮ್ಮ ಯೂನಿಕ್‌ ಫ್ಯಾಷನ್‌?

ಎಂದಿಗೂ ಬದಲಾಗದ ನನ್ನ ಕ್ಲಾಸಿ ಲುಕ್‌!

ನಿಮ್ಮ ಟ್ರಾವೆಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಏನು?

ಸೀಸನ್‌ಗೆ ತಕ್ಕಂತೆ ಪ್ರಚಲಿತದಲ್ಲಿರುವಂತಹ ಟ್ರೆಂಡ್ಸ್, ಮಾನೋಕ್ರೋಮಾಟಿಕ್‌ ಔಟ್‌ಫಿಟ್ಸ್ ಜತೆಗೆ ಸಸ್ಟೈನಬಲ್‌ ಫ್ಯಾಬ್ರಿಕ್‌ ಫ್ಯಾಷನ್‌ ನನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿದೆ.

ಟ್ರಾವೆಲ್‌ ಮಾಡುವಾಗಲೂ ಆಕರ್ಷಕವಾಗಿ ಕಾಣಿಸಲು ಏನು ಮಾಡಬೇಕು?

ನಮ್ಮ ಪರ್ಸನಾಲಿಟಿಗೆ ಹೊಂದುವಂತಹ ಔಟ್‌ಫಿಟ್‌ ಆಯ್ಕೆ ಹಾಗೂ ನಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ತಕ್ಕಂತೆ ನಮ್ಮ ಲುಕ್‌ ಮಾರ್ಪಡಿಸಿಕೊಂಡಾಗ ಆಕರ್ಷಕವಾಗಿ ಕಾಣಿಸಬಹುದು.

ಈ ಸುದ್ದಿಯನ್ನೂ ಓದಿ | Saree Blouse Fashion: ಪ್ರಯೋಗಾತ್ಮಕ ಸೀರೆ ಪ್ರಿಯರನ್ನು ಸೆಳೆದ ಕಂಟೆಂಪರರಿ ಬ್ಲೌಸ್‌ ಫ್ಯಾಷನ್‌

ವಿಂಟರ್‌ ಟ್ರಾವೆಲ್‌ ಫ್ಯಾಷನ್‌ ಪ್ರಿಯರಿಗೆ ನೀವು ನೀಡುವ 5 ಸಿಂಪಲ್‌ ಸಲಹೆಗಳೇನು?

1) ಲೈಟ್‌ವೈಟ್‌ ಲೇಯರ್‌ ಲುಕ್‌ಗೆ ಪ್ರಾಮುಖ್ಯತೆ ನೀಡಿ.
2) ಸೀಸನ್‌ಗೆ ಹೊಂದುವ ಫುಟ್‌ವೇರ್‌ ಧರಿಸಿ.
3) ಚಳಿಗಾಲದಲ್ಲೂ ನೀರನ್ನು ಕುಡಿಯುವುದನ್ನು ಮರೆಯಬೇಡಿ.
4) ಸ್ಟೈಲಿಶ್‌ ಆಗಿ ಕಾಣಿಸಲು ಸೀಸನ್‌ಗೆ ತಕ್ಕ ಆಕ್ಸೆಸರೀಸ್‌ ಧರಿಸಿ.
5) ಸ್ಟೇಟ್‌ಮೆಂಟ್‌ ಕೋಟ್‌ ನಿಮ್ಮ ಜತೆಗಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)