Sunday, 24th November 2024

Good News: SC, ST ವಿದ್ಯಾರ್ಥಿಗಳ ಪ್ರೋತ್ಸಾಹಧನ 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಳ

Government Jobs

ಬೆಂಗಳೂರು: ರಾಜ್ಯ ಸರ್ಕಾರದಿಂದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ (Good News) ನೀಡಲಾಗಿದೆ. ಐಐಟಿ ಸೇರಿ ಇತರೆ ಸಂಸ್ಥೆಗಳಲ್ಲಿ ಪ್ರವೇಶ (Education news) ಪಡೆಯುವವರಿಗೆ ನೀಡುವ ಪ್ರೋತ್ಸಾಹಧನವನ್ನು (Incentives) ರೂ.1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ.

ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಾದ ಐ.ಐ.ಟಿ /ಐ.ಐ.ಎಂ/ಐ.ಐ.ಎಸ್.ಸಿ/ಎನ್.ಐ.ಟಿ ಮುಂತಾದ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಒಂದು ಬಾರಿ ನೀಡುವ ಪ್ರೋತ್ಸಾಹಧನವನ್ನು ರೂ.1.00 ಲಕ್ಷಗಳಿಂದ ರೂ.2.00 ಲಕ್ಷಗಳಿಗೆ ಹೆಚ್ಚಿಸಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

ಪಿ.ಯು.ಸಿಯಲ್ಲಿ ಶೇಕಡ 95 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು NEET ಮೂಲಕ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯದೆ, ಆಡಳಿತ ಮಂಡಳಿಯ ಕೋಟಾದಡಿ MBBSಗೆ ಪ್ರವೇಶ ಪಡೆದಿರುವ ಪ್ರತಿಭಾನ್ವಿತ ಪರಿಶಿಷ್ಟ ಜಾತಿ ವಿದ್ಯಾಥಿಗಳಿಗೆ ಮೊದಲನೇ ವರ್ಷದಲ್ಲಿ ರೂ. 25.00 ಲಕ್ಷಗಳನ್ನು ಕಾಲೇಜು ಶುಲ್ಕವಾಗಿ ಪಾವತಿಸಲಿದೆ.

ವಿದ್ಯಾರ್ಥಿಯು MBBS ಮೊದಲನೇ ವರ್ಷದ ಪರೀಕ್ಷೆಯಲ್ಲಿ ಕನಿಷ್ಟ ಶೇಕಡ 60 ಅಂಕಗಳನ್ನು ಪಡೆದು ತೇರ್ಗಡೆಯಾದಲ್ಲಿ, ಪುನಃ ರೂ.25.00 ಲಕ್ಷಗಳ ಪ್ರೋತ್ಸಾಹಧನವನ್ನು ಮಂಜೂರು ಮಾಡುವ ಅಂಶವನ್ನು ಸೇರ್ಪಡೆ ಮಾಡಿ ಆದೇಶಿಸಲಾಗಿದೆ.