Thursday, 7th November 2024

Fire Accident: ಸ್ಟೀಲ್‌ ಕಂಪನಿಯಲ್ಲಿ ಬೆಂಕಿ ಅವಘಡ; 16 ಕಾರ್ಮಿಕರ ಸ್ಥಿತಿ ಗಂಭೀರ

Fire incident

ಮುಂಬೈ: ಮಹಾರಾಷ್ಟ್ರದ (Maharashtra) ವಾರ್ಧಾ (Wardha) ಜಿಲ್ಲೆಯ ಭುಗಾಂವ್ ಸ್ಟೀಲ್ ಕಂಪನಿಯಲ್ಲಿ ಬುಧವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ (Fire Accident) 16 ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿದ ತಕ್ಷಣ ಕೂಡಲೇ ಸ್ಥಳಕ್ಕೆ ಬಂದ ಆಡಳಿತ ಮಂಡಳಿ ಬೆಂಕಿಯನ್ನು ಹತೋಟಿಗೆ ತಂದಿದೆ.

ವಾರ್ಧಾ ಜಿಲ್ಲೆಯ ಭುಗಾಂವ್ ಸ್ಟೀಲ್ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 16 ಕಾರ್ಮಿಕರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ವಿಚಾರಣೆ ನಡೆಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಹೇಗೆ ಬೆಂಕಿ ತಗುಲಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ವಾರ್ಧಾ ಜಿಲ್ಲಾಧಿಕಾರಿ ರಾಹುಲ್‌ ಕಾರ್ಡಿಲ್‌ ಹೇಳಿದರು.

ಇತ್ತೀಚೆಗೆ ಹಲವು ಕಡೆ ಇದೇ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾನುವಾರ ದೆಹಲಿಯ ಕೀರ್ತಿ ನಗರದಲ್ಲಿರುವ ಪೀಠೋಪಕರಣ ಮಳಿಗೆಗೆ ಬೆಂಕಿ ತಗುಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ರಾತ್ರಿ ಸಮಯದಲ್ಲಿ ಬೆಂಕಿ ತಗುಲಿದೆ ಮಳಿಗೆಯ ಒಳಗೆ ಮಲಗಿದ್ದವರು ಹೊಗೆಯಿಂದ ಉಸಿರಾಡಲಾಗದೆ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ಅಂಜಗಢದ ಅತುಲ್‌ ರಾಯ್‌ ಹಾಗೂ ಬಿಹಾರದ ಗಯಾದ ನಂದಕಿಶೋರ್‌ ದುಬೆ ಎಂದು ಗುರುತಿಸಲಾಗಿದೆ.

ಕೊಲ್ಕತ್ತಾದಲ್ಲಿ ದೀಪಾವಳಿ ಸಮಯದಲ್ಲಿ ಬೆಂಕಿ ಅಪಘಾತ ಸಂಭವಿಸಿ ಮೂರು ಮಕ್ಕಳು ಬಲಿಯಾದ ಹೃದಯ ವಿದ್ರಾವಕ ಘಟನೆ ನಡೆದಿದೆ. ಕೊಲ್ಕತ್ತಾದ ಹೌರಾದಲ್ಲಿ ಈ ಘಟನೆ ನಡೆದಿದ್ದು ಮೊದಲು ಮನೆಗೆ ಬೆಂಕಿ ತಗುಲಿತ್ತು ನಂತರ ಪಕ್ಕದಲ್ಲಿದ್ದ ಕಿರಾಣಿ ಅಂಗಡಿಗೆ ಬೆಂಕಿ ತಗುಲಿದೆ. ಅಲ್ಲಿದ್ದ ಪಟಾಕಿಗಳಿಗೆ ಬೆಂಕಿ ತಗುಲಿದೆ. ಅಲ್ಲೇ ಆಟವಾಡುತ್ತಿದ್ದ ಮೂರು ಮಕ್ಕಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ : Viral Video: ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಇಟ್ಟ ದುಷ್ಕರ್ಮಿಗಳು; ಎಲ್ಲೆಡೆಯಿಂದ ಛೀಮಾರಿ

ಕಾಶ್ಮೀರದ ಮಸೀದಿಯೊಂದರಲ್ಲಿ ಬೆಂಕಿ ತಗುಲಿದ ಘಟನೆ ನಡೆದಿದೆ ನವೆಂಬರ್‌ 1 ರಂದು ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಖಾನ್‌ಬಾಲ ಪ್ರದೇಶದಲ್ಲಿದ್ದ ಮಸೀದಿಗೆ ಬೆಂಕಿ ತಗುಲಿ ಮಸೀದಿ ಸೇರಿದಂತೆ ಸುತ್ತಲಿನ ವಸತಿ ಪ್ರದೇಶ ಸುಟ್ಟು ಕರಕಲಾಗಿದ್ದವು. ಘಟನೆಯಲ್ಲಿ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.