ದೀರ್ಘಕಾಲ ಉಳಿತಾಯ ಮಾಡಬೇಕು ಎನ್ನುವ ಯೋಚನೆ ಇದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank of India) ಎರಡು ಸ್ಥಿರ ಠೇವಣಿ (SBI FD scheme) ಯೋಜನೆಗಳಿವೆ. 400 ದಿನಗಳ ಎಸ್‌ಬಿಐ ಅಮೃತ್ ಕಲಶ್ (SBI Amrit Kalash) ಮತ್ತು 444 ದಿನಗಳ ಎಸ್‌ಬಿಐ ಅಮೃತ್ ವೃಷ್ಟಿ (SBI Amrit Vrishti) ಈ ಯೋಜನೆಗಳಾಗಿವೆ.
ಅಮೃತ್ ಕಲಶ್ ಮತ್ತು ಅಮೃತ್ ವೃಷ್ಟಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಈ ಎರಡು ಯೋಜನೆಗಳ ನಡುವೆ ಇರುವ ವ್ಯತ್ಯಾಸವೇನು, ಯಾರಿಗೆ ಯಾವುದು ಹೆಚ್ಚು ಲಾಭದಾಯಕ ಎಂಬುದನ್ನು ತಿಳಿದುಕೊಳ್ಳಬೇಕು. ಅಮೃತ್ ಕಲಶ್ ಸ್ಥಿರ ಠೇವಣಿ ಯೋಜನೆ ಮತ್ತು ಅಮೃತ್ ವೃಷ್ಟಿ ಯೋಜನೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಪ್ರಮುಖ ಸ್ಥಿರ ಠೇವಣಿ ಯೋಜನೆಗಳಾಗಿವೆ. ಎಸ್‌ಬಿಐ ಅಮೃತ್ ಕಲಶ್ ನಲ್ಲಿ 400 ದಿನಗಳವರೆಗೆ ಮತ್ತು ಎಸ್‌ಬಿಐ ಅಮೃತ್ ವೃಷ್ಟಿಯಲ್ಲಿ 444 ದಿನಗಳವರೆಗೆ ಹೂಡಿಕೆ ಮಾಡಬಹುದಾಗಿದೆ.
ಎಸ್‌ಬಿಐ ಅಮೃತ್ ಕಲಶ್
ಇದು 400 ದಿನಗಳ ಸ್ಥಿರ ಠೇವಣಿ ಯೋಜನೆಯಾಗಿದ್ದು, ಇದರಲ್ಲಿ ಸಾಮಾನ್ಯ ಗ್ರಾಹಕರು ಹೂಡಿಕೆಯ ಮೇಲೆ ಗರಿಷ್ಠ ಶೇ. 7.10ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಹಿರಿಯ ನಾಗರಿಕರು ಹೆಚ್ಚುವರಿ 50 ಬೇಸಿಸ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ. ಅಂದರೆ ಈ ಯೋಜನೆಯಲ್ಲಿ ಅವರು ಶೇ. 7.60ರಷ್ಟು ಬಡ್ಡಿಯನ್ನು ಪಡೆಯುತ್ತಾರೆ. ಈ ಯೋಜನೆಯಡಿ ಗ್ರಾಹಕರು ಗರಿಷ್ಠ 2 ಕೋಟಿ ರೂ. ವರೆಗೆ ಠೇವಣಿ ಮಾಡಬಹುದು.
ಎಸ್‌ಬಿಐ ಅಮೃತ್ ಕಲಶ್ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಗ್ರಾಹಕರು ಹತ್ತಿರದ ಶಾಖೆಗೆ ಭೇಟಿ ನೀಡಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಅನಂತರ ಬ್ಯಾಂಕ್‌ನಿಂದ ಈ ಯೋಜನೆಗಾಗಿ ಫಾರ್ಮ್ ಅನ್ನು ಪಡೆದು ಭರ್ತಿ ಮಾಡಿ ನೀಡಬೇಕು. ಬಳಿಕ ಈ ಖಾತೆಯನ್ನು ತೆರೆಯಲಾಗುತ್ತದೆ.
ಅಮೃತ್ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಲು 2025ರ ಮಾರ್ಚ್ 31ರವರೆಗೆ ಅವಕಾಶವಿದೆ.
ಈ ವಿಶೇಷ ಎಫ್‌ಡಿಯಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿದರೆ ಮೆಚ್ಯೂರಿಟಿ ಅವಧಿಯಲ್ಲಿ ಒಟ್ಟು 3,24,053 ರೂ. ಅನ್ನು ಪಡೆಯಬಹುದು.
ಅಮೃತ್ ವೃಷ್ಟಿ ಯೋಜನೆ
ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯು 444 ದಿನಗಳ ಅವಧಿಯನ್ನು ಹೊಂದಿದೆ. ಇದರಲ್ಲಿ ಸಾಮಾನ್ಯ ನಾಗರಿಕರು ಶೇ.7.25 ಮತ್ತು ಹಿರಿಯ ನಾಗರಿಕರು ಶೇ.7.75 ಬಡ್ಡಿ ದರದ ಲಾಭವನ್ನು ಪಡೆಯಬಹುದು.
ದೇಶೀಯ ಮತ್ತು ಎನ್ ಆರ್ ಐ ಗ್ರಾಹಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರಾಗಿರುತ್ತಾರೆ.
ಹಿರಿಯ ನಾಗರಿಕರು 3 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಶೇ. 7.75 ಬಡ್ಡಿಯೊಂದಿಗೆ 29,789 ರೂ. ಹೆಚ್ಚುವರಿಯಾಗಿ ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಹತ್ತಿರದ ಶಾಖೆಗೆ ಭೇಟಿ ನೀಡಬಹುದು. ಇದಕ್ಕಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದರ ಅನಂತರ ಬ್ಯಾಂಕ್‌ನಿಂದ ಈ ಯೋಜನೆಗಾಗಿ ಫಾರ್ಮ್ ಅನ್ನು ಪಡೆದು ಭರ್ತಿ ಮಾಡಿ ನೀಡಬೇಕು. ಬಳಿಕ ಈ ಖಾತೆಯನ್ನು ತೆರೆಯಲಾಗುತ್ತದೆ.