-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಚಳಿಗಾಲದಲ್ಲಿ ವೈವಿಧ್ಯಮಯ (Winter Fashion) ಕಲರ್‌ಫುಲ್ ಉಲ್ಲನ್‌ನ ನಿಟ್ಟೆಡ್ ಸ್ವೆಟರ್‌ಗಳು ವೈಬ್ರೆಂಟ್ ಶೇಡ್ಸ್‌ನಲ್ಲಿ ಎಂಟ್ರಿ ನೀಡಿವೆ. ಊಹೆಗೂ ಮೀರಿದ ಡಿಸೈನ್‌ನಲ್ಲಿ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ, ಮಿಕ್ಸ್ ಮ್ಯಾಚ್ ಕಾಂಟ್ರಾಸ್ಟ್ ಹಾಗೂ ವಿಂಟರ್ ಮಲ್ಟಿ ಶೇಡ್‌ಗಳಲ್ಲಿ ಬಿಡುಗಡೆಯಾಗಿವೆ.
ಟ್ರೆಂಡಿಯಾಗಿರುವ ಡಿಸೈನ್‌ಗಳು
ನಿಯಾನ್ ಕಲರ್‌ನ ತ್ರೀ ಫೋರ್ತ್ ಸ್ಲೀವ್, ಕೋಲ್ಡ್ ಶೋಲ್ಡರ್, ಆಫ್ ಶೋಲ್ಡರ್, ಬಾರ್ಡಟ್ ಡಿಸೈನ್, ಬಾಡಿಕಾನ್, ಫುಲ್ ಸ್ಲೀವ್, ಟರ್ಟಲ್ ನೆಕ್, ಓವರ್‌ಸೈಝ್, ಕೊರಿಯನ್ ಲೂಸ್ ಸ್ಟೈಲ್, ಕೇಬಲ್ ವೈರ್ ನಿಟ್ಟೆಡ್ ಸ್ಟೈಲ್, ಅಸ್ಸೆಮ್ಮೆಟ್ರಿಕಲ್ ಶೇಪ್‌ನ ಕ್ರಾಪ್ಡ್ ಉಲ್ಲನ್ ಸ್ವೆಟರ್, ಪುಲ್‌ಓವರ್ ಸ್ಟೈಲ್, ಹಾಲ್ಟರ್ ನೆಕ್, ಕ್ರಾಪ್ ಟಾಪ್ ಶೈಲಿಯವು ಬಣ್ಣಬಣ್ಣದ ನಿಟ್‌ವೇರ್‌ನಲ್ಲಿ ಲಗ್ಗೆ ಇಟ್ಟಿವೆ.
ಓವರ್‌ಸೈಝ್ ಸ್ವೆಟರ್ ಫ್ಯಾಷನ್
ಮೊದಲೆಲ್ಲಾ ದೊಗಲೆ ಸ್ವೆಟರ್ ಎಂದರೇ ಮೂಗು ಮುರಿಯುತ್ತಿದ್ದವರು ಇದೀಗ ಈ ಫ್ಯಾಷನ್‌ಗೆ ತಕ್ಕಂತೆ ಓವರ್ ಸೈಝ್ ಹಾಗೂ ಡ್ರಾಪ್ ಶೋಲ್ಡರ್ ಸ್ವೆಟರ್‌ಗಳನ್ನು ಧರಿಸತೊಡಗಿದ್ದಾರೆ. ಅದರಲ್ಲೂ ಕಾಲೇಜು ಹುಡುಗಿಯರು ಈ ಶೈಲಿಯ ಸ್ಟೆಟರ್‌ಗಳನ್ನು ಧರಿಸತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್ ಹಾಗೂ ರಿಯಾ.
ಬಟನ್ ಹಾಗೂ ಟಾಪ್ ಶೈಲಿಯ ಉಲ್ಲನ್ ಸ್ವೆಟರ್‌ಗಳಿಗೆ ಡಿಮ್ಯಾಂಡ್
ಎಥ್ನಿಕ್ ಡ್ರೆಸ್‌ಗಳಿಗೆ ಬಟನ್ ಧರಿಸಬಹುದಾದ ಬಟನ್ ಸ್ವೆಟರ್ ನಿಟ್‌ವೇರ್‌ಗಳು, ವೆಸ್ಟರ್ನ್ ಲುಕ್ ನೀಡುವ ಪ್ಯಾಂಟ್ ಹಾಗೂ ಸ್ಕರ್ಟ್‌ಗಳಿಗೆ ಧರಿಸಬಹುದಾದ ಟಾಪ್ ಶೈಲಿಯ ಸ್ವೆಟರ್‌ಗಳಿಗೆ ಇದೀಗ ಮೊದಲಿಗಿಂತ ಡಿಮ್ಯಾಂಡ್ ಹೆಚ್ಚಾಗಿದೆ. ಟಾಪ್‌ನಂತಹ ಡಿಸೈನ್‌ನಲ್ಲಿ ಬಿಡುಗಡೆಗೊಂಡಿರುವಂತವು ಕಾಲೇಜು ಹುಡುಗಿಯರ ಫೇವರೇಟ್ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರೀತು. ಅವರ ಪ್ರಕಾರ, ಉಲ್ಲನ್‌ನ ಡಿಸೈನರ್ ಸ್ವೆಟರ್‌ಗಳು ಈ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುವುದರೊಂದಿಗೆ ಆಕರ್ಷಕವಾಗಿ ಬಿಂಬಿಸುತ್ತವೆ ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Winter Makeup Awareness: ಚಳಿಗಾಲದಲ್ಲಿ ಮೇಕಪ್ ಪ್ರಿಯರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳಿವು
ಉಲ್ಲನ್ ಸ್ವೆಟರ್ ಆಕರ್ಷಕವಾಗಿ ಧರಿಸುವುದು ಹೀಗೆ
- ಟಾಪ್ ಶೈಲಿಯವು ಯಾವುದೇ ಬಗೆಯ ಪ್ಯಾಂಟ್ ಜತೆಗೂ ಇವು ಮ್ಯಾಚ್ ಆಗುತ್ತವೆ.
- ಕಲರ್‌ಫುಲ್ ಉಲ್ಲನ್ ಸ್ವೆಟರ್‌ಗಳು ಫಂಕಿ ಲುಕ್ ನೀಡುತ್ತವೆ.
- ಉಲ್ಲನ್ ಸ್ವೆಟರ್ ಜೊತೆಗೆ ಹೆವ್ವಿ ಆಕ್ಸೆಸರೀಸ್ ಆವಾಯ್ಡ್ ಮಾಡಿ.
- ಹೈ ವೇಸ್ಟ್ ಪ್ಯಾಂಟ್‌ಗೆ ಕ್ರಾಪ್ ಉಲ್ಲನ್ ಸ್ವೆಟರ್ ಧರಿಸಬಹುದು.
- ಮಲ್ಟಿ ಶೇಡ್‌ನವು ಎಲ್ಲಾ ಉಡುಗೆಗಳಿಗೂ ಮ್ಯಾಚ್ ಆಗುತ್ತವೆ.
- ಬಟನ್ ಶೈಲಿಯವು ಫಾಮರ್ಲ್ಸ್ ಹಾಗೂ ಎಥ್ನಿಕ್ ಉಡುಪುಗಳಿಗೆ ಹೊಂದುತ್ತವೆ.
- ಮಕ್ಕಳಿಗೆ ಬಣ್ಣಬಣ್ಣದ ಉಲ್ಲನ್ ಸ್ವೆಟರ್ ಬೆಸ್ಟ್ ಆಯ್ಕೆ.
- ಲೈಟ್‌ವೈಟ್ ಸ್ವೆಟರ್ ಧರಿಸಿದಲ್ಲಿ ಸೆಕೆಯಾಗದು.
- ಸಿಂಪಲ್ ಲುಕ್ ಆಕರ್ಷಕವಾಗಿ ಬಿಂಬಿಸಬಲ್ಲದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)