ಸಾಮಾಜಿಕ ಮಾಧ್ಯಮಗಳ (social media) ಬಳಕೆಗೆ ಆಸ್ಟ್ರೇಲಿಯಾವು ವಯಸ್ಸಿನ ಮಿತಿಯನ್ನು ನಿಗದಿಪಡಿಸುವ ಪ್ರಸ್ತಾಪವನ್ನು ಇಟ್ಟಿದೆ. ಯುವ ಜನರ ಮಾನಸಿಕ ಆರೋಗ್ಯವನ್ನು ರಕ್ಷಿಸುವ ಸಲುವಾಗಿ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ನಿಷೇಧಿಸಲಾಗುವುದು (Age Limit for Using Social Media) ಎಂದು ಆಸ್ಟ್ರೇಲಿಯಾದ ಪ್ರಧಾನಿ (Australian Prime Minister) ಆಂಥೋನಿ ಅಲ್ಬನೀಸ್ (Anthony Albanese) ಗುರುವಾರ ಘೋಷಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಕಂಪನಿಗಳು ಹೊಸ ನಿಯಮಗಳನ್ನು ಜಾರಿಗೊಳಿಸಬೇಕು. ತಪ್ಪಿದರೆ ದಂಡವನ್ನು ತೆರಬೇಕಾಗುತ್ತದೆ ಎಂದು ಅವರು ಅವರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮವು ಮಕ್ಕಳಿಗೆ ಹಾನಿ ಉಂಟು ಮಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಲು ಈ ತಿಂಗಳ ಕೊನೆಯಲ್ಲಿ ಕಾನೂನನ್ನು ಪರಿಚಯಿಸುವುದಾಗಿ ಅವರು ತಿಳಿಸಿದರು.
ಸಾಮಾಜಿಕ ಮಾಧ್ಯಮದೊಳಗೆ ಅವರ ಪ್ರವೇಶವನ್ನು ತಡೆಗಟ್ಟಲು ಸಮಂಜಸವಾದ ಕ್ರಮಗಳನ್ನು ತೆಗೆದುಕೊಲ್ಲಲಾಗುತ್ತಿದೆ ಎಂಬುದನ್ನು ಪ್ರದರ್ಶಿಸಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಜವಾಬ್ದಾರರಾಗಿರುತ್ತಾರೆ. ಈ ಜವಾಬ್ದಾರಿಯು ಪೋಷಕರು ಅಥವಾ ಯುವಕರ ಮೇಲೆ ಇರುವುದಿಲ್ಲ. ಬಳಕೆದಾರರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಆಂಥೋನಿ ಅಲ್ಬನೀಸ್ ಹೇಳಿದರು.
ತಪ್ಪು ಮಾಹಿತಿ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವ ಸಾಮಾಜಿಕ ಮಾಧ್ಯಮಗಳ ಬಳಕೆಗೆ ವಯಸ್ಸಿನ ನಿರ್ಬಂಧ ತಂತ್ರಜ್ಞಾನದ ದೈತ್ಯರನ್ನು ಹತ್ತಿಕ್ಕಲು ಅಲ್ಬನೀಸ್‌ನ ಸರ್ಕಾರವು ಪರಿಚಯಿಸಿದ ಪ್ರಮುಖ ಕ್ರಮಗಳ ಭಾಗವಾಗಿದೆ. ಸಾಮಾಜಿಕ ಜಾಲತಾಣಗಳಿಗೆ ನಿರಂತರ ಸವಾಲು ಹಾಕುತ್ತಿರುವ ಆಸ್ಟ್ರೇಲಿಯಾವು ಸುದ್ದಿಗಳನ್ನು ಬಳಸುವುದಕ್ಕೆ 2021ರಲ್ಲಿ ಫೇಸ್‌ಬುಕ್ ಮತ್ತು ಗೂಗಲ್ ಹಣ ಪಾವತಿಸುವಂತೆ ಅದು ಒತ್ತಾಯಿಸಿತ್ತು.
ತೀರಾ ಇತ್ತೀಚೆಗೆ, ಸಿಡ್ನಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಡಿಯೋವನ್ನು ತೆಗೆದುಹಾಕಲು ವಿಫಲವಾದ ಕಾರಣಕ್ಕಾಗಿ ಸರ್ಕಾರವು ಎಲೋನ್ ಮಸ್ಕ್ ಅವರ ಎಕ್ಸ್ ವಿರುದ್ಧ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿತ್ತು.
ಅಲ್ಬನೀಸ್ ಅವರ ಸರ್ಕಾರವು ತಪ್ಪು ಮಾಹಿತಿಯ ವಿರುದ್ಧ ಹೋರಾಡಲು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಅಗತ್ಯವಿರುವ ಹೊಸ ಕಾನೂನನ್ನು ಅನ್ವೇಷಿಸುತ್ತಿದೆ.
ವಿವಿಧ ವಿಧಾನಗಳ ಮೂಲಕ ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಸರ್ಕಾರವು, ವಯಸ್ಸಿನ ಮಿತಿ, ಯಾವ ಯಾವ ವೇದಿಕೆಗಳು ಇದರ ಪರಿಣಾಮ ಎದುರಿಸಬೇಕು, ನಿಷೇಧವನ್ನುಯಾವಗದಿಂದ ಜಾರಿಗೊಳಿಸಲಾಗುತ್ತದೆ, ಇದಕ್ಕೆ ದೃಢೀಕರಣ ಅಗತ್ಯವಿದೆಯೇ, ದಂಡದ ಸ್ವರೂಪ ಹೇಗಿರುತ್ತದೆ ಎಂಬುದನ್ನು ಆಸ್ಟ್ರೇಲಿಯಾ ಸರ್ಕಾರ ಸ್ಪಷ್ಟಪಡಿಸಿಲ್ಲ.
IPL 2025 Auction: ಆರ್‌ಸಿಬಿ ಟಾರ್ಗೆಟ್ ಮಾಡಬಲ್ಲ ನಾಲ್ವರು ಆಟಗಾರರನ್ನು ಹೆಸರಿಸಿದ ಎಬಿಡಿ!
ಪ್ರಾಪ್ತ ವಯಸ್ಕರ ಮದ್ಯಪಾನವನ್ನು ತಡೆಗಟ್ಟಲು ಮದ್ಯಪಾನದ ನಿರ್ಬಂಧ ಕಾನೂನು ವೈಫಲ್ಯವಾಗಿದ್ದರೂ ಕಾನೂನುಗಳು ಸಂಪೂರ್ಣವಾಗಿ ಪರಿಣಾಮಕಾರಿಯಾಗುತ್ತವೆ ಅಥವಾ ಸಮಸ್ಯೆಯನ್ನು ತಕ್ಷಣವೇ ಪರಿಹರಿಸುತ್ತವೆ ಎಂಬುದನ್ನು ತಾವು ನಿರೀಕ್ಷಿಸುವುದಿಲ ಎಂದು ಅಲ್ಬನೀಸ್ ಸ್ಪಷ್ಟಪಡಿಸಿದ್ದಾರೆ.