Saturday, 23rd November 2024

ಲಕ್ಷ್ಮಿ ವಿಲಾಸ್ ಬ್ಯಾಂಕ್‌ ಶಾಖೆಗಳು ಇಂದಿನಿಂದ ಡಿಬಿಎಸ್‌ ಬ್ಯಾಂಕ್‌

ನವದೆಹಲಿ: ದೇಶಾದ್ಯಂತ ಲಕ್ಷ್ಮಿ ವಿಲಾಸ್ ಬ್ಯಾಂಕ್‌ನ ಎಲ್ಲಾ ಶಾಖೆಗಳು ಇಂದಿನಿಂದ ಸಿಂಗಾಪುರ ಮೂಲದ ಡಿಬಿಎಸ್‌ ಬ್ಯಾಂಕ್‌ ಆಗಿ ಕಾರ್ಯ ನಿರ್ವಹಿಸಲಿವೆ.

ಈ ಹಿಂದೆ ಗ್ರಾಹಕರಿಗೆ ಆರ್‌ಬಿಐ ವಿಧಿಸಿದ್ದ 25,000 ರೂಪಾಯಿಗಳ ವಿತ್‌ಡ್ರಾ ಮಿತಿಯನ್ನು ತೆಗೆದು ಹಾಕಲಾಗಿದೆ.

ಎಲ್‌ವಿಬಿಯನ್ನು ಸಿಂಗಾಪುರದ ಮೂಲದ ಬಹುದೊಡ್ಡ ಬ್ಯಾಂಕ್ ಡಿಬಿಎಸ್ ಗ್ರೂಪ್‌ನೊಂದಿಗೆ ವಿಲೀನಗೊಳಿಸುವ ಕಾರ್ಯಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದ ಬಳಿಕ, ಗ್ರಾಹಕರಿಗೆ ಠೇವಣಿ ಹಿಂಪಡೆಯುವ ನಿರ್ಬಂಧಗಳನ್ನು ತೆಗೆದು ಹಾಕಿದೆ.

ನವೆಂಬರ್ 27ರಿಂದ ಡಿಬಿಎಸ್‌ಗೆ 563 ಶಾಖೆಗಳು, 974 ಎಟಿಎಂಗಳು ಮತ್ತು ಚಿಲ್ಲರೆ ಹೊಣೆಗಾರಿಕೆಗಳಲ್ಲಿ 1.6 ಬಿಲಿಯನ್ ಫ್ರ್ಯಾಂಚೈಸ್ ದೊರೆತಿದೆ. ಈ ಮೂಲಕ ಮೊದಲ ದೇಶೀಯ ಬ್ಯಾಂಕ್‌ ಸಂಪೂರ್ಣವಾಗಿ ವಿದೇಶಿ ಬ್ಯಾಂಕ್‌ವೊಂದರಲ್ಲಿ ವಿಲೀನ ಗೊಂಡಿದೆ.

ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದ ಎಲ್‌ವಿಬಿಯನ್ನು ನ.17ರಿಂದ ಡಿಸೆಂಬರ್ 16ರವರೆಗೆ ಆರ್‌ಬಿಐ ನಿಷೇಧಕ್ಕೊಳಪಡಿಸಿತ್ತು.