Friday, 22nd November 2024

BBK 11: ಹನುಮಂತನ ರಿಯಲ್ ಗೇಮ್ ಕಂಡು ದಂಗಾದ ಮನೆಮಂದಿ: ವೀಕ್ಷಕರು ಕೂಡ ಶಾಕ್

Hanumantha Real Game

ಆರನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಈ ಸೀಸನ್​ನ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ ಕೂಡ ತಮ್ಮ ಅಸಲಿ ಆಟ ಶುರು ಹಚ್ಚಿಕೊಂಡಿದ್ದಾರೆ. ಈವರೆಗೆ ತಮ್ಮ ಮಾತುಗಳಿಂದಲೇ ಸ್ಪರ್ಧಿಗಳನ್ನು-ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದ ಇವರು ಇದೀಗ ರಿಯಲ್ ಗೇಮ್ ಶುರುಮಾಡಿದ್ದಾರೆ.

ತನ್ನ ಚುರುಕುತನ ಹಾಗೂ ಗೇಮ್ ಪ್ಲಾನ್ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಇವರು ಮನೆಯ ಹೊಸ ನಾಯಕ ಕೂಡ ಆದರು. ಈ ಎಲ್ಲ ಕಾರಣಕ್ಕೆ ಈ ಸೀಸನ್​ನ ಮೊದಲ ಕಿಚ್ಚನ ಚಪ್ಪಾಳೆಯೂ ಹನುಮಂತ ಅವರಿಗೆ ದಕ್ಕಿತು. ಇದೀಗ ಟಾಸ್ಕ್​ನಲ್ಲಿ ಹನುಮಂತ ಮನೆಮಂದಿ ಶಾಕ್ ಆಗುವಂತೆ ಆಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳಿಗೆ ಕೊಡಲಾದ ಟಾಸ್ಕ್‌ನಲ್ಲಿ ನೀರನ್ನು ತುಂಬಿಕೊಂಡು ನವಗ್ರಹಗಳನ್ನು ಸೃಷ್ಟಿಸಿರುವ ವೇದಿಕೆಯ ಸುತ್ತಲೂ ಗ್ರಹಗಳಂತೆ ಸುತ್ತಬೇಕು. ಈ ಟಾಸ್ಕ್‌ನಲ್ಲಿ ಹೆಚ್ಚು ನೀರನ್ನು ಉಳಿಸಿಕೊಂಡ ಸ್ಪರ್ಧಿ ಗೆಲ್ಲುತ್ತಾರೆ. ನೀರು ಖಾಲಿಯಾದ ಸದಸ್ಯ ಟಾಸ್ಕ್​ನಿಂದ ಹೊರಗುಳಿಯುತ್ತಾರೆ. ಹೀಗಾಗಿ ನೀರನ್ನು ಕಾಪಾಡಿಕೊಳ್ಳುವುದು ಮುಖ್ಯ. ಆದರೆ, ಹನುಮಂತ ತನ್ನ ಬಾಟಲಿಯಲ್ಲಿ ನೀರನ್ನು ಹಿಡಿದುಕೊಂಡೇ ಎಲ್ಲರ ನೀರಿನ ಡಬ್ಬಿಗಳನ್ನು ಬೀಳಿಸುತ್ತಾ ಬಂದಿದ್ದಾರೆ.

ಆಟ ಎಂದಮೇಲೆ ಆಟ ಆಡಬೇಕು, ನಾನು ನನ್ನ ಆಟ ಆಡಿದ್ದೀನಿ ಎಂದು ಹೇಳಿರುವ ಹನುಮಂತ ಆಟದಿಂದ ಮನೆಮಂದಿ ದಂಗಾಗಿದ್ದಾರೆ. ಭವ್ಯಾ ಗೌಡ ಹಾಗೂ ಹನುಮಂತ ಮಧ್ಯೆ ಮಾತಿನ ವಾರ್ ಕೂಡ ನಡೆದಿದೆ. ಇದನ್ನೆಲ್ಲ ಕಂಡು ನಿಜವಾದ ಗೇಮ್​ ಹನುಮಂತನದ್ದು ಎಂದು ತ್ರಿವಿಕ್ರಮ್ ಹೇಳಿದ್ದಾರೆ. ನೀ ಭಾರಿ ಅದಿ ಎಂದು ಧನರಾಜ್ ಕೂಡ ಹನುಮಂತನ ಆಟವನ್ನು ಪ್ರಶಂಶಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್:

ಈ ವಾರದ ಕ್ಯಾಪ್ಟನ್ಸಿ ಟಾಸ್ಕ್​ಗೆ ಮಂಜು, ಭವ್ಯಾ, ಸುರೇಶ್ ಅವರು ನೇರವಾಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ ಹನುಮಂತ ಅವರು ಐಶ್ವರ್ಯಾ, ಗೌತಮಿ ಜಾಧವ್ ಮತ್ತು ಚೈತ್ರಾ ಕುಂದಾಪುರ ಅವರನ್ನು ಕ್ಯಾಪ್ಟನ್ಸಿ ಓಟದಿಂದ ಹೊರಗಿಟ್ಟಿದ್ದಾರೆ. ಇದೀಗ ಉಳಿದ ಸ್ಪರ್ಧಿಗಳ ಪೈಕಿ ಇಬ್ಬರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಡುವ ಚಟುವಟಿಕೆ ನಡೆಯುತ್ತಿದೆ. ಇದರ ಅನುಸಾರ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನ ಹೊರಹಾಕಬೇಕಿದೆ. ಈ ವೇಳೆ ಸ್ಪರ್ಧಿಗಳಿಂದ ಹೆಚ್ಚು ಟಾರ್ಗೆಟ್ ಆದವರು ಧನರಾಜ್ ಆಚಾರ್‌. ಕ್ಯಾಪ್ಟನ್‌ ಆಗೋಕೆ ಅರ್ಹತೆ ಇಲ್ಲ ಎಂದು ಮೋಕ್ಷಿತಾ ಪೈ ಹಾಗೂ ಅನುಷಾ ರೈ ಅವರ ಫೋಟೋಗಳನ್ನ ಧನರಾಜ್ ಹಾಕುತ್ತಾರೆ. ಈ ವೇಳೆ ಧನರಾಜ್ ವಿರುದ್ಧ ಮೋಕ್ಷಿತಾ ಪೈ ಹಾಗೂ ಅನುಷಾ ರೈ ಸಿಡಿದೆದ್ದಿದ್ದಾರೆ.

BBK 11 TRP: ಬಿಗ್ ಬಾಸ್​ನಲ್ಲಿ ಸುದೀಪ್ ಬಾರದ ವೀಕೆಂಡ್​ನ ಟಿಆರ್​ಪಿ ಔಟ್: ಯಾವ ಸ್ಥಾನದಲ್ಲಿದೆ?