Thursday, 7th November 2024

Star Fashion: ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ಫ್ಯಾಷನ್‌‌‌ಗೆ ಸೈ ಎಂದ ನಟ ವಿನಯ್‌ ಗೌಡ!

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ಫ್ಯಾಷನ್‌ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿರುವ ನಟ ವಿನಯ್‌ ಗೌಡ (Vinay Gowda), ಸದ್ಯ ಸೀಸನ್‌ ಮೆನ್ಸ್ ಫ್ಯಾಷನ್‌ಗೆ (Star Fashion) ಸೈ ಎಂದಿದ್ದಾರೆ. ಥೇಟ್‌ ಬಾಲಿವುಡ್‌ ನಟನಂತೆ ಕಾಣಿಸಿಕೊಂಡಿದ್ದಾರೆ. ಸದ್ಯ ಟಾಪ್‌ ಟ್ರೆಂಡ್‌ ಲಿಸ್ಟ್‌ಗೆ ಸೇರಿರುವ ಇವರ ಈ ಬ್ಲ್ಯಾಕ್‌ ಕೋ ಆರ್ಡ್ ಬ್ಲೇಝರ್‌ ಸೂಟ್‌ ಫ್ಯಾಷನ್‌ ಯುವಕರನ್ನು ಸೆಳೆದಿದೆ.

ಚಿತ್ರಗಳು: ವಿನಯ್‌ ಗೌಡ, ನಟ

ಬ್ಲ್ಯಾಕ್‌ ಬ್ಲೇಜರ್‌ ಸೂಟ್‌ ವಿಶೇಷತೆ

ಬ್ಲ್ಯಾಕ್‌ ಕಲರ್ ಮೇಲೆ ವೈಟ್‌ ಲೈನ್‌ಗಳಿರುವ ವಿನಯ್‌ ಅವರ ಈ ಕೋ- ಆರ್ಡ್ ಸೂಟ್‌ ರೆಟ್ರೊ ಫ್ಯಾಷನ್‌ಗೆ ಸೇರಿದ್ದು, ಬೆಲ್‌ ಬಾಟಮ್‌ ಹೊಂದಿದೆ. ಜತೆಗೆ ಕಾಲರ್‌ ಹಾಗೂ ಪ್ಯಾಂಟನ್ನು ಹೈಲೈಟ್‌ ಮಾಡಿದೆ. ಒಟ್ಟಾರೆ ಇಡೀ ಲುಕ್‌ ಇದು ವಿನಯ್‌ ಗೌಡ ಅವರಿಗೆ ರಗಡ್‌ ಲುಕ್‌ ಕಲ್ಪಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಪತ್ನಿ ಅಕ್ಷತಾ ಡಿಸೈನರ್‌

ಅಂದಹಾಗೆ, ಈ ಬ್ಲ್ಯಾಕ್‌ ಸೂಟ್‌ ಡಿಸೈನರ್‌ ಬೇರಾರು ಅಲ್ಲ! ಬದಲಿಗೆ ವಿನಯ್‌ ಪತ್ನಿ ಅಕ್ಷತಾ ಗೌಡ. ಪತಿಯ ಬಹುತೇಕ ಎಲ್ಲಾ ಫ್ಯಾಷನ್‌ವೇರ್‌ಗಳನ್ನು ಖುದ್ದು ಅವರೇ ಡಿಸೈನ್‌ ಮಾಡಿ ಎಚ್‌ಆರ್‌ ಫ್ಯಾಷನ್‌ನಲ್ಲಿ ಕಸ್ಟಮೈಸ್‌ ಮಾಡಿಸುತ್ತಾರಂತೆ. ಹಾಗೆಂದು ಪತ್ನಿಯ ಬಗ್ಗೆ ವಿನಯ್‌ ಹೆಮ್ಮಯಿಂದ ಹೇಳಿಕೊಳ್ಳುತ್ತಾರೆ.

ವಿನಯ್‌ ಗೌಡ ಫ್ಯಾಷನ್‌ ಟಾಕ್‌

ತಮ್ಮ ಈ ಫ್ಯಾಷನ್‌ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದ ವಿನಯ್‌ಗೌಡ, ನಾನು ಯಾವುದೇ ಟ್ರೆಂಡ್‌ ಫಾಲೋ ಮಾಡುವುದಿಲ್ಲ! ಬದಲಿಗೆ ಟ್ರೆಂಡ್‌ ಸೆಟ್‌ ಮಾಡುತ್ತೇನೆ. ನೂರು ಜನರ ಮಧ್ಯೆ ಎದ್ದು ಕಾಣುವಂತಹ ಯೂನಿಕ್‌ ಫ್ಯಾಷನ್‌ವೇರ್‌ಗಳನ್ನು ಧರಿಸುತ್ತೇನೆ. ಇದಕ್ಕೆ ಕಾರಣ ನನ್ನ ಡಿಸೈನರ್‌ ಪತ್ನಿ ಎನ್ನುತ್ತಾರೆ. ಫ್ಯಾಷನ್‌ ಎಂಬುದು ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ಮೊದಲಿನಿಂದಲೂ ನಾನು ಡಿಫರೆಂಟ್‌ ಆಗಿರುವ ಔಟ್‌ಫಿಟ್ನಲ್ಲೆ ಕಾಣಿಸಿಕೊಂಡಿದ್ದೇನೆ ಎನ್ನುತ್ತಾರೆ.

ನಟ ವಿನಯ್‌ಗೌಡ ವೃತ್ತಾಂತ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯ ಮಹಾದೇವನ ಪಾತ್ರದಿಂದಲೇ ಖ್ಯಾತಿ ಗಳಿಸಿದ ವಿನಯ್‌, ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ನಂತರ ಈ ಇಮೇಜ್‌ನಿಂದ ಕೊಂಚ ಹೊರಬಂದಿದ್ದಾರೆನ್ನಬಹುದು. ಅಲ್ಲದೇ, ಸಾಕಷ್ಟು ಫ್ಯಾಷನ್‌ ಶೋಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ 3 ಹೊಸ ಸಿನಿಮಾಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸುದ್ದಿಯನ್ನೂ ಓದಿ | Winter Fashion: ಚಳಿಗಾಲದಲ್ಲಿ ಟ್ರೆಂಡಿಯಾಗಿದೆ ಕಲರ್‌ಫುಲ್‌ ಉಲ್ಲನ್‌ ನಿಟ್ಟೆಡ್‌ ಸ್ವೆಟರ್ಸ್!

ಮೆನ್ಸ್ ಫ್ಯಾಷನ್‌ ಪ್ರಿಯರಿಗೆ ವಿನಯ್‌ಗೌಡ ಸಿಂಪಲ್‌ ಸಲಹೆ

  • ಫಿಟ್‌ ಬಾಡಿ ಯುವಕರನ್ನು ಆಕರ್ಷಕವಾಗಿಸಬಲ್ಲದು. ಹಾಗಾಗಿ ವ್ಯಾಯಾಮ ರೂಢಿಸಿಕೊಳ್ಳಬೇಕು.
  • ಆಯಾ ಸಂದರ್ಭಕ್ಕೆ ಹಾಗೂ ಅವರವರ ಪರ್ಸನಾಲಿಟಿಗೆ ತಕ್ಕಂತೆ ಫ್ಯಾಷನ್‌ವೇರ್‌ ಧರಿಸುವುದು ಉತ್ತಮ.
  • ಟ್ರೆಂಡ್‌ ಫಾಲೋ ಮಾಡುವುದಕ್ಕಿಂತ ನಿಮ್ಮ ಬಾಡಿಟೈಪ್‌ಗೆ ಹೊಂದುವಂತಹ ಫ್ಯಾಷನ್‌ವೇರ್‌ ಧರಿಸುವುದು ಬೆಸ್ಟ್.
  • ಫ್ಯಾಷನ್‌ವೇರ್‌ ಧರಿಸಿದರೆ ಸಾಲದು ಆತ್ಮವಿಶ್ವಾಸ ಕೂಡ ಎದ್ದು ಕಾಣಬೇಕು.
  • ಪರ್ಫ್ಯೂಮ್‌ ಹಾಗೂ ಸನ್‌ಗ್ಲಾಸ್‌ ಯುವಕರನ್ನು ಎಲ್ಲರ ಮಧ್ಯೆಯೂ ನಿಮ್ಮನ್ನು ಕೇಂದ್ರಬಿಂದುವಾಗಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)