Friday, 22nd November 2024

BBK 11: ಮಂಜು ಜೊತೆಗಿನ ಅಣ್ಣ-ತಂಗಿ ಸಂಬಂಧಕ್ಕೆ ಇತಿಶ್ರೀ ಹಾಡಿದ ಮೋಕ್ಷಿತಾ ಪೈ

Ugramm Manju and Mokshitha Pai

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭದಿಂದಲೂ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಉಗ್ರಂ ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ನಡುವಣ ಅಣ್ಣ-ತಂಗಿ ಸಂಬಂಧದಲ್ಲಿ ಈ ವಾರ ಬಿರುಕು ಮೂಡಿತ್ತು. ಮೂವರು ಟಾಸ್ಕ್ ಮಧ್ಯೆ ಮನೆಯೊಳಗೆ ಜಗಳ ಆಡಿದ್ದರು. ಮುಖ್ಯವಾಗಿ ಉಗ್ರಂ ಮಂಜು ಆಡಿದ ರೀತಿಗೆ ಗೌತಮಿ ಅವರು ಅಸಮಾಧಾನಗೊಂಡು ಕಿರುಚಾಡಿದ್ದರು. ಕೆಲ ಸಮಯ ದೂರ-ದೂರ ಆಗಿದ್ದ ಇವರು ದಿನ ಮುಗಿಯುವ ಹೊತ್ತಿಗೆ ಮತ್ತೆ ಒಂದಾಗಿದ್ದರು. ಆದರೀಗ ಈ ಗುಂಪಿನಿಂದ ಮೋಕ್ಷಿತಾ ದೂರವಾಗಿದ್ದಾರೆ.

ಮೊನ್ನೆ ಚೆಂಡನ್ನು ಗೋಲ್​ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿ ಮತ್ತು ಮೋಕ್ಷಿತಾ ತಂಡಕ್ಕೆ ಕೈಕೊಟ್ಟಿದ್ದಾರೆ. ಇದು ಗೌತಮಿ-ಮೋಕ್ಷಿತಾಗೆ ತೀವ್ರ ಸಿಟ್ಟು ತರಿಸಿತು. ಮಂಜು ಹೈಲೆಟ್​ ಆಗೋದಿಕ್ಕೆ ನೋಡುತ್ತಿದ್ದಾರೆ ಬಂದಾಗಿನಿಂದಲೂ. ನೀವು ಒಬ್ಬರೇ ಬಂದಿರೋದು, ನಿಮಗಾಗಿ ಅಷ್ಟೇ ಆಡಿ ಎಂದು ಮೋಕ್ಷಿತಾ ಹೇಳಿದ್ದರು.

ಆದರೆ, ರಾತ್ರಿ ವೇಳೆಗೆ ಮೂವರು ಕುಳಿತುಕೊಂಡು ಮಾತನಾಡಿ ಪುನಃ ಒಂದಾಗಿದ್ದರು. ಮಂಜು ಅವರು ಸ್ವಾರಿ ಎಂದು ಇಬ್ಬರ ಬಳಿ ಕೇಳಿದ್ದರು. ಆದರೀಗ ಅಣ್ಣ-ತಂಗಿ ಸಂಬಂಧಕ್ಕೆ ಮೋಕ್ಷಿತಾ ಇತಿಶ್ರೀ ಹಾಡಿದ್ದಾರೆ. ನಾನು ಈ ಅಣ್ಣ-ತಂಗಿ ಸಂಬಂಧಕ್ಕೆ ಫುಲ್ ಸ್ಟಾಪ್ ಇಡುತ್ತಿದ್ದೇನೆ ಎಂದು ಮೋಕ್ಷಿತಾ ಅವರು ನೇರವಾಗಿ ಮಂಜು ಬಳಿಯೇ ಹೇಳಿದ್ದಾರೆ.

ನಾನಂತೂ ಬರಲ್ಲ ಮಂಜಣ್ಣ, ಅಲ್ಲಿ ಕೂತ್ಕುಂಡು ಮಾತನಾಡೋಕೆ ಬರಲ್ಲ ಅಷ್ಟೇ. ಇನ್ಮುಂದೆ ನನ್ನ ನಿರ್ಧಾರವೇ ಬೇರೆ ಆಗಿದೆ. ನಮ್ಮ ನಡುವೆ ಇರುವ ಅಣ್ಣ-ತಂಗಿ ಬಾಂಡ್‌ ಇರುವಷ್ಟು ನಮ್ಮ ನಿರೀಕ್ಷೆಗಳು ಬೇರೇ ಥರ ಇರುತ್ತದೆ. ಅದೆಲ್ಲದಕ್ಕೂ ಫುಲ್‌ ಸ್ಟಾಪ್‌ ಅಷ್ಟೇ. ಇದೆಲ್ಲ ಇವತ್ತೇ ಮುಗೀತು. ಗೊತ್ತಿಲ್ಲ ಈ ವಾರ ಏನು ಆಗುತ್ತದೆ ಅಂಥ. ನಾವು ಫ್ಲೆಶ್‌ ಔಟ್‌ ಆಗುತ್ತೇವೆ ಅಂಥ ಮಾತು ಬಂದದ್ದೇ ನಿಮ್ಮಿಂದ. ಇದೆಲ್ಲ ನನಗೆ ನಿಮ್ಮ ಬಳುವಳಿ ಅಷ್ಟೇ ಎಂದು ಮೋಕ್ಷಿತಾ ಅವರು ಮಂಜುಗೆ ಹೇಳಿದ್ದಾರೆ.

BBK 11: ಹನುಮಂತನ ರಿಯಲ್ ಗೇಮ್ ಕಂಡು ದಂಗಾದ ಮನೆಮಂದಿ: ವೀಕ್ಷಕರು ಕೂಡ ಶಾಕ್