ಮುಂಬೈ: ಸ್ಟಾರ್ ಜೋಡಿ ವಿರಾಟ್ ಕೊಹ್ಲಿ(Virat Kohli) ಹಾಗೂ ಅನುಷ್ಕಾ ಶರ್ಮಾ (Anushka Sharma) ತಮ್ಮ ಮದುವೆಯಾದಾಗಿನಿಂದಲೂ ತಮ್ಮ ಜೀವನವನ್ನು ಅತ್ಯಂತ ಖಾಸಗಿಯಾಗಿಟ್ಟಿದ್ದಾರೆ. ಇದೀಗ ವಿರುಷ್ಕಾ (Kohli- Anushka) ಜೋಡಿ ಬ್ರಂಚ್ ಡೇಟ್ಗೆ (brunch date) ಹೋಗಿದ್ದು, ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದಂಪತಿ ಗುರುವಾರ ಮುಂಬೈನ ಬಾಂದ್ರಾದಲ್ಲಿರುವ ಬೆನ್ನೆ ಕೆಫೆಗೆ ಭೇಟಿ ನೀಡಿದ್ದರು. ಈ ವೇಳೆ ತಮಾಷೆ ಘಟನೆಯೊಂದು ನಡೆದಿದ್ದು, ಕೆಫೆಯ ಉದ್ಯೋಗಿಗಳು ಅವರೊಟ್ಟಿಗೆ ಫೋಟೊ ತೆಗೆಸಿಕೊಂಡಿದ್ದರು. ಆದರೆ ರಜೆಯಲ್ಲಿದ್ದ ಉದ್ಯೋಗಿಯೊಬ್ಬರು ಮಿಸ್ ಆಗಿದ್ದು ಅವರ ಫೋಟೊವನ್ನು ಎಡಿಟ್ ಮಾಡಿ ಪೋಸ್ಟ್ ಮಾಡಲಾಗಿದೆ. ಈ ಎಡಿಟೆಡ್ ಫೋಟೊಗೆ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.
ಬಾಂದ್ರಾದಲ್ಲಿರುವ ಬೆನ್ನೆ ಕೆಫೆ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿರುಷ್ಕಾ ಜತೆಗಿನ ಫೋಟೊವನ್ನು ಶೇರ್ ಮಾಡಿದೆ. ವಿರಾಟ್ ಹಾಗೂ ಅನುಷ್ಕಾ ನಗುತ್ತಾ ಫೋಟೊಗೆ ಪೋಸ್ ನೀಡಿದ್ದಾರೆ. ಅನುಷ್ಕಾ ಖಾಕಿ ಬಣ್ಣದ ಪ್ಯಾಂಟ್, ಬಿಳಿ ಟೀ ಶರ್ಟ್ ಮತ್ತು ಅದರ ಮೇಲೆ ಸಡಿಲವಾದ ಕಪ್ಪು ಶರ್ಟ್ ಧರಿಸಿದ್ದರೆ, ವಿರಾಟ್ ಬಿಳಿ ಶರ್ಟ್ ಧರಿಸಿ ತಲೆಗೆ ಕ್ಯಾಪ್ ಹಾಕಿದ್ದರು.
ಈ ಫೋಟೊದಲ್ಲಿ ವಿಶೇಷವೊಂದಿದ್ದು, ಬೆನ್ ಕೆಫೆಯ ರಮೇಶ್ ಎಂಬ ಉದ್ಯೋಗಿಯೊಬ್ಬರು ವಿರುಷ್ಕಾ ಜೋಡಿ ಬಂದಾಗ ರಜೆಯಲ್ಲಿದ್ದರು. ಹೀಗಾಗಿ ಅವರ ಫೋಟೊವನ್ನು ಎಡಿಟ್ ಮಾಡಿ ಫೋಟೋ ಶೇರ್ ಮಾಡಲಾಗಿದೆ. ನೀವು ಇಲ್ಲದಿದ್ದರಿಂದ ನಿಮ್ಮ ಫೋಟೊವನ್ನು ಎಡಿಟ್ ಮಾಡಿದ್ದವೇವೆ ಎಂದು ಬರೆಯಲಾಗಿದೆ. ಇದನ್ನು ಗಮಸಿದ ನೆಟ್ಟಿಗರು ಕಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಶಾಲೆಯಲ್ಲಿ ಏನಾದರೂ ಮುಖ್ಯವಾದ ಕಾರ್ಯಕ್ರಮ ಇದ್ದಾಗ ಸ್ಕೂಲ್ ಬಂಕ್ ಮಾಡುವ ವಿದ್ಯಾರ್ಥಿಯ ತರ ದಿನೇಶ್ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಕಮೆಂಟ್ ಇನ್ನೊಂದು ಸಲ ರಜೆ ಕೇಳುವಾಗ ದಿನೇಶ್ ಸಾವಿರ ಸಲ ಯೋಚನೆ ಮಾಡುತ್ತಾರೆ ಎಂದಿದ್ದಾರೆ. ಅನೇಕರು ದಿನೇಶ್ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಫೋಟೊದೊಂದಿಗೆ ಹಾಕಿರುವ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Anushka Sharma: ಕೊಹ್ಲಿ ಬರ್ತ್ಡೇ ಪ್ರಯುಕ್ತ ಮಗ ಅಕಾಯ್ನ ಮೊದಲ ಪೋಸ್ಟ್ ಶೇರ್ ಮಾಡಿದ ಅನುಷ್ಕಾ ಶರ್ಮಾ
ಅನುಷ್ಕಾ ಹಾಗೂ ವಿರಾಟ್ ಕೊಯ್ಲಿ ಅಕಾಯ್ ಜನ್ಮದ ನಂತರ ಲಂಡನ್ನಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ವಿರಟ್ ಭಾಗವಹಿಸಿದ್ದರು. ತಮ್ಮ ಹುಟ್ಟು ಹಬ್ಬವನ್ನು ಭಾರತದಲ್ಲಿ ಕುಟುಂದವರೊಂದಿಗೆ ಆಚರಿಸಿಕೊಂಡಿದ್ದಾರೆ. ಸದ್ಯ ತಮ್ಮ ಕೆಲಸದ ನಡುವೆ ಬ್ರೇಕ್ ತಗೆದುಕೊಂಡಿರುವ ಅನುಷ್ಕಾ 2022 ರಲ್ಲಿ ಜೂಲನ್ ಗೋಸ್ವಾಮಿಯವರ ಜೀವನಚರಿತ್ರೆಯಾದ ಚಡ್ಕಾ ಎಕ್ಸ್ಪ್ರೆಸ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.