Thursday, 14th November 2024

Samosa Row: ಸಮೋಸಾ ಮಂಗಮಾಯ; ಸಿಟ್ಟಿಗೆದ್ದ ಸಿಎಂ ಸಿಬಿಐ ತನಿಖೆಗೆ ಆದೇಶ

Sukhvinder Singh Sukhu

ಶಿಮ್ಲಾ: ಸಮೋಸ (Samosa Row) ಮತ್ತು ಕೇಕ್ ಕಾಣೆಯಾಗಿರುವ ಕೇಸ್‌ ಒಂದು ಭಾರೀ ಸದ್ದು ಮಾಡ್ತಿದೆ. ಇದೀಗ ಈ ಕೇಸ್‌ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದರೆ ನೀವು ನಂಬಲೇ ಬೇಕು. ಹಾಗಿದ್ರೆ ಏನಿದು ವಿವಾದ? ಇಷ್ಟು ಸಣ್ಣ ವಿಚಾರಕ್ಕೆ ಸಿಬಿಐ ತನಿಖೆ ಏಕೆ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಸುದ್ದಿ ಓದಿ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು(Sukhvinder Singh Sukhu) ಅವರಿಗೆ ಮೀಸಲಿಟ್ಟಿದ್ದ ಸಮೋಸಾ ಮತ್ತು ಕೇಕ್‍ಗಳನ್ನು ಭದ್ರತಾ ಸಿಬ್ಬಂದಿಗೆ ವಿತರಿಸಲಾಗಿದ್ದು, ಈ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ.  ಇದು ‘ಸರ್ಕಾರಿ ವಿರೋಧಿ’ ಕೃತ್ಯ ಎಂದು ಸಿಐಡಿ ತನಿಖೆಗೆ ಆದೇಶಿಸಲಾಗಿದೆ.

ಏನಿದು ಘಟನೆ?

ವರದಿ ಪ್ರಕಾರ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿಐಡಿ ಪ್ರಧಾನ ಕಚೇರಿಗೆ ತೆರಳಿದ್ದ ಮುಖ್ಯಮಂತ್ರಿಗಳಿಗೆ ಉಪಹಾರಕ್ಕಾಗಿ ಲಕ್ಕರ್ ಬಜಾರ್‌ನ ಹೋಟೆಲ್ ರಾಡಿಸನ್ ಬ್ಲೂನಿಂದ ಮೂರು ಬಾಕ್ಸ್ ಸಮೋಸಾವನ್ನು ತರಿಸಲಾಗಿತ್ತು.  ಆದರೆ ಮುಖ್ಯಮಂತ್ರಿಗಳಿಗೆಂದು ನೀಡಲಾದ ತಿಂಡಿಯನ್ನು ಸಿಎಂ ಭದ್ರತಾ ಸಿಬ್ಬಂದಿಗೆ ಹಂಚಲಾಗಿತ್ತು. ಎಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಹೋಟೆಲ್‌ನಿಂದ 3 ಸೀಲ್ಡ್ ಬಾಕ್ಸ್‌ಗಳಲ್ಲಿ ತಿಂಡಿಗಳನ್ನು ತಂದು ಸಂಬಂಧಿಸಿದ ಎಸ್‌ಐಗೆ ತಿಳಿಸಿದ್ದಾರೆ. ತನಿಖೆಯ ವೇಳೆ ಮೂರು ಕಂಪಾರ್ಟ್‌ಮೆಂಟ್‌ಗಳಲ್ಲಿ ಇಟ್ಟಿರುವ ತಿಂಡಿ ತಿನಿಸುಗಳನ್ನು ಸಿಎಂ ಸುಖ್ವಿಂದರ್‌ ಸುಖು ಅವರಿಗೆ ನೀಡಬೇಕೇ ಎಂದು ಪ್ರವಾಸೋದ್ಯಮ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದವರನ್ನು ಕೇಳಿದಾಗ ಈ ವಿಷಯಗಳನ್ನು ಮೆನುವಿನಲ್ಲಿ ಸೇರಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದರಿಂದಾಗಿ ಅಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಇದರಿಂದ ತೀರಾ ಅಸಮಾಧಾನಗೊಂಡ ಸಿಎಂ ಸಾಹೇಬ್ರು ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿದ್ದಾರೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರ ಈ ಸಮೋಸಾ ವಿವಾದವು ಸುಖು ಅವರ ಸರ್ಕಾರವನ್ನು ಟೀಕಿಸಲು ಬಿಜೆಪಿಗೆ ಅವಕಾಶ ನೀಡಿದೆ. ಹಾಗಾಗಿ ಬಿಜೆಪಿ ಸದಸ್ಯರು ಇದಕ್ಕೆ  ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ:ಬೋರ್ಡ್‌ನಲ್ಲಿ ಮಾತ್ರ ಹಿಂದೂ ಹೆಸರು… ಬಿರಿಯಾನಿ ಅಂಗಡಿ ಒಳಗೆ ನೋಡಿದ್ರೆ ಕಥೆ ಬೇರೇನೆ ಇದೆ… ಭಾರೀ ಸದ್ದು ಮಾಡ್ತಿದೆ ಈ ವಿಡಿಯೋ!

” ಸುಖು ಸರ್ಕಾರವು ರಾಜ್ಯದ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಆದರೆ ಮುಖ್ಯಮಂತ್ರಿಗಳ ಸಮೋಸಾದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತದೆ” ಎಂದು ಬಿಜೆಪಿ ಮುಖ್ಯ ವಕ್ತಾರ ರಣಧೀರ್ ಶರ್ಮಾ ತಮ್ಮ  ಹೇಳಿಕೆಯಲ್ಲಿ ತಿಳಿಸಿದ್ದಾರೆ. ತನಿಖೆಯಲ್ಲಿ, ಈ ತಪ್ಪನ್ನು “ಸರ್ಕಾರಿ ವಿರೋಧಿ” ಕೃತ್ಯ ಎಂದು ಕರೆಯಲಾಗಿದೆ. ಈ ಘಟನೆ ಹಿಮಾಚಲ ಪ್ರದೇಶದ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ವಾಸ್ತವವಾಗಿ, ಮುಖ್ಯಮಂತ್ರಿಯಂತಹ ವಿವಿಐಪಿಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಇಂತಹ ಸಮಸ್ಯೆಗಳು ಎದುರಾಗಿದ್ದರಿಂದ ಸರ್ಕಾರ ಮುಜುಗರಕ್ಕೊಳಗಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.