Friday, 22nd November 2024

Memory Power: ನಿಮ್ಮ ಮಗುವಿನ ಜ್ಞಾಪಕ ಶಕ್ತಿ ಹೆಚ್ಚಾಗಬೇಕೆ? ತಪ್ಪದೇ ಮಾಡಿಸಿ ಈ ಯೋಗಾಸನ

Memory Power

ಯೋಗವು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಎಷ್ಟೋ ಜನರು ಔಷಧಿಗಳಿಂದ ನಿವಾರಿಸಲಾಗದ  ಆರೋಗ್ಯ ಸಮಸ್ಯೆಗಳನ್ನು ಯೋಗದಿಂದ ಪರಿಹಾರಿಸಿಕೊಂಡಿದ್ದಾರೆ.  ಯೋಗವು ಮೆದುಳು ಸೇರಿದಂತೆ ದೇಹದಾದ್ಯಂತ ಆಮ್ಲಜನಕ ಮತ್ತು ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿ ನೀಡುವುದರ ಜೊತೆಗೆ ಇದು ನಿಮ್ಮ ಅರಿವಿನ ಕಾರ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳು ಅಧ್ಯಯನದಲ್ಲಿ ಏಕಾಗ್ರತೆ ಹೊಂದಬೇಕಾದರೆ, ಅವರ ಜ್ಞಾಪಕ ಶಕ್ತಿ(Memory Power) ಹೆಚ್ಚಾಗಬೇಕೆಂದರೆ ಅವರಿಗೆ ಪ್ರತಿದಿನ ಈ ಯೋಗಗಗಳನ್ನು ಅಭ್ಯಾಸ ಮಾಡಿಸಿ.

ಸೂರ್ಯ ನಮಸ್ಕಾರ:

ಇದು ದೈಹಿಕ ಆರೋಗ್ಯವನ್ನು ಸುಧಾರಿಸುವುದರಿಂದ ಹಿಡಿದು ಏಕಾಗ್ರತೆಯನ್ನು ಸುಧಾರಿಸುವವರೆಗೆ ಪ್ರಯೋಜನಕಾರಿಯಾಗಿದೆ. ಇದರಲ್ಲಿ  ನೇರವಾಗಿ ನಿಂತುಕೊಂಡು ಆಳವಾದ ಉಸಿರಾಟ ತೆಗೆದುಕೊಳ್ಳಬೇಕು.

ಬಾಲಾಸನ (ಮಗುವಿನ ಭಂಗಿ):

ನೆಲದ ಮೇಲೆ ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಮೊಣಕಾಲನ್ನು ಸೊಂಟಕ್ಕಿಂತ ಅಗಲವಾಗಿಸಿ ಮುಂದಕ್ಕೆ ಬಾಗಿ ನಿಮ್ಮ ತಲೆಯನ್ನು ನೆಲದ ಮೇಲೆ ಇರಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ. ಈ ಭಂಗಿಯು ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.

ಪ್ರಾಣಾಯಾಮ :  

ಪ್ರತಿ ಮೂಗಿನ ಹೊಳ್ಳೆಯ ಮೂಲಕ ಉಸಿರನ್ನು ಒಳಗೆ ಎಳೆದುಕೊಂಡು ಹೊರಗೆ ಬಿಡುವುದನ್ನು ಒಳಗೊಂಡಿರುತ್ತದೆ. ಈ ಅಭ್ಯಾಸವು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೃಕ್ಷಾಸನ (ಮರದ ಭಂಗಿ):

ನೆಟ್ಟಗೆ ನಿಂತುಕೊಳ್ಳಿ. ಕಾಲುಗಳ ನಡುವೆ ಒಂದು ಅಡಿ ಅಂತರವಿರಲಿ. ನಿಮ್ಮ ಎಡಗಾಲಿನ ಮೇಲೆ ದೇಹವನ್ನು ಸಮತೋಲನಗೊಳಿಸಿ ನಿಮ್ಮ ಬಲಗಾಲನ್ನು ಮೇಲಕ್ಕೆತ್ತಿ ನಿಮ್ಮ ಎಡ ತೊಡೆಯ ಒಳಭಾಗದಲ್ಲಿ ಇರಿಸಿ. ನಿಮ್ಮ ಎದೆಯ ಮಟ್ಟದಲ್ಲಿ ಪ್ರಾರ್ಥನೆ ಮಾಡುವಂತೆ ಅಂಗೈಗಳನ್ನು ಜೋಡಿಸಿ. ಈ ಅಭ್ಯಾಸವು ಗಮನವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಸ್ಮರಣೆಗೆ ಕಾರಣವಾಗುತ್ತದೆ. ಇದು ನರಮಂಡಲವನ್ನು ಶಾಂತಗೊಳಿಸುತ್ತದೆ, ಆತಂಕವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ:ಏನಿದು ಎಬಿಸಿ ಜ್ಯೂಸ್‌? ಇದನ್ನು ಕುಡಿಯುವುದರಿಂದಾಗುವ ಪ್ರಯೋಜನವೇನು?

ಸರ್ವಾಗಾಸನ :

ಯೋಗ ಚಾಪೆಯ ಮೇಲೆ ಮಲಗಿಕೊಳ್ಳಿ. ನಿಮ್ಮ  ಎರಡು ಪಾದಗಳ ಬೆರಳುಗಳನ್ನು ಜೋಡಿಸಿ, ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆ ಎತ್ತಲು ಪ್ರಯತ್ನಿಸಿ. ಅಂಗೈಗಳಿಂದ ಸೊಂಟವನ್ನು ಹಿಡಿದುಕೊಳ್ಳಿ. ಮತ್ತು ಪಾದಗಳನ್ನು ಮೇಲಕ್ಕೆತ್ತಿ ಮತ್ತು ಎಷ್ಟು ಮೇಲಕ್ಕೆ ಎತ್ತಲೂ ಸಾಧ್ಯವೋ ಅಷ್ಟು ಮೇಲೆ ಎತ್ತಿ. ನಿಮ್ಮ ಇಡೀ ದೇಹದ ಭಾರವು ಭುಜಗಳ ಮೇಲೆ ಮಾತ್ರ ಇರಬೇಕು.  ಸ್ವಲ್ಪ ಸಮಯ ಈ ಸ್ಥಾನದಲ್ಲಿ ಇರಿ. ಬಳಿಕ ಕಾಲುಗಳನ್ನು ಹಿಂದಕ್ಕೆ ತಂದು ಮೊದಲಿನ ಸ್ಥಿತಿಗೆ ಬನ್ನಿ. ಈ ಯೋಗಾಸನವು ಶಕ್ತಿ, ನಮ್ಯತೆ ಮತ್ತು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ.