Friday, 8th November 2024

IRCTC Super App: ಶೀಘ್ರದಲ್ಲೇ ಬರಲಿದೆ ರೈಲ್ವೆ ಇಲಾಖೆಯ ಸೂಪರ್ ಆ್ಯಪ್‌; ಏನಿದರ ವಿಶೇಷ?

IRCTC Super App

ರೈಲು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಭಾರತೀಯ ರೈಲ್ವೇಯು (Indian Railways ) ಹೊಸಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಈಗ ರೈಲು ಪ್ರಯಾಣಿಕರೇ ಒಂದು ಶುಭ ಸುದ್ದಿ. ಶೀಘ್ರದಲ್ಲೇ ಐಆರ್‌ಸಿಟಿಸಿಯ ಸೂಪರ್ ಅಪ್ಲಿಕೇಶನ್ (IRCTC Super App) ಪ್ರಾರಂಭವಾಗಲಿದೆ. ದೇಶಾದ್ಯಂತ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ ಹಲವಾರು ವಿಶೇಷ ಸೌಲಭ್ಯಗಳನ್ನು ಪರಿಚಯಿಸುತ್ತಿದೆ.

ಭಾರತೀಯ ರೈಲ್ವೆಯು ಇತ್ತೀಚೆಗೆ ಹೊಸ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿತ್ತು. ಇದರ ಮೂಲಕ ಬಳಕೆದಾರರು ಬಹು ಸೇವೆಗಳನ್ನು ಪಡೆಯಬಹುದು. ಆದರೆ ಇದೀಗ ಐಆರ್‌ಸಿಟಿಸಿ ಸೂಪರ್ ಅಪ್ಲಿಕೇಶನ್ ಬಿಡುಗಡೆಗೆ ಪರಿಶೀಲನೆ ನಡೆಸುತ್ತಿದ್ದು, ಇದು ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ.

ರೈಲುಗಳಲ್ಲಿ ಪ್ರಯಾಣಿಸಲು ಟಿಕೆಟ್ ಮುಂಗಡ ಬುಕ್ಕಿಂಗ್ ಮಾಡಬೇಕು. ನೇರವಾಗಿ ರೈಲು ನಿಲ್ದಾಣಗಳಿಗೆ ಹೋಗಿ ಟಿಕೆಟ್ ಬುಕ್ ಮಾಡಬಹುದು ಅಥವಾ ಆನ್‌ಲೈನ್‌ನಲ್ಲಿಯೂ ಮಾಡಬಹುದು. ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಪಿಎನ್‌ಆರ್ ಸ್ಥಿತಿ, ರೈಲು ಸಂಚಾರ ಮಾಹಿತಿಯನ್ನು ಪಡೆಯಲು ವಿವಿಧ ಆ್ಯಪ್‌ಗಳನ್ನು ಬಳಸಬೇಕಾಗುತ್ತದೆ. ಆದರೆ ಈ ಸಮಸ್ಯೆಗಳನ್ನು ನಿವಾರಣೆಗೆಂದೇ ಹೊಸ ಐಆರ್‌ಸಿಟಿಸಿ ಸೂಪರ್ ಆ್ಯಪ್ ಅನ್ನು ಐಆರ್‌ಸಿಟಿಸಿ ಪರಿಚಯಿಸಲಿದೆ.

ಈ ರೈಲ್ವೇ ಅಪ್ಲಿಕೇಶನ್ ಈ ವರ್ಷಾಂತ್ಯದೊಳಗೆ ಅಥವಾ ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಈ ಅಪ್ಲಿಕೇಶನ್ ನ ಮಹತ್ವವೇನು, ಇದರಲ್ಲಿ ದೊರೆಯುವ ಸೇವೆಗಳು ಯಾವುದು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

IRCTC Super App

ಯಾವ ಸೇವೆಗಳು ಲಭ್ಯ?

ಐಆರ್‌ಸಿಟಿಸಿ ಸೂಪರ್ ಅಪ್ಲಿಕೇಶನ್‌ನಲ್ಲಿ ಹಲವಾರು ಸೇವೆಗಳು ಲಭ್ಯವಿದೆ. ಅವುಗಳಲ್ಲಿ ಮುಖ್ಯವಾದವುಗಳು ಇಂತಿವೆ.

ಹೊಸ ‘ಸೂಪರ್ ಆ್ಯಪ್’ನಲ್ಲಿ ಬಹುತೇಕ ಎಲ್ಲಾ ಸೇವೆಗಳನ್ನು ಪಡೆಯಬಹುದು.

ಈ ಅಪ್ಲಿಕೇಶನ್ ಮೂಲಕ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಪ್ಲಾಟ್‌ಫಾರ್ಮ್ ಪಾಸ್ ಅನ್ನು ಪಡೆಯಬಹುದು.

ಮಾನಿಟರ್ ವೇಳಾಪಟ್ಟಿ ಪರಿಶೀಲನೆ ಸೇರಿದಂತೆ ಹಲವು ರೈಲು ಪ್ರಯಾಣಕ್ಕೆ ಸಂಬಂಧಿಸಿದ ಇತರ ಕಾರ್ಯಗಳನ್ನು ಸಹ ಪೂರ್ಣಗೊಳಿಸಬಹುದು.

ಸೆಂಟರ್ ಫಾರ್ ರೈಲ್ವೇ ಮಾಹಿತಿ ವ್ಯವಸ್ಥೆ (CRIS) ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದರ ಸಹಾಯದಿಂದ ರೈಲು ಪ್ರಯಾಣದ ಮಾಹಿತಿಯನ್ನು ಪಡೆಯಬಹುದು.

ಈ ಅಪ್ಲಿಕೇಶನ್ ಈಗಾಗಲೇ ಅಸ್ತಿತ್ವದಲ್ಲಿರುವ ಸಿಸ್ಟಂನೊಂದಿಗೆ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಐಆರ್‌ಸಿಟಿಸಿಯ ಈ ಆಪ್‌ನಲ್ಲಿ ಅಡುಗೆ ಮತ್ತು ಪ್ರವಾಸೋದ್ಯಮ ಸೇವೆಗಳನ್ನು ಬಳಸಬಹುದು.

ಬಳಕೆದಾರರಿಗೆ ಸಾಕಷ್ಟು ಪ್ರಯೋಜನ ನೀಡುವ ಈ ಅಪ್ಲಿಕೇಶನ್ ಕುರಿತು ಪರಿಶೀಲನೆಗಳು ನಡೆಯುತ್ತಿವೆ. ಇದು ಸಾಕಷ್ಟು ಬಳಕೆದಾರರಿಗೆ ಪ್ರಯೋಜನಕಾರಿಯಾಗಲಿದೆ.

Supreme Court: ಅಲಿಘಡ ಮುಸ್ಲಿಂ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಪ್ರಸ್ತುತ ಐಆರ್‌ಸಿಟಿಸಿ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ರೈಲು ಸಂಪರ್ಕ, ಇ-ಕ್ಯಾಟರಿಂಗ್ ಫುಡ್ ಆನ್ ಟ್ರ್ಯಾಕ್, ರೈಲ್ವೆ ಸಹಾಯ ಮತ್ತು ರಾಷ್ಟ್ರೀಯ ರೈಲು ವಿಚಾರಣೆಯಂತಹ ವ್ಯವಸ್ಥೆಯನ್ನು ಹೊಂದಿದೆ.