ಪಾಟ್ನಾ: ಶುಕ್ರವಾರ ಬೆಳಗ್ಗೆ ಛತ್ ಪೂಜೆ (Chhath pooja) ವೇಳೆ ಬಿಹಾರದ (Bihar) ಛಾಪ್ರಾದ ಕೊಳವೊಂದರಲ್ಲಿ ದೋಣಿ ಮುಳುಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಇನ್ನೊಬ್ಬ ನಾಪತ್ತೆಯಾಗಿದ್ದಾನೆ. ಮೃತರನ್ನು ತಾರಯ್ಯದ ಪಂಚಭಿಂಡಾ ಗ್ರಾಮದ ನಿವಾಸಿಗಳಾದ ಬಿಟ್ಟು ಕುಮಾರ್ (20) ಮತ್ತು ಸೂರಜ್ ಕುಮಾರ್ (18) ಎಂದು ಗುರುತಿಸಲಾಗಿದೆ. ದೋಣಿ ನದಿಯಲ್ಲಿ ಮಗುಚಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Tragic Video) ಆಗಿದೆ.
छोटी सी नाव पर क्षमता से अधिक लोग सवार थे, जिसके बेकाबू होने से हादसा हुआ !!
— MANOJ SHARMA LUCKNOW UP🇮🇳🇮🇳🇮🇳 (@ManojSh28986262) November 8, 2024
पानी में डूबने से दो लोगों की मौत हो गई, वहीं, 8 लोग सुरक्षित बाहर निकल गए, उनका अस्पताल में इलाज चल रहा है !!
बिहार के छपरा के पचभिंडा में एक तालाब में शुक्रवार सुबह एक ओवरलोड नाव पलट गई !!… pic.twitter.com/Q8azfl3lzD
ವಿಡಿಯೋದಲ್ಲಿ ಕಾಣಿಸುವಂತೆ ದೋಣಿ ಮಗುಚುತ್ತಿದ್ದಂತೆ ಸುತ್ತಲೂ ಇದ್ದವರು ರಕ್ಷಣೆಗೆ ಧಾವಿಸಿದ್ದಾರೆ. ನೀರಿನಲ್ಲಿದ್ದವರನ್ನು ಮೇಲೆ ದಡಕ್ಕೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿದ್ದರು. ನೀರಿನಿಂದ ಮೇಲಕ್ಕೆತ್ತಲ್ಪಟ್ಟವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Viral video: ಬಸ್ ಓಡಿಸುತ್ತಿದ್ದಾಗಲೇ ಬಿಎಂಟಿಸಿ ಚಾಲಕ ಹೃದಯಾಘಾತದಿಂದ ಸಾವು; 50 ಜನರ ಜೀವ ಉಳಿಸಿದ ಕಂಡಕ್ಟರ್
ಛತ್ ಪೂಜೆಯ ಅಂತಿಮ ದಿನದಂದು ಜನರು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ದೋಣಿಯನ್ನು ಬಳಸಿದ್ದಾರೆ. ಒಂದು ದೋಣಿಯಲ್ಲಿ 10 ಮಂದಿ ಪ್ರಯಾಣ ಮಾಡಿದ್ದಾರೆ. ಇದರಿಂದ ಭಾರ ಜಾಸ್ತಿಯಾಗಿ ದೋಣಿ ಮಗುಚಿದೆ. ಉಳಿದವರು ಈಜಿ ದಡ ಸೇರಿದರೆ ಕೆಲವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಇಬ್ಬರು ನೀರಿನಿಂದ ಹೊರಗೆ ಬರಲಾಗದೆ ಮೃತ ಪಟ್ಟಿದ್ದಾರೆ. ಘಟನೆ ನಡೆದ 30 ನಿಮಿಷಗಳ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಓರ್ವ ನಾಪತ್ತೆಯಾಗಿದ್ದಾನೆ ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಸ್ಥಳೀಯ ಪೊಲೀಸರು ದೋಣಿ ನಡೆಸುವವನಿಗಾಗಿ ಶೋಧ ನಡೆಸುತ್ತಾರೆ.
ಗಣೇಶ ಚತುರ್ಥಿ ಸಮಯದಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆಂದು ಹೋದ ತಂದೆ ಮಗ ಸೇರಿಂದತೆ ಮೂವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರಿನ ತುರುವೆಕೆರೆ ಬಳಿ ನಡೆದಿತ್ತು. ಮೃತರನ್ನು ರಂಗನಹಟ್ಟಿ ಗ್ರಾಮದ ನಿವಾಸಿಗಳಾದ ರೇವಣ್ಣ (50), ಅವರ ಮಗ ಶರತ್ (26) ಮತ್ತು ದಯಾನಂದ್ (22) ಮೃತ ಪಟ್ಟಿದ್ದರು. ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲು ಹೋಗಿ ಈ ಘಟನೆ ನಡೆದಿತ್ತು.