ದಿನೇದಿನೆ ಜೀವನ ನಿರ್ವಹಣಾ ವೆಚ್ಚ (Cost of Living) ಹೆಚ್ಚಾಗುತ್ತಿದೆ. ಹೀಗಿರುವಾಗ ವೃತ್ತಿ ಜೀವನದ ಪ್ರಾರಂಭದಲ್ಲೇ ನಿವೃತ್ತಿಯ ಬಗ್ಗೆ ಯೋಚಿಸುವುದು (Retirement Plan) ಒಳ್ಳೆಯದು. ಮಾಸಿಕವಾಗಿ 5,000 ರೂ. ಉಳಿತಾಯ (Investment) ಮಾಡಲು ಪ್ರಾರಂಭಿಸಿದರೆ ನಿವೃತ್ತಿ ವೇಳೆಗೆ 2 ಕೋಟಿ ರೂ. ಅನ್ನು ಗಳಿಸಬಹುದು. ನಿವೃತ್ತಿ ಯೋಜನೆಗಳನ್ನು ವೃತ್ತಿಜೀವನದ ಪ್ರಾರಂಭದಲ್ಲಿ ಮಾಡುವುದು ಉತ್ತಮ. ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ (SIP) ಮಾಸಿಕ 5,000 ರೂ. ಅನ್ನು ನಿರಂತರ ಹೂಡಿಕೆ ಮಾಡಿದರೆ ನಿವೃತ್ತಿ ವೇಳೆ ಹೂಡಿಕೆದಾರರು 2 ಕೋಟಿ ರೂ. ಅನ್ನು ಗಳಿಸಬಹುದು. ಅದು ಹೇಗೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ನಿವೃತ್ತ ಜೀವನ ಎಲ್ಲರಿಗೂ ಬಂದೇ ಬರುವ ಒಂದು ಕಾಲಘಟ್ಟವಾಗಿದೆ. ಇದಕ್ಕಾಗಿ ತಡವಾಗಿ ಯೋಚಿಸಬಾರದು. ಮುಂಚಿತವಾಗಿಯೇ ವ್ಯವಸ್ಥಿತ ಹೂಡಿಕೆಯನ್ನು ಪ್ರಾರಂಭಿಸಬೇಕು. ದೀರ್ಘಾವಧಿಯ ಉಳಿತಾಯ, ಹೂಡಿಕೆಯಿಂದ ಮಾತ್ರ ನಿವೃತ್ತಿ ವೇಳೆಗೆ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಿದೆ. ವೃತ್ತಿ ಜೀವನದ ಬಳಿಕ ನಮ್ಮ ಜೀವನ ಸುಗಮವಾಗಿ ಸಾಗಬೇಕಾದರೆ ನಿವೃತ್ತಿ ಯೋಜನೆಯನ್ನು ಮಾಡಲೇಬೇಕು. ಈ ಸಂದರ್ಭದಲ್ಲಿ ದೈನಂದಿನ ಖರ್ಚು, ಜೊತೆಗೆ ಅನಿರೀಕ್ಷಿತ ಖರ್ಚು ವೆಚ್ಚಗಳನ್ನು ಸರಿದೂಗಿಸಿಕೊಳ್ಳಲು ಸರಿಯಾದ ಯೋಜನೆ ಮುಖ್ಯವಾಗುತ್ತದೆ. ಹೀಗಾಗಿ ತಡವಾಗಿ ಪ್ರಾರಂಭಿಸುವುದಕ್ಕಿಂತ ಮೊದಲೇ ಹೂಡಿಕೆಯನ್ನು ಪ್ರಾರಂಭಿಸುವುದು ಉತ್ತಮ.
ಎಸ್ಐಪಿಯಲ್ಲಿ ಹೂಡಿಕೆ ಹೇಗೆ?
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಹೂಡಿಕೆದಾರರಿಗೆ ನಿತ್ಯದ, ವಾರದ, ತಿಂಗಳ, ಆರು ತಿಂಗಳ, ವರ್ಷದಲ್ಲಿ ನಿಯಮಿತವಾಗಿ ನಿರ್ಧಿಷ್ಟ ಮೊತ್ತವನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಇದರಿಂದ ಕಾಲಾನಂತರದಲ್ಲಿ ನಿರ್ದಿಷ್ಟ ಮೊತ್ತವನ್ನು ಮರಳಿ ಪಡೆಯಬಹುದು.
ವ್ಯವಸ್ಥಿತ ಹೂಡಿಕೆ ಯೋಜನೆಯಲ್ಲಿ ಹೂಡಿಕೆದಾರರು ತಮ್ಮ ಹಣಕಾಸಿನ ಆಧಾರದ ಮೇಲೆ ಹೂಡಿಕೆಯನ್ನು ಪ್ರಾರಂಭಿಸಬಹುದು. ನಿರ್ಧಿಷ್ಟ ಸಂದರ್ಭದಲ್ಲಿ ನಿಲ್ಲಿಸಿ ಬೇಕಿದ್ದರೆ ಮತ್ತೆ ಆರಂಭಿಸಬಹುದಾಗಿದೆ.
ನಿವೃತ್ತಿ ಯೋಜನೆಯನ್ನು ರೂಪಿಸುತ್ತಿದ್ದರೆ ಮಾಸಿಕ ಆದಾಯದ ಶೇ. 20ರಷ್ಟನ್ನು ನಾವು ಹೂಡಿಕೆ ಮಾಡಬೇಕು. ಒಂದು ವೇಳೆ 25,000 ರೂ. ಮಾಸಿಕ ವೇತನದಲ್ಲಿ 5,000 ರೂ. ಅನ್ನು ಎಸ್ ಐಪಿಯಲ್ಲಿ ಹೂಡಿಕೆ ಮಾಡಿದರೆ ಶೇ. 12ರಷ್ಟು ವಾರ್ಷಿಕ ಆದಾಯವನ್ನು ನಿರೀಕ್ಷಿಸಬಹುದು.
ಎಷ್ಟು ವರ್ಷ ಹೂಡಿಕೆ ಮಾಡಬೇಕು?
ನಿರೀಕ್ಷಿತ ಆದಾಯ ಶೇ. 12 ಆಗಿದ್ದರೆ ಒಟ್ಟು 32 ವರ್ಷಗಳ ಕಾಲ ಮಾಸಿಕ 5,000 ರೂ. ಹೂಡಿಕೆ ಮಾಡುವ ಯೋಜನೆ ಮಾಡಬೇಕು. ಇದರಿಂದ ಒಟ್ಟು ಹೂಡಿಕೆ ಮೊತ್ತ 19,20,000 ರೂ. ಆದರೆ ಅಂದಾಜು ಬಂಡವಾಳ ಲಾಭ ಗಳು ಸೇರಿ 2,06,26,485 ರೂ. ಆಗುತ್ತದೆ. 32 ವರ್ಷಗಳ ಅನಂತರ ಅಂದಾಜು ನಿವೃತ್ತಿ ಮೊತ್ತ 2,25,46,485 ರೂ. ಆಗುತ್ತದೆ.
ಮಾಸಿಕ 25,000 ರೂ. ಆದಾಯ ಗಳಿಸುವವರು 25 ವರ್ಷ ವಯಸ್ಸಿನಲ್ಲಿ ಮ್ಯೂಚುಯಲ್ ಫಂಡ್ ಎಸ್ ಐಪಿಯಲ್ಲಿ ಹೂಡಿಕೆ ಮಾಡಲು ಮಾಸಿಕವಾಗಿ 5,000 ರೂ. ಹೂಡಿಕೆ ಮಾಡಿದರೆ 57 ವರ್ಷದ ಬಳಿಕ 2 ಕೋಟಿ ರೂಪಾಯಿಗಳ ಅಂದಾಜು ನಿವೃತ್ತಿ ಆದಾಯವನ್ನು ಪಡೆಯಬಹುದು.
32 ವರ್ಷಗಳಲ್ಲಿ ನಿವೃತ್ತಿ ಮೊತ್ತ ಹೇಗೆ ಹೆಚ್ಚಾಗುತ್ತದೆ?
10 ವರ್ಷಗಳಲ್ಲಿ ಮಾಸಿಕ ಎಸ್ಐಪಿ ಹೂಡಿಕೆ ಮೊತ್ತವು 6,00,000 ರೂ. ಹಾಗೂ ಅಂದಾಜು ಬಂಡವಾಳ ಲಾಭ 5,61,695 ರೂ. ಆಗಿರುತ್ತದೆ. ಈ ಮೂಲಕ ನಿವೃತ್ತಿ ಆದಾಯ 11,61,695 ರೂ. ಆಗಿರುತ್ತದೆ.
ಇಪ್ಪತ್ತು ವರ್ಷಗಳ ಅವಧಿಯಲ್ಲಿ ಹೂಡಿಕೆ ಮಾಡಿದ ಮೊತ್ತವು 12,00,000 ರೂ. ಆಗಿರುತ್ತದೆ. ಅಂದಾಜು ಬಂಡವಾಳ ಲಾಭ 37,95,740 ರೂ. ಆಗಿರುತ್ತದೆ. ಒಟ್ಟು ನಿವೃತ್ತಿ ಮೊತ್ತ 49,95,740 ರೂ. ಆಗಿರುತ್ತದೆ.
SBI FD scheme: ಎಸ್ಬಿಐ ಅಮೃತ್ ಕಲಶ್-ಅಮೃತ್ ವೃಷ್ಟಿ ಸ್ಥಿರ ಠೇವಣಿ ಯೋಜನೆ; ಯಾವುದು ಹೆಚ್ಚು ಲಾಭದಾಯಕ?
ಸರಿಸುಮಾರು 32 ವರ್ಷಗಳಲ್ಲಿ ಹೂಡಿಕೆ ಮೊತ್ತವು 19,20,000 ರೂ. ಆದರೆ ಬಂಡವಾಳ ಲಾಭಗಳು 2,06,26,485 ರೂ. ಆಗಿರುತ್ತದೆ. ಇದರಿಂದ ಅಂದಾಜು ನಿವೃತ್ತಿ ಮೊತ್ತ 2,25,46,485 ರೂ. ಆಗುತ್ತದೆ.