Monday, 25th November 2024

DY Chandrachud: ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾದ ನಂತರ ಚಂದ್ರಚೂಡ್ ಮುಂದಿರುವ ನಿರ್ಬಂಧಗಳೇನು?

D.Y. Chandrachud

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ. ಚಂದ್ರಚೂಡ್ (DY Chandrachud) ಅವರ ಅಧಿಕಾರಾವಧಿ ನವೆಂಬರ್ 10ರಂದು ಅಧಿಕೃತವಾಗಿ ಕೊನೆಗೊಳ್ಳಲಿದೆ. ಅವರ ಉತ್ತರಾಧಿಕಾರಿಯಾಗಿ ಸುಪ್ರೀಂ ಕೋರ್ಟ್‌ನ (Supreme Court) ಅತ್ಯಂತ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ (Justice Sanjiv Khanna) ಅವರು ನವೆಂಬರ್ 11ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಭಾರತದ ಮುಖ್ಯ ನ್ಯಾಯಾಧೀಶರು (CJI) ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಮತ್ತು ಸಂವಿಧಾನವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರ ಅಧಿಕಾರಾವಧಿ ಮುಗಿದ ಅನಂತರ ಅವರು ಇತರೆ ಯಾವುದೇ ಭಾರತೀಯ ನ್ಯಾಯಾಲಯದಲ್ಲಿ ಕಾನೂನು ವೃತ್ತಿ ಮಾಡುವುದನ್ನು ಸಂವಿಧಾನದ 124 (7) ರ ಪ್ರಕಾರ ನಿಷೇಧಿಸಲಾಗಿದೆ. ಈ ನಿರ್ಬಂಧವು ನ್ಯಾಯಾಧೀಶರ ಅಧಿಕಾರಾವಧಿ ಮುಗಿದ ಬಳಿಕವೂ ಅವರು ನಿಷ್ಪಕ್ಷಪಾತವನ್ನು ಕಾಪಾಡಿಕೊಳ್ಳುವಂತೆ ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿದೆ.

ಏಕೆ ನಿಷೇಧ?

ನಿವೃತ್ತಿಯ ಅನಂತರ ಸಿಜೆಐಗಳಿಗೆ ನಿಷೇಧವು ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯ ಮತ್ತು ಸಮಗ್ರತೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡುವ ಗುರಿಯನ್ನು ಹೊಂದಿದೆ. ನ್ಯಾಯಾಂಗವು ಪ್ರಜಾಪ್ರಭುತ್ವದ ಆಧಾರಸ್ತಂಭವಾಗಿದ್ದು, ಅದರ ಅಧಿಕಾರವು ನಿಷ್ಪಕ್ಷಪಾತದ ಮೇಲೆ ಅವಲಂಬಿತವಾಗಿದೆ.

ಪ್ರಮುಖ ಕಾರಣಗಳು ಏನೇನು?

ನಿವೃತ್ತಿಯ ಅನಂತರ ಸಿಜೆಐಗಳಿಗೆ ನಿಷೇಧಕ್ಕೆ ಹಲವು ಪ್ರಮುಖ ಕಾರಣಗಳಿವೆ.

ವೃತ್ತಿಯ ಅನಂತರ ಸಿಜೆಐಗಳಿಗೆ ಇತರ ನ್ಯಾಯಾಂಗದಲ್ಲಿ ಕೆಲಸ ಮಾಡುವುದನ್ನು ನಿರ್ಬಂಧಿಸುವ ಮೂಲಕ ಮುಂದೆ ಎದುರಾಗಬಹುದಾದ ಪಕ್ಷಪಾತದ ಆರೋಪ, ಇದರಿಂದ ಉಂಟಾಗಬಹುದಾದ ಘರ್ಷಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಧಿನಿವೃತ್ತಿಯ ಅನಂತರ ಕಾನೂನು ಅಭ್ಯಾಸ ಮಾಡುವುದರಿಂದ ಸುಪ್ರೀಂ ಕೋರ್ಟ್ ಮಟ್ಟದಲ್ಲಿ ಸೇವೆ ಸಲ್ಲಿಸಿದವರ ಅಧಿಕಾರ ಮತ್ತು ಘನತೆಗೆ ಧಕ್ಕೆ ತರಬಹುದು. ಸೂಕ್ಷ್ಮ ಮಾಹಿತಿಗಳನ್ನು ಕಾನೂನು ಪ್ರಕರಣಗಳಲ್ಲಿ ಬಳಸಿದರೆ ನೈತಿಕ ಪ್ರಶ್ನೆಗಳು ಎದುರಾಗಬಹುದು.

ನಿವೃತ್ತಿ ಬಳಿಕ ಸಿಜೆಐ ಏನು ಮಾಡಬಹುದು?

ನ್ಯಾಯಾಲಯಗಳಲ್ಲಿ ಕಾನೂನು ಅಭ್ಯಾಸ ಮಾಡಲು ಸಾಧ್ಯವಾಗದಿದ್ದರೂ ನಿವೃತ್ತ ಸಿಜೆಐಗಳು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶವಿದೆ. ನೈತಿಕ ಮಾನದಂಡಗಳನ್ನು ಉಲ್ಲಂಘಿಸದೆ ಕಾನೂನು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಹುದು.

ನಿವೃತ್ತ ನ್ಯಾಯಮೂರ್ತಿಗಳು ಸಾಮಾನ್ಯವಾಗಿ ಮಧ್ಯಸ್ಥಗಾರರು ಅಥವಾ ಮಧ್ಯವರ್ತಿಗಳಾಗುತ್ತಾರೆ. ಸಂಕೀರ್ಣ ಕಾನೂನು ವಿಷಯಗಳನ್ನು ಪರಿಹರಿಸುವಲ್ಲಿ ಅವರ ಪರಿಣತಿಯು ಮೌಲ್ಯಯುತವಾಗಿರುತ್ತದೆ. ಮಧ್ಯಸ್ಥಿಕೆ ಮತ್ತು ರಾಜಿ ಕಾಯಿದೆ 1996ರ ಅನ್ವಯ ನಿವೃತ್ತ ನ್ಯಾಯಾಧೀಶರು ಮಧ್ಯಸ್ಥಗಾರರಾಗಿ ಸೇವೆ ಸಲ್ಲಿಸಲು ಅನುಮತಿ ಇದೆ.

ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಅಥವಾ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಂತಹ ಆಯೋಗಗಳಿಗೆ ಮುಖ್ಯಸ್ಥರಾಗಬಹುದು. ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಆಡಳಿತಾತ್ಮಕ ತೀರ್ಪಿನ ಸಮಸ್ಯೆಗಳಿಗೆ ಅವರು ತಮ್ಮ ಅನುಭವವನ್ನು ಬಳಸಿಕೊಳ್ಳಬಹುದು.

ಅನೇಕ ನಿವೃತ್ತ ನ್ಯಾಯಾಧೀಶರು ಕಾನೂನು ಶಾಲೆಗಳಲ್ಲಿ ಬೋಧನೆ, ಉಪನ್ಯಾಸಗಳನ್ನು ನಡೆಸುವುದು ಅಥವಾ ಪ್ರಕಟಣೆಗಳನ್ನು ರಚಿಸುವ ಮೂಲಕ ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಾರೆ. ನಿವೃತ್ತ ನ್ಯಾಯಾಧೀಶರನ್ನು ರಾಜ್ಯಪಾಲರು ಅಥವಾ ಸರ್ಕಾರಿ ಸಮಿತಿಗಳ ಸದಸ್ಯರಂತಹ ಸಾಂವಿಧಾನಿಕ ಪಾತ್ರಗಳಿಗೆ ನೇಮಿಸಬಹುದು.

Champions Trophy 2025: ಹೈಬ್ರೀಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ; ವರದಿ ತಳ್ಳಿ ಹಾಕಿದ ಪಾಕ್‌

ಕೆಲವು ನಿವೃತ್ತ ನ್ಯಾಯಾಧೀಶರು ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಆದರೆ ಇದು ಚರ್ಚೆಗೆ ಕಾರಣವಾಗುತ್ತದೆ. ಉದಾಹರಣೆಗೆ ಮಾಜಿ ಸಿಜೆಐ ರಂಜನ್ ಗೊಗೊಯ್ ಅವರು ನಿವೃತ್ತಿಯ ಅನಂತರ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದು, ಅಂತಹ ಸ್ಥಾನಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತವೆಯೇ ಎನ್ನುವ ಚರ್ಚೆಗಳಿಗೆ ಕಾರಣವಾಗಿತ್ತು.