ಬೆಂಗಳೂರು: ಸೂಪರ್ ಮಾರ್ಟ್ ಒಂದರಲ್ಲಿ ಫುಡ್ ಡೆಲಿವರಿ ಬಾಯ್ (Zomato Delivery Boy) ಒಬ್ಬ ಬ್ಯಾಗ್ ಕದಿಯುತ್ತಿರುವ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಝೊಮಾಟೊ ಸಂಸ್ಥೆಯ ಜಾಕೆಟ್ ಧರಿಸಿದ ವ್ಯಕ್ತಿ ಬೆಂಗಳೂರಿನ (Bengaluru) ಬಸಾಪುರದ ಗ್ರ್ಯಾಂಡ್ ಮಾರ್ಟ್ನಿಂದ ಬ್ಯಾಗ್ ಕದ್ದಿದ್ದಾನೆ. ಗುರುವಾರ ರಾತ್ರಿ ಸೂಪರ್ ಮಾರ್ಕೆಟ್ನ ಹೊರಭಾಗದ ಕಪಾಟಿನಲ್ಲಿ ಇಟ್ಟಿದ್ದ ಬ್ಯಾಗ್ ಎತ್ತಿಕೊಂಡು ರಾಜಾರೋಷವಾಗಿ ನಡೆದಿದ್ದಾನೆ. ಆತ ಬ್ಯಾಗ್ ತೆಗೆದು ಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ (Viral Video).
We would like to bring a serious matter to your attention. Unfortunately, an incident occurred at our Grand Mart Supermarket in Bangalore, where a Zomato employee was involved in a theft. The individual was caught on surveillance cameras stealing a bag from our premises, which… pic.twitter.com/G5XIfQ470D
— Karnataka Portfolio (@karnatakaportf) November 8, 2024
ಪ್ರವೇಶದ್ವಾರದಲ್ಲಿ ಸೆಕ್ಯುರಿಟಿ ಇಲ್ಲದ್ದನ್ನು ಗಮಸಿದ ಡೆಲಿವರಿ ಬಾಯ್ ಸೂಪರ್ ಮಾರ್ಕೆಟ್ ಹೊರಭಾಗದ ಕಪಾಟಿನಲ್ಲಿಟ್ಟಿದ್ದ ಬ್ಯಾಗ್ನ್ನು ಎಗರಿಸಿದ್ದಾನೆ. ಆರಂಭದಲ್ಲಿ ಸುತ್ತ ಮುತ್ತಲೂ ನೋಡುತ್ತಾ ನಿಧಾನವಾಗಿ ಬ್ಯಾಗ್ನತ್ತ ಬರುವ ಈತ ಯಾರೂ ಇಲ್ಲದ್ದನ್ನು ಗಮನಿಸಿ ಬ್ಯಾಗನ್ನು ಎತ್ತಿಕೊಂಡು ಕಪಾಟಿನ ಹಿಂಬದಿಗೆ ಹೋಗುತ್ತಾನೆ. ನಂತರ ತನ್ನ ಬೆನ್ನಿಗಿದ್ದ ಬ್ಯಾಗ್ನಲ್ಲಿ ಕದ್ದ ಚೀಲವನ್ನು ಹಾಕಿ ಅಲ್ಲಿಂದ ಪರಾರಿಯಾಗುತ್ತಾನೆ.
ಇದನ್ನೂ ಓದಿ: Zomato delivery agent: ಭಾರೀ ಮಳೆಗೆ ಕೆಟ್ಟು ನಿಂತ ಬೈಕ್; Zomato ಡೆಲಿವರಿ ಬಾಯ್ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಈ ದೃಶ್ಯವನ್ನು ʼಕರ್ನಾಟಕ ಪೋರ್ಟ್ಫೋಲಿಯೋ’ ಹೆಸರಿನ ಪೇಜ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
We have forwarded this complaint to @DCPSEBCP @acpelecity @elecityps for necessary action.
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) November 8, 2024
ಇತ್ತೀಚೆಗೆ ಝೊಮಾಟೊ ಡೆಲಿವರಿ ಬಾಯ್ ಆರ್ಡರ್ ತಲುಪಿಸಿದ ನಂತರ ಗ್ರಾಹಕರ ಮನೆ ಮುಂದೆ ಇಟ್ಟಿದ್ದ ಆಹಾರ ಪದಾರ್ಥವನ್ನು ಕದ್ದಿರುವ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ಆದಿತ್ಯ ಕಲ್ರಾ ಎನ್ನುವವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು.
We caught @Zomato delivery theft on our CCTV camera in Bangalore. He delivers the order, spots our other food package at the door, quietly picks it up and goes away. Shocking indeed. pic.twitter.com/oyeNebAdir
— Aditya Kalra (@adityakalra) June 25, 2024