ಯುಎಇಯಲ್ಲಿ ಆಯೋಜಿಸಲಾಗುವ 2024ರ ಪುರುಷರ ಅಂಡರ್-19 ಏಷ್ಯಾಕಪ್‌ಗಾಗಿ(U19 Men’s Asia Cup) ಗುಂಪುಗಳು ಮತ್ತು ಪಂದ್ಯಗಳ ವೇಳಾಪಟ್ಟಿಯನ್ನು ಶನಿವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಪ್ರಕಟಿಸಿದೆ. ದುಬೈ ಮತ್ತು ಶಾರ್ಜಾದಲ್ಲಿ ಪಂದ್ಯಗಳು ನಡೆಯಲಿದ್ದು, 15 ಪಂದ್ಯಗಳು 8 ದಿನಗಳ ಕಾಲ ನಡೆಯಲಿದೆ. ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಮೀಸಲು ದಿನ ಇರಿಸಲಾಗಿದೆ. ಪಂದ್ಯಾವಳಿ ನವೆಂಬರ್ 29 ರಿಂದ ಡಿಸೆಂಬರ್ 8ರ ತನಕ ಸಾಗಲಿದೆ. ಒಟ್ಟು 8 ತಂಡಗಳನ್ನು ತಲಾ 4 ರಂತೆ 2 ಗುಂಪುಗಳಾಗಿ ವಿಂಗಡಿಸಲಾಗಿದೆ.
ಭಾರತ ತನ್ನ ಮೊದಲ ಪಂದ್ಯವನ್ನು ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಿಲಿದೆ. ಈ ಪಂದ್ಯ ನವೆಂಬರ್ 30 ರಂದು ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಾಂಗ್ಲಾದೇಶ ತಂಡ ಅಫಘಾನಿಸ್ತಾನ ವಿರುದ್ಧ ಆಡಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡ ನೇಪಾಳ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ IND vs SA 1st T20I: ಗೆಲುವಿನಲ್ಲೂ ದಾಖಲೆ ಬರೆದ ಭಾರತ
ಅಂಡರ್-19 ಏಷ್ಯಾಕಪ್ ಟೂರ್ನಿಯ ಇದುವರೆಗಿನ 9 ಆವೃತ್ತಿಯಲ್ಲಿ ಅತ್ಯಧಿಕ ಟ್ರೋಫಿ ಗೆದ್ದ ದಾಖಲೆ ಭಾರತ ತಂಡದ ಹೆಸರಿನಲ್ಲಿದೆ. ಭಾರತ ದಾಖಲೆಯ 7 ಟ್ರೋಫಿ ಗೆದ್ದಿದೆ. ಉಳಿದಂತೆ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ತಲಾ ಒಂದೊಂದು ಪ್ರಶಸ್ತಿ ಗೆದ್ದಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾ ಇದುವರೆಗೂ ಕಪ್ ಗೆದ್ದಿಲ್ಲ.
ಗುಂಪುಗಳು
ಗುಂಪು ʼಎʼ: ಭಾರತ, ಪಾಕಿಸ್ತಾನ, ಯುಎಇ ಮತ್ತು ಜಪಾನ್
ಗುಂಪು ʼಬಿʼ: ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಅಫಘಾನಿಸ್ತಾನ
ವೇಳಾಪಟ್ಟಿ
ದಿನಾಂಕ | ಪಂದ್ಯ | ತಾಣ |
ನವೆಂಬರ್ 29 | ಬಾಂಗ್ಲಾದೇಶ vs ಅಫ್ಘಾನಿಸ್ತಾನ | ದುಬೈ |
ನವೆಂಬರ್ 29 | ಶ್ರೀಲಂಕಾ vs ನೇಪಾಳ | ಶಾರ್ಜಾ |
ನವೆಂಬರ್ 30 | ಭಾರತ vs ಪಾಕಿಸ್ತಾನ | ದುಬೈ |
ನವೆಂಬರ್ 30 | ಯುಎಇ vs ಜಪಾನ್ | ಶಾರ್ಜಾ |
ಡಿಸೆಂಬರ್ 1 | ಬಾಂಗ್ಲಾದೇಶ vs ನೇಪಾಳ | ದುಬೈ |
ಡಿಸೆಂಬರ್ 1 | ಶ್ರೀಲಂಕಾ vs ಅಫ್ಘಾನಿಸ್ತಾನ | ಶಾರ್ಜಾ |
ಡಿಸೆಂಬರ್ 2 | ಪಾಕಿಸ್ತಾನ vs ಯುಎಇ | ದುಬೈ |
ಡಿಸೆಂಬರ್ 2 | ಭಾರತ vs ಜಪಾನ್ | ಶಾರ್ಜಾ |
ಡಿಸೆಂಬರ್ 3 | ಬಾಂಗ್ಲಾದೇಶ vs ಶ್ರೀಲಂಕಾ | ದುಬೈ |
ಡಿಸೆಂಬರ್ 3 | ಅಫ್ಘಾನಿಸ್ತಾನ vs ನೇಪಾಳ | ಶಾರ್ಜಾ |
ಡಿಸೆಂಬರ್ 4 | ಪಾಕಿಸ್ತಾನ vs ಜಪಾನ್ | ದುಬೈ |
ಡಿಸೆಂಬರ್ 4 | ಭಾರತ vs ಯುಎಇ | ಶಾರ್ಜಾ |
ಡಿಸೆಂಬರ್ 6 | ಸೆಮಿಫೈನಲ್ 1 | ದುಬೈ |
ಡಿಸೆಂಬರ್ 6 | ಸೆಮಿಫೈನಲ್ 2 | ಶಾರ್ಜಾ |
ಡಿಸೆಂಬರ್ 8 | ಫೈನಲ್ | ದುಬೈ |