ಬೆಂಗಳೂರು: ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆ (PGCET) ಬರೆದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಹಿ ಸುದ್ದಿ ನೀಡಿದೆ. ನವೆಂಬರ್ 9ರಂದು ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೊದಲ ಸುತ್ತಿನ ಅಣಕು ಸೀಟು ಹಂಚಿಕೆಯ ಫಲಿತಾಂಶ ಬಿಡುಗಡೆ ಮಾಡಲಿದೆ.
ಎಂಬಿಎ, ಎಂಸಿಎ, ಎಂ.ಇ, ಎಂ.ಟೆಕ್, ಎಂ.ಆರ್ಕ್ ಕೋರ್ಸ್ಗಳ ಪ್ರವೇಶಾತಿಗೆ ನಡೆದ ಸ್ನಾತಕೋತ್ತರ ಸಾಮಾನ್ಯ ಪರೀಕ್ಷಾ ಪ್ರವೇಶ ಪರೀಕ್ಷೆಯ ಅಣಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಾಧಿಕಾರದ ಅಧಿಕೃತ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳು ವೀಕ್ಷಿಸಬಹುದಾಗಿದೆ.
#PGCET-24 MBA, MCA, ME, https://t.co/5zOMRGtfh2, M.Arch ಕೋರ್ಸ್ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ನ.8 ಕೊನೆ ದಿನ. ನ.9ರಂದು ಅಣಕು ಸೀಟು ಹಂಚಿಕೆ ಫಲಿತಾಂಶ ಪ್ರಕಟ. ಅಂದೇ ಸಂಜೆ 6 ಗಂಟೆಗೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.@CMofKarnataka@drmcsudhakar pic.twitter.com/rT4m8Y3W1t
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) (@KEA_karnataka) November 7, 2024
ಫಲಿತಾಂಶ ಪರಿಶೀಲನೆ ಹೇಗೆ?
ಅಭ್ಯರ್ಥಿಗಳು ಅಣಕು ಸೀಟು ಹಂಚಿಕೆ ಫಲಿತಾಂಶ ನೋಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ಗೆ https://cetonline.karnataka.gov.in/kea/pgcet24 ಭೇಟಿ ನೀಡಬೇಕು. ಅಲ್ಲಿ ಕೇಳಲಾಗುವ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಅಣಕು ಸೀಟು ಹಂಚಿಕೆಯ ಫಲಿತಾಂಶ ವೀಕ್ಷಿಸಬಹುದಾಗಿದೆ.
ಪಿಜಿಸಿಇಟಿ 2024 ಮೊದಲ ಸುತ್ತಿನ ವೇಳಾಪಟ್ಟಿ
- ನ. 9: ಪಿಜಿಸಿಇಟಿ ಅಣಕು ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ
- ನ.9 ರಿಂದ 12: ಅಭ್ಯರ್ಥಿಗಳಿಗೆ ಆಯ್ಕೆಗಳ ಬದಲಾವಣೆಗೆ ಅವಕಾಶ
- ನ. 12: PGCET ಅಂತಿಮ ಸೀಟು ಹಂಚಿಕೆ ಪಟ್ಟಿ ಬಿಡುಗಡೆ
- ನ. 13 ರಿಂದ 14: ಹಂಚಿಕೆಯಾದ ಅಭ್ಯರ್ಥಿಗಳಿಂದ ಆಯ್ಕೆಯ ಅವಕಾಶ
- ನ. 13 ರಿಂದ 15: ಚಾಯ್ಸ್ -1, 2 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡುವುದು.
- ನ.16: ಚಾಯ್ಸ್ 1 ಅಭ್ಯರ್ಥಿಗಳು ಪ್ರವೇಶ ಆದೇಶ ಡೌನ್ಲೋಡ್ ಮಾಡಿಕೊಂಡು, ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುವುದು.
ಈ ಸುದ್ದಿಯನ್ನೂ ಓದಿ | Seat Blocking: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಬ್ಲಾಕ್ ದಂಧೆ: ಕ್ರಿಮಿನಲ್ ಕೇಸು ದಾಖಲು