ಟೆಹ್ರಾನ್: ಇರಾನ್ ಪರಮಾಣು ವಿಜ್ಞಾನಿಯೊಬ್ಬರನ್ನು ಟೆಹ್ರಾನ್ ನ ಹೊರವಲಯದಲ್ಲಿ ಹತ್ಯೆಗೈದಿರುವ ಘಟನೆ ನಡೆದಿದೆ.
ಶಸ್ತ್ರಧಾರಿ ಗುಂಪೊಂದು ವಿಜ್ಞಾನಿ ಮೋಹ್ಸೆನ್ ಫಖ್ರಿಝಾಡೆಹ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭ ದಲ್ಲಿ ಮೋಹ್ಸೆನ್ ಅವರ ರಕ್ಷಣಾ ಸಿಬ್ಬಂದಿಗಳು ಪ್ರತಿದಾಳಿ ನಡೆಸಿದ್ದರು ಕೂಡಾ ಮೋಹ್ಸೆನ್ ಗಂಭೀರವಾಗಿ ಗಾಯಗೊಂಡಿರುವು ದಾಗಿ ಇರಾನ್ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಫಕ್ರಿಝಾಡೆಹ್ ಅವರು ಸಂಶೋಧನಾ ಮತ್ತು ಆವಿಷ್ಕಾರ ಸಚಿವಾಲಯದ ಮುಖ್ಯಸ್ಥರಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವಿಜ್ಞಾನಿ ಮೋಹ್ಸೆನ್ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿರುವುದಾಗಿ ವರದಿ ವಿವರಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹೂ ಅವರನ್ನು “ಇರಾನ್ ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮದ ಪಿತಾಮಹ” ಎಂದು ಬಣ್ಣಿಸಿದ್ದರು.