Friday, 22nd November 2024

Khalistani Extremists Arrest: ಕೆನಡಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ ರೂವಾರಿ ಖಲಿಸ್ತಾನಿ ಮುಖಂಡ ಅರೆಸ್ಟ್‌

Khalistani

ಒಟ್ಟಾವಾ: ಕೆನಡಾದಲ್ಲಿ ಕಳೆದ ಭಾನುವಾರ ನಡೆದ ಹಿಂದೂ ದೇಗುಲದ ಮೇಲೆ ದಾಳಿ(Khalistani attack) ಮತ್ತು ಹಿಂದೂಗಳ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ರೂವಾರಿ ಖಲಿಸ್ತಾನಿ ಮುಖಂಡನನ್ನು ಪೊಲೀಸರು ಅರೆಸ್ಟ್‌(Khalistani Extremists Arrest) ಮಾಡಿದ್ದಾರೆ. ಪೀಲ್ ಪ್ರಾದೇಶಿಕ ಪೋಲೀಸ್ (PRP) ಬ್ರಾಂಪ್ಟನ್ ನಿವಾಸಿ 35 ವರ್ಷದ ಇಂದ್ರಜಿತ್‌ ಗೋಸಲ್‌(Inderjeet Gosal)ನನ್ನು ಅರೆಸ್ಟ್‌ ಮಾಡಿದ್ದಾರೆ.

ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇಗುಲದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮತ್ತು ಹಿಂದೂಗಳ ಮೇಲೆ ಮಾರಣಾಂತಿಕ ಆಯುಧಗಳಿಂದ ಹಲ್ಲೆ ಆರೋಪದ ಮೇಲೆ ಗೋಸಾಲ್‌ನಲ್ಲಿ ಅರೆಸ್ಟ್‌ ಮಾಡಲಾಗಿದೆ. ಇನ್ನು ಬಂಧನಕ್ಕೊಳಗಾದ ಕೆಲವೇ ಕೆಲವು ಗಂಟೆಗಳಲ್ಲಿ ಆತನನ್ನು ಷರತ್ತು ಬದ್ಧ ಜಾಮೀನಿನ ಮೂಲಕ ರಿಲೀಸ್‌ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂರೆ ಬ್ರಾಂಪ್ಟನ್‌ನಲ್ಲಿರುವ ಒಂಟಾರಿಯೊ ಕೋರ್ಟ್ ಆಫ್ ಜಸ್ಟಿಸ್‌ಗೆ ಹಾಜರಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಹಿಂದೂ ದೇಗುಲಗಳ ಮೇಲಿನ ಹಲ್ಲೆ ಖಂಡಿಸಿ ನವೆಂಬರ್ 8 ರಂದು ಹಿಂದೂ ಸಭಾ ದೇವಸ್ಥಾನದಲ್ಲಿ ನಡೆದ ಉಗ್ರ ಪ್ರತಿಭಟನೆ ನಂತರ,ಗೋಸಾಲ್‌ನನ್ನು ಬಂಧಿಸಲಾಗಿದೆ.

ಇಂದ್ರಜಿತ್‌ ಗೋಸಲ್‌ ಯಾರು?

ಇಂದ್ರಜಿತ್‌ ಗೋಸಲ್‌ನನ್ನು ನ್ಯಾಯಕ್ಕಾಗಿ ಸಿಖ್ಸ್‌ನ ಮುಖಂಡ, ಖಲಿಸ್ತಾನಿ ಉಗ್ರ ಗುರುಪತ್ವಂತ್ ಪನ್ನುನ್‌ನ ಲೆಫ್ಟಿನೆಂಟ್‌ ಎಂದು ಕರೆಯಲಾಗುತ್ತದೆ. ಕಳೆದ ವರ್ಷ ಜೂನ್ 18 ರಂದು ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಕೊಲ್ಲಲ್ಪಟ್ಟ ನಂತರ ಈತನನ್ನು ಜನಾಭಿಪ್ರಾಯ ಸಂಗ್ರಹದ ಕೆನಡಾದ ಮುಖ್ಯ ಸಂಘಟಕನನ್ನಾಗಿ ಆತನನ್ನು ನೇಮಿಸಲಾಯಿತು. ಕೆನಡಾದ ಪೋಲಿಸ್ ಪ್ರಕಾರ, ಖಲಿಸ್ತಾನ್ ಪರ ಅಂಶಗಳನ್ನು ಗುರಿಯಾಗಿಟ್ಟುಕೊಂಡು ಹಿಂಸಾತ್ಮಕ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವ 13 ಕೆನಡಿಯನ್ನರಲ್ಲಿ ಗೋಸಲ್ ಕೂಡ ಸೇರಿದ್ದಾನೆ ಎಂದು ವರದಿಯಾಗಿದೆ.

ಏನಿದು ಘಟನೆ?

ಕೆನಡಾ(Canada)ದ ಬಾಪ್ಟನ್‌ನಲ್ಲಿರುವ ಹಿಂದೂ ದೇಗುಲದ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದಾಳಿ ಮಾಡಿದ್ದು, ಅಲ್ಲಿದ್ದ ಹಿಂದೂ ಭ‍‍ಕ್ತರ ಮೇಲೆ ಹಲ್ಲೆ ನಡೆಸಿದ್ದರು. ಇನ್ನು ಈ ದಾಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಕಳೆದ ಭಾನುವಾರ ಈ ಘಟನೆ ನಡೆದಿದ್ದು, ಇಲ್ಲಿ ಪೂಜೆಗೆ ಬಂದಿದ್ದ ಜನರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ವಿಡಿಯೋದಲ್ಲಿ ಕೆಲವರು ಹಿಂದೂ ಸಭಾ ಮಂದಿರದ ಹೊರಗೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು. ಕೆನಡಾದಲ್ಲಿರುವ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಅವರು ಬ್ರಾಂಪ್ಟನ್‌ನ ಹಿಂದೂ ಸಭಾ ಮಂದಿರದಲ್ಲಿ ನಡೆದ ಹಿಂಸಾಚಾರದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಇನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೂಡ ಸೋಮವಾರ ಬ್ರಾಂಪ್ಟನ್ ದೇವಾಲಯದಲ್ಲಿ ಹಿಂದೂ ಭಕ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದು, ದೇಶದಲ್ಲಿ ಹಿಂಸಾಚಾರವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಭಾನುವಾರ, ಹಿಂದೂ ಸಭಾ ಮಂದಿರದಲ್ಲಿ ಭಕ್ತರ ಗುಂಪನ್ನು ಗುರಿಯಾಗಿಸಿಕೊಂಡು ಖಲಿಸ್ತಾನಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಕೆನಡಾದಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಖಂಡನೆ ವ್ಯಕ್ತಪಡಿಸಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನು ಬೆದರಿಸುವ ಹೇಡಿತನದ ಪ್ರಯತ್ನ ಎಂದು ಕರೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Khalistan attack: ಹಿಂದೂಗಳ ಮೇಲಿನ ಖಲಿಸ್ತಾನಿ ದಾಳಿಯಲ್ಲಿ ಕೆನಡಾ ಪೊಲೀಸ್‌ ಅಧಿಕಾರಿಯೂ ಭಾಗಿ; ವಿಡಿಯೋ ವೈರಲಾಗ್ತಿದ್ದಂತೆ ಸಸ್ಪೆಂಡ್‌