Friday, 22nd November 2024

Viral News: ಬ್ಲೈಂಡ್‌ ಡೇಟ್‌ ಧೋಖಾ! ಚೆಲುವೆಯನ್ನರಸಿ ಹೋದ ಅಂಕಲ್‌ ಕಿಡ್ನಾಪ್‌; 3 ಲಕ್ಷ ರೂ.ಗೆ ಡಿಮ್ಯಾಂಡ್‌ ಮಾಡಿದ ಖದೀಮರು

Viral News

ಲಖನೌ: ಇತ್ತೀಚೆಗೆ ಡೇಟಿಂಗ್‌ ಆಪ್‌ ಮೂಲಕ ವಂಚನೆಗೊಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಅಂತಹದ್ದೇ ಒಂದು ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಬ್ಲೈಂಡ್‌ ಡೇಟ್‌ಗೆಂದು (Blind Date) ಹೋದ ವ್ಯಕ್ತಿಯನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ (Viral News) ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ (Uttar Pradesh) ಲಲಿತ್‌ಪುರದ ನಿವಾಸಿ 50 ವರ್ಷದ  ಲಲ್ಲು ಚೌಬೆಯನ್ನು ಅಪಹರಣ ಮಾಡಿ   3 ಲಕ್ಷ ರೂ. ಬೇಡಿಕೆ ಇಟ್ಟ ಗ್ಯಾಂಗನ್ನು ಪೊಲೀಸರು ಹಡೆಮುರಿಕಟ್ಟಿದ್ದಾರೆ.

ಲಲ್ಲು ಚೌಬೆ ಮಹಿಳೆಯೊಬ್ಬರ ಜೊತೆ ಮಾತನಾಡುತ್ತಿದ್ದು ಆಕೆಯೂ ಅಪಹರಣಕಾರರ ಗ್ಯಾಂಗ್‌ ಸದಸ್ಯೆಯಾಗಿದ್ದಳು ಎಂಬುದು ತಿಳಿದು ಬಂದಿದೆ. ಹನಿಟ್ರಾಪ್‌ ಮಾಡುವ ಮೂಲಕ ಅಪಹರಣಕಾರರು ದುಬೆಯನ್ನು ಝಾನ್ಸಿಗೆ ಕರೆಸಿಕೊಂಡಿದ್ದರು. ನಂತರ ಆತನನ್ನು ಅಪಹರಣ ಮಾಡಿ ದುಬೆ ಮನೆಗೆ ಕರೆ ಮಾಡಿ 3 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಈಗಾಗಲೆ 1 ಲಕ್ಷ ರೂ. ಕೊಟ್ಟಿದ್ದ ಆತನ ಕುಟುಂಬಸ್ಥರು ನಂತರ ಪೊಲೀಸರ ಬಳಿ ದೂರನ್ನು ನೀಡಿದ್ದಾರೆ.

ಖದೀಮರು ಬಲೆಗೆ ಬಿದ್ದಿದ್ದೇ ರೋಚಕ!

ದುಬೆ ಮಗ ನೀಡಿದ ದೂರಿನ ಆಧಾರದ ಮೇಲೆ ತನಖೆ ಪ್ರಾರಂಭಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದುಬೆ ಮಗನಿಗೆ ಆರೋಪಿಗಳಿಗೆ ಕರೆ ಮಾಡಲು ಹೇಳಿ ಹಣ ಕೊಡುವುದಾಗಿ ಹೇಳಿಸಿದ ಪೊಲೀಸರು , ತಮ್ಮ ಸಿಬ್ಬಂದಿಯೊಬ್ಬರನ್ನು ದಬೆ ಮಗ ಎಂದು ಹೇಳಿ ಆರೋಪಿಗಳು ಹೇಳಿದ ಜಾಗಕ್ಕೆ ಕಳುಹಿಸಿದ್ದಾರೆ. ನಂತರ ಆರೋಪಿಗಳಲ್ಲಿ ಒಬ್ಬ ಬಂದು ಪೊಲೀಸ್‌ ಸಿಬ್ಬಂದಿಯನ್ನು ಅಪಹರಣ ಮಾಡಿದ ಜಾಗಕ್ಕೆ ಕರೆದೊಯ್ದಿದ್ದ. ತಕ್ಷಣ ಕಾರ್ಯಾಚರಣೆ ಪ್ರಾರಂಭಿಸಿದ ಅಡಗಿ ಕುಳಿತಿದ್ದ ಪೊಲೀಸರು ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ಕಿರಣ್ (35), ಅಖಿಲೇಶ್ ಅಹಿರ್ವಾರ್ (30), ಮತ್ತು ಸತೀಶ್ ಸಿಂಗ್ ಬುಂದೇಲಾ (27) ಎಂದು ಗುರುತಿಸಲಾಗಿದೆ. ಬಂಧಿತರನ್ನು ವಿಚಾರಣೆ ನಡೆಸಿದಾಗ ಮಹಿಳೆಗೆ ದುಬೆಗೆ ಕರೆ ಮಾಡಿ ಮಾತನಾಡಿ ಝಾನ್ಸಿಗೆ ಕರೆಸಿಕೊಳ್ಳಲಾಯಿತು ಎಂದು ಹೇಳಿದ್ದಾರೆ. ಬಂಧಿತರು ಹಲವಾರು ಹನಿಟ್ರಾಪ್‌ಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಇತ್ತೀಚೆಗೆ ಕೇರಳದ ವ್ಯಾಪಾರಿಯೊಬ್ಬರಿಗೆ ಹನಿಟ್ರಾಪ್‌ ಮಾಡಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಕೊಲ್ಲಂ ಜಿಲ್ಲೆಯ 32 ವರ್ಷದ ಸೂಜನ್, 38 ವರ್ಷದ ಶಿಮಿ ಎಂದು ಗುರುತಿಸಲಾಗಿದೆ. ಸೋಶಿಯಲ್‌ ಮೀಡಿಯಾದ ಮೂಲಕ ಪರಿಚಯ ಮೊದಲಿಗೆ ಶಿಮಿ ವ್ಯಾಪಾರಿಯನ್ನು ಪರಿಚಯ ಮಾಡಿಕೊಂಡು ಅತೀ ಸಲುಗೆಯಿಂದ ಮಾತನಾಡಿದ್ದಾಳೆ. ನಂತರ ವ್ಯಾಪಾರಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಳು ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ: Honey Trap Case: ಹನಿಟ್ರ್ಯಾಪ್ ಪ್ರಕರಣ; ಆರೋಪಿ ಮಂಜುಳಾ ಮೊಬೈಲ್‌ನಲ್ಲಿ 8 ರಾಜಕಾರಣಿಗಳ ಖಾಸಗಿ ವಿಡಿಯೊ ಪತ್ತೆ!

ಹನಿಟ್ರ್ಯಾಪ್ ಬಲೆಗೆ ಬಿದ್ದ ತ್ರಿಶೂರ್ ಉದ್ಯಮಿ, ಹೆಂಡತಿ, ಅತ್ತೆಯ ಹೆಸರಿನಲ್ಲಿದ್ದ ಫಿಕ್ಸೆಡ್ ಡಿಪಾಸಿಟ್ ಹಣವನ್ನು ವಿತ್ ಡ್ರಾ ಮಾಡಿ ಶಿಮಿಗೆ ನೀಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಶಿಮಿ ವ್ಯಾಪಾರಿ ಬಳಿ ಮತ್ತಷ್ಟು ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾಳೆ. ಕೇಳಿದಷ್ಟು ಹಣ ನೀಡದಿದ್ದರೆ ಉದ್ಯಮಿಯ ಫೋಟೋವನ್ನು ಬಹಿರಂಗಗೊಳಿಸುವ ಬೆದರಿಕೆಯನ್ನು ಶಮಿ ಹಾಕಿದ್ದಳು.ಕೊನೆಗೆ 2.5 ಕೋಟಿ ಕಳೆದುಕೊಂಡ ಕೇರಳದ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಹನಿಟ್ರ್ಯಾಪ್‌ ಕೇಸ್‌ನ ಕಾರ್ಯಾಚರಣೆ ನಡೆಸಿದ ಪೊಲೀಸರು ವಯನಾಡ್‌ನಲ್ಲಿ ಈ ದಂಪತಿಯನ್ನು ಬಂಧಿಸಿದ್ದಾರೆ.