ಮುಂಬಯಿ: ವಿರಾಟ್ ಕೊಹ್ಲಿಗೆ(virat kohli) ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್(Border–Gavaskar Trophy) ಸರಣಿಯಲ್ಲಿ ವಿಶೇಷ ದಾಖಲೆಯೊಂದನ್ನು ಬರೆಯುವ ಅವಕಾಶವಿದೆ. ಕೊಹ್ಲಿ 5 ಪಂದ್ಯಗಳ ಸರಣಿಯಲ್ಲಿ ಕ್ರಮವಾಗಿ 54, 164, 455 ರನ್ ಗಡಿ ದಾಟಿದರೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಕಲೆಹಾಕಿದ ಚೇತೇಶ್ವರ್ ಪೂಜಾರ(2033), ರಾಹುಲ್ ದ್ರಾವಿಡ್(2143) ಮತ್ತು ವಿವಿಎಸ್ ಲಕ್ಷ್ಮಣ್(2434) ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ. ಸದ್ಯ ಕೊಹ್ಲಿ 1979 ರನ್ ಬಾರಿಸಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ಸ್ಕೋರ್ ಬಾರಿಸಿದ ದಾಖಲೆ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸೆರಿನಲ್ಲಿದೆ. ಸಚಿನ್ 1996-2013 ಅವಧಿಯಲ್ಲಿ 34 ಪಂದ್ಯಳನ್ನಾಡಿ 3262 ರನ್ ಬಾರಿಸಿದ್ದಾರೆ. ಈ ವೇಳೆ ಅವರು 9 ಶತಕ ಮತ್ತು 16 ಅರ್ಧಶತಕ ಸಿಡಿಸಿದ್ದಾರೆ. 241* ಗರಿಷ್ಠ ವೈಯಕ್ತಿಕ ಗಳಿಕೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 2555 ರನ್ ಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಚೊಚ್ಚಲ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದ ಮೊದಲ ಭಾರತೀಯ ನಾಯಕ ಎಂಬ ಹಿರಿಮೆ ಕೊಹ್ಲಿ ಹೆಸರಿನಲ್ಲಿದೆ. ಇದಾದ ಬಳಿಕ ಅಂಜಿಕ್ಯಾ ರಹಾನೆ ಕೂಡ ಹಂಗಾಮಿ ನಾಯಕನಾಗಿ ಆಸೀಸ್‌ನಲ್ಲಿ ಟೆಸ್ಟ್ ಸರಣಿ ಗೆದ್ದಿದ್ದರು. ಈ ಬಾರಿ ರಹಾನೆ ತಂಡದಲ್ಲಿ ಇಲ್ಲ.
ಇದನ್ನೂ ಓದಿ Virat Kohli: ತಂಡಕ್ಕಿಂತ ಮುಂಚಿತವಾಗಿ ಆಸೀಸ್‌ಗೆ ಪ್ರಯಾಣ ಬೆಳೆಸಿದ ಕೊಹ್ಲಿ
Australia vs India pic.twitter.com/ggyIajVwWM
— RVCJ Media (@RVCJ_FB) November 10, 2024
ರಾಟ್ ಕೊಹ್ಲಿ(Virat Kohli) ಆಸ್ಟ್ರೇಲಿಯಾಕ್ಕೆ ಒಂದು ದಿನ ಮುಂಚಿತವಾಗಿಯೇ ಪ್ರಯಾಣ ಬೆಳೆಸಿದ್ದಾರೆ. ಕೊಹ್ಲಿ ತವರಿನ ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಘೋರ ಬ್ಯಾಟಿಂಗ್ ವೈಫಲ್ಯ ಕಂಡಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 93 ರನ್ ಮಾತ್ರ. ಹೀಗಾಗಿ ಕೊಹ್ಲಿ ಆಸೀಸ್‌ನಲ್ಲಿ ಹೇಗೆ ಪ್ರದರ್ಶಣ ತೋರಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಹೀಗಿರುವಾಗಲೇ ಕೊಹ್ಲಿಯನ್ನು ಪ್ರಸ್ತುತ ಫಾರ್ಮ್‌ನ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಆಸ್ಟ್ರೇಲಿಯದ ದಿಗ್ಗಜ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಹೋರಾಟದ ಸಾಮರ್ಥ್ಯದಲ್ಲಿ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದ್ದಾರೆ.
ʼಆಸ್ಟ್ರೇಲಿಯ ವಿರುದ್ಧ ಆಡುವುದನ್ನು ಕೊಹ್ಲಿ ಯಾವಾಗಲು ಇಷ್ಟಪಡುತ್ತಾರೆ. ಅದರಲ್ಲೂ ಆಸೀಸ್ ನೆಲದಲ್ಲಿ ಅವರ ಅಗ್ರೆಸಿವ್ ಬ್ಯಾಟಿಂಗ್ ನೋಡುವುದೇ ಕ್ರಿಕೆಟ್ ಅಭಿಮಾನಿಗಳಿಗೊಂದು ಹಬ್ಬ. ಆಸ್ಟ್ರೇಲಿಯದಲ್ಲಿ ಕೊಹ್ಲಿ ದಾಖಲೆ ಉತ್ತಮವಾಗಿದೆʼ ಎಂದರು.