Friday, 22nd November 2024

Suriya: ಜ್ಯೋತಿಕಾ ನನಗಿಂತ 3 ಪಟ್ಟು ಅಧಿಕ ಸಂಭಾವನೆ ಪಡೆಯುತ್ತಿದ್ದಳು; ಕರಿಯರ್‌ನ ಆರಂಭಿಕ ದಿನಗಳ ಅನುಭವ ಬಿಚ್ಚಿಟ್ಟ ನಟ ಸೂರ್ಯ

Suriya

ಚೆನೈ: ದಕ್ಷಿಣ ಭಾರತದ ಸ್ಟಾರ್‌ ಕಪಲ್‌ ಸೂರ್ಯ(Suriya) ಹಾಗೂ ಜ್ಯೋತಿಕಾ (Jyothika) ತಮ್ಮ ವೈವಾಹಿಕ ಜೀವನದ ಅನ್ಯೋನ್ಯತೆಗೆ ಇತರರಿಗೆ ಮಾದರಿ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸೂರ್ಯ ತಮ್ಮ ವೈವಾಹಿಕ ಜೀವನದ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಸೂರ್ಯ ತಮ್ಮ ಪತ್ನಿ ಜ್ಯೋತಿಕಾ ಬಗ್ಗೆ ಹೇಳಿದ್ದಾರೆ. ಅವಳು ತನಗಿಂತ ಉತ್ತಮವಾಗಿ ನಟಿಸಬಲ್ಲಳು ಎಂದು ಹೊಗಳಿದ್ದಾರೆ ಹಾಗೂ ಅವಳು ಒಮ್ಮೆ ನನ್ನ ಸಂಬಳಕ್ಕಿಂತ 3 ಪಟ್ಟು ಜಾಸ್ತಿ ದುಡಿದಿದ್ದೂ ಇದೆ ಎಂದು ಹೇಳಿದ್ದಾರೆ.

‘ಕಂಗುವಾ’ ಸಿನಿಮಾಗೆ ಸಂಬಂಧಪಟ್ಟ ಸಂದರ್ಶನದಲ್ಲಿ ನಿರೂಪಕರು ಜ್ಯೋತಿಕಾ ಬಗ್ಗೆ ಕೇಳುತ್ತಾರೆ. ಅದಕ್ಕೆ ಸೂರ್ಯ, ಜ್ಯೋತಿಕಾ ಬಗ್ಗೆ ಮಾತನಾಡುತ್ತಾ ”ಅವಳು ತುಂಬಾ ಒಳ್ಳೆಯ ನಟಿ. ನನಗಿಂತಲೂ ಚೆನ್ನಾಗಿ ನಟಿಸುತ್ತಾಳೆ. ಸಿನಿಮಾ ಹಿನ್ನೆಲೆಯಿಂದ ಬಂದ ನನಗೇ ಕೆಲವೊಂದು ಸಲ ಡೈಲಾಗ್‌ ನೆನಪಿಟ್ಟುಕೊಳ್ಳಲು ಕಷ್ಟವಾಗುತ್ತದೆ. ಅಭಿನಯಿಸಲು ಕಷ್ಟವಾಗಿದ್ದು ಇದೆ. ಆದರೆ ಜ್ಯೋತಿಕಾ ಹಾಗಲ್ಲ. ಅವಳು ನಿಖರ ಗುರಿ ಇಟ್ಟು ಕೊಂಡಿರುತ್ತಾಳೆ. ಎಷ್ಟೇ ಕಷ್ಟವಾದರೂ ಹಿಡಿದುದನ್ನು ಸಾಧಿಸದೆ ಬಿಡುವುದಿಲ್ಲʼʼ ಎಂದಿದ್ದಾರೆ.

ಜ್ಯೋತಿಕಾ ಅವರ ಸಿನಿಮಾಗಳ ಮಾತನಾಡುತ್ತಾ, ʼʼಜ್ಯೋತಿಕಾ ತನ್ನ ಯಶಸ್ಸಿನ ಉತ್ತುಂಗದಲ್ಲಿದ್ದಾಗ ನನ್ನನ್ನು ಮದುವೆಯಾಗಿದ್ದಳು. ಎಷ್ಟೋ ಸಲ ನನಗಿಂತ 3 ಪಟ್ಟು ಅಧಿಕ ಸಂಬಳ ತೆಗೆದುಕೊಳ್ಳುತ್ತಿದ್ದಳು. ನಾನು ಚಿತ್ರರಂಗದಲ್ಲಿ ಯಶಸ್ಸು ತೆಗೆದುಕೊಳ್ಳಲು 5 ವರ್ಷಗಳು ಬೇಕಾಯಿತು. ಇಷ್ಟಾದರೂ ಅವಳು ನನ್ನ ಜತೆಯಿದ್ದಳು. ನಾನು ಅವಳಿಗೆ ಸಮನಾಗಿ ದುಡಿಯಬೇಕು ನಿರ್ಧಾರ ಮಾಡಿದ್ದೆʼʼ ಎಂದು ಸೂರ್ಯ ಹೇಳಿದ್ದಾರೆ.

ಪತ್ನಿಯ ಪ್ರಾಮಾಣಿಕತೆ ಹಾಗೂ ಕೆಲಸದ ಬಗ್ಗೆ ಶ್ಲಾಘಿಸಿದ ಸೂರ್ಯ ಅವಳು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾಳೆ ಎಷ್ಟೋ ಸಲ ಅವಳೆ ನನಗೆ ಸ್ಫೂರ್ತಿ ಎಂದು ಹೇಳಿದ್ದಾರೆ.

ಇದನ್ನೂ ಓದಿ : Nishadh Yusuf : ಸೂರ್ಯ ಅಭಿನಯದ ‘ಕಂಗುವಾ’ ಸಿನಿಮಾದ ಎಡಿಟರ್‌ ನಿಗೂಢ ಸಾವು! ಆಗಿದ್ದಾದರೂ ಏನು?

ಇತ್ತೀಚೆಗೆ ʼಸೂರರೈ ಪೊಟ್ರುʼ ಹಾಗೂ ʼಜೈ ಭೀಮ್‌ʼ ಸಿನಿಮಾಗಳಲ್ಲಿ ನಟಿಸಿದ್ದ ಸೂರ್ಯ ಪ್ರೇಕ್ಷರಿಂದ ಮೆಚ್ಚುಗೆಗಳಿಸಿದ್ದರು. ಕಮಲ್ ಹಾಸನ್ ಅವರ ʼವಿಕ್ರಮ್ʼ ಮತ್ತು ಮಾಧವನ್ ಅವರ ʼರಾಕೆಟ್ರಿ: ದಿ ನಂಬಿ ಎಫೆಕ್ಟ್‌ʼನಲ್ಲಿ ಅತಿಥಿ ಪಾತ್ರವನ್ನು ಸಹ ನಿರ್ವಹಿಸಿದ್ದರು. ಈಗ ಬಹುನಿರೀಕ್ಷಿತ ʼಕಂಗುವಾʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿವ ನಿರ್ದೇಶನದ ʼಕಂಗುವಾʼ ನ. 14ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಬಹು ಕೋಟಿ ರೂ. ಬಜೆಟ್‌ನ ಈ ಸಿನಿಮಾ ಪ್ಯಾನ್‌ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ.