Thursday, 21st November 2024

Viral Video: ಭಾಷಣಕ್ಕೆ ಬಿಜೆಪಿ ಪ್ರಾಂಪ್ಟರ್! ಸಿಎಂ ಏಕನಾಥ್ ಶಿಂಧೆ ವಿಡಿಯೋ ವೈರಲ್

Viral Video

ಮುಂಬೈ: ಭಾಷಣದ ಮಧ್ಯೆ ಮಹಾರಾಷ್ಟ್ರದ ಮುಖ್ಯಮಂತ್ರಿ (Maharashtra CM) ಏಕನಾಥ್ ಶಿಂಧೆ (Eknath Shinde) ಅವರು ಪಕ್ಕದಲ್ಲಿ ನಿಂತಿದ್ದ ಬಿಜೆಪಿ (BJP) ಕಾರ್ಯಕರ್ತರೊಬ್ಬರ ಮಾತನ್ನು ಅನುಕರಿಸುತ್ತಿರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ (social media) ಬಿಜೆಪಿ ಕಾರ್ಯಕರ್ತರೊಬ್ಬರು ಹಂಚಿಕೊಂಡಿದ್ದು, ಶಿಂಧೆ ಅವರು ಈಗ “ಟೆಲಿಪ್ರಾಂಪ್ಟರ್ ಅಲ್ಲ, ಹ್ಯೂಮನ್ ಪ್ರಾಂಪ್ಟರ್’ʼ ಎಂದು ಹೇಳಿದ್ದಾರೆ. ಇದು ಭಾರಿ ವೈರಲ್ (Viral Video) ಆಗಿದ್ದು, ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

ತಾಯಿ ಸುರಕ್ಷಿತವಾಗಿದ್ದರೆ ಮನೆ ಸುರಕ್ಷಿತವಾಗಿರುತ್ತದೆ ಎನ್ನುವ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದ ಏಕನಾಥ್ ಶಿಂಧೆ ಅವರು, ತಮ್ಮ ಮಾತನ್ನು ಮುಂದುವರಿಸುವ ಮುನ್ನ ತಮ್ಮ ಪ್ರಾಂಪ್ಟರ್ ಸರಿಯಾಗಿದೆಯೇ ಎಂದು ಪರಿಶೀಲಿಸುತ್ತಾರೆ. ಬಳಿಕ ಅವರು ಮಹಾರಾಷ್ಟ್ರ ಸರ್ಕಾರದ ಆರೋಗ್ಯ ಕಾರ್ಯಕ್ರಮವಾದ ʼಮಹಾತ್ಮ ಫುಲೆ ಯೋಜನೆʼಯ ಕುರಿತು ಮಾತನಾಡಲು ಪ್ರಾರಂಭಿಸಿದ್ದಾರೆ.

ಸುಮಾರು 38 ಸೆಕೆಂಡ್‌ಗಳ ಕ್ಲಿಪ್‌ನಲ್ಲಿ ಶಿಂಧೆ ಅವರು ಇತ್ತೀಚಿನ ಸರ್ಕಾರದ ಯೋಜನೆ ಕುರಿತು ಮಾತನಾಡಲು ಬಿಜೆಪಿ ಕಾರ್ಯಕರ್ತನ ಕಡೆಗೆ ತಿರುಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಲಾತೂರ್ ಗ್ರಾಮಾಂತರ ಪ್ರದೇಶದ ಔಸಾದಲ್ಲಿ ನಡೆದ ಕಾರ್ಯಕ್ರಮದ ವಿಡಿಯೊ ಇದಾಗಿದೆ ಎನ್ನಲಾಗಿದೆ. ಈ ವಿಡಿಯೊಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.

2012ರ ರಾಜೀವ್ ಗಾಂಧಿ ಜೀವಂದಯೀ ಆರೋಗ್ಯ ಯೋಜನೆಯನ್ನು ಪರಿಷ್ಕರಿಸಿ ಮಹಾತ್ಮ ಫುಲೆ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯಡಿಯಲ್ಲಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 1.5 ಲಕ್ಷ ರೂ. ವರೆಗೆ ನಗದು ರಹಿತ ಆರೋಗ್ಯ ರಕ್ಷಣೆಯನ್ನು ಒದಗಿಸಲಾಗುತ್ತದೆ. 2024ರ ಜುಲೈ 1ರಂದು ‘ಮಹಾತ್ಮ ಜ್ಯೋತಿರಾವ್ ಫುಲೆ ಜನ್ ಆರೋಗ್ಯ ಯೋಜನೆ 2.0’ ಎಂದು ಪರಿಷ್ಕರಿಸಲಾಗಿದೆ. ಈ ಯೋಜನೆಯು ಈಗ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ.

`”ಎಚ್ಚರಿಕೆಯ ಪೋಷಕರು, ಆರೋಗ್ಯವಂತ ಮಕ್ಕಳು” 18 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ತಪಾಸಣೆ ಕುರಿತು ಶಿಂಧೆ ಪ್ರಸ್ತಾಪಿಸಿದ್ದು, ಈ ಯೋಜನೆಯನ್ನು ಈಗಾಗಲೇ ನವಿ ಮುಂಬೈ ಮತ್ತು ಪುಣೆಯಂತಹ ಪ್ರದೇಶಗಳಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಇದರೊಂದಿಗೆ “ಆರೋಗ್ಯ ತರುಣಾಯಿ, ವೈಭವ್ ಮಹಾರಾಷ್ಟ್ರ” ರಾಜ್ಯದ ಯುವಜನರಿಗಾಗಿ ಪ್ರಾರಂಭಿಸಿರುವ ಆರೋಗ್ಯ ಅಭಿಯಾನವಾಗಿದ್ದು, ಇದನ್ನು 2023ರ ಸೆಪ್ಟೆಂಬರ್ ನಲ್ಲಿ ಪ್ರಾರಂಭಿಸಲಾಗಿದೆ. ಈ ಕುರಿತು ಪ್ರಸ್ತಾಪಿಸಿದ ಶಿಂಧೆ, ಇದು ಯುವ ಆರೋಗ್ಯ ಮತ್ತು ಕ್ಷೇಮಕ್ಕೆ ಒತ್ತು ನೀಡುತ್ತದೆ ಎಂದು ಹೇಳಿದರು.

ಈ ವಿಡಿಯೋ ಕ್ಲಿಪ್‌ನ ಕೊನೆಯಲ್ಲಿ ಶಿಂಧೆ ಅವರ ʼಆರೋಗ್ಯಚಿ ವಾರಿ, ಪಂಢರಿ ಚಿ ದರಿʼ ಕುರಿತು ತಿಳಿಸಲಾಯಿತು. ಇದರಲ್ಲಿ ಮಹಾರಾಷ್ಟ್ರ ಸರ್ಕಾರವು ಶ್ರೀ ವಿಠ್ಠಲನ ದೇವಾಲಯಕ್ಕೆ ಭೇಟಿ ನೀಡಲು ಪಂಢರಪುರಕ್ಕೆ ಪ್ರಯಾಣಿಸುವ ಯಾತ್ರಾರ್ಥಿಗಳಿಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯು ಪಾಲ್ಖಿ ಮಾರ್ಗದಲ್ಲಿ ಉಚಿತ ಆರೋಗ್ಯ ತಪಾಸಣೆಗಳನ್ನು ಒಳಗೊಂಡಿದೆ. ಪ್ರತಿ ಐದು ಕಿಲೋಮೀಟರ್‌ಗಳಿಗೆ ‘ಅಪ್ಲಾ ದವಾಖಾನಾ’, ಬೈಕ್ ಆಂಬ್ಯುಲೆನ್ಸ್‌ಗಳು ಮತ್ತು ಮಹಿಳೆಯರಿಗೆ ಮೀಸಲಾದ ಹಿರಾಕ್ನಿ ಕೊಠಡಿಗಳಂತಹ ಸೌಲಭ್ಯಗಳು, ಆಂಬ್ಯುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತವೆ. ಇದರ ಅಡಿಯಲ್ಲಿ ಯಾತ್ರಿಕರಿಗೆ ನಿರಂತರ ವೈದ್ಯಕೀಯ ಬೆಂಬಲವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

Viral News: ಛೇ.. ಎಂಥಾ ಹೀನ ಕೃತ್ಯ! ನಿದ್ರೆಗೆ ತೊಂದರೆ ಮಾಡ್ತಿವೆ ಎಂದು ಐದು ನಾಯಿ ಮರಿಗಳನ್ನು ಸುಟ್ಟು ಹಾಕಿದ ಪಾಪಿಗಳು

ಈ ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಸಿಎಂ ಮಾನವ ಪ್ರಾಂಪ್ಟರ್ ಬಳಸಿದ್ದಕ್ಕಾಗಿ ಟ್ರೋಲ್ ಮಾಡಿದ್ದರೆ ಇನ್ನು ಕೆಲವರು ಬಿಜೆಪಿಯ ಪ್ರಾಂಪ್ಟರ್ ಬಳಸಿದ್ದಕ್ಕಾಗಿ ಟ್ರೋಲ್ ಮಾಡಿದ್ದಾರೆ.