Thursday, 14th November 2024

Vitstara Airline: ಏರ್ ಇಂಡಿಯಾದೊಂದಿಗೆ ವಿಸ್ತಾರಾ ವಿಲೀನ: ಇಂದೇ ಅಂತಿಮ ಹಾರಾಟ

Vistara

ನವದೆಹಲಿ: ಏರ್ ಇಂಡಿಯಾ (Air India) ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಳ್ಳುತ್ತಿರುವ ವಿಸ್ತಾರಾ ಏರ್‌ಲೈನ್ಸ್‌ (Vitstara Airline), ನವೆಂಬರ್ 11ರ ಸೋಮವಾರ ತನ್ನ ಬ್ರಾಂಡ್ ಅಡಿಯಲ್ಲಿ ಅಂತಿಮ ಹಾರಾಟವನ್ನು ನಡೆಸಲಿದೆ.ನವೆಂಬರ್ 12ರಿಂದ ವಿಸ್ತಾರಾ ಕಾರ್ಯಾಚರಣೆ ಏರ್ ಇಂಡಿಯಾದೊಂದಿಗೆ ಏಕೀಕರಗೊಳ್ಳಲಿದೆ.

ಏರ್ ಇಂಡಿಯಾ-ವಿಸ್ತಾರಾ ವಿಲೀನದಲ್ಲಿ ಸಿಂಗಾಪುರ್ ಏರ್ಲೈನ್ಸ್‌ನ ವಿದೇಶಿ ನೇರ ಹೂಡಿಕೆಗೆ ಸರ್ಕಾರ ಅನುಮೋದನೆ ನೀಡಿದ್ದು, ಏರ್ ಇಂಡಿಯಾ ಬ್ರಾಂಡ್ ಅಡಿಯಲ್ಲಿ ಒಂದೇ ಪೂರ್ಣ ಸೇವಾ ವಾಹಕವಾಗಿ ವಲೀನವನ್ನು ವ್ಯವಸ್ಥಿತಗೊಳಿಸಿದೆ. ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್ಲೈನ್ಸ್ ನಡುವಿನ ಜಂಟಿ ಉದ್ಯಮವಾದ ವಿಸ್ತಾರಾ, ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾದೊಂದಿಗೆ ಸಂಪೂರ್ಣವಾಗಿ ಸಂಯೋಜಿಸಲ್ಪಟ್ಟಿದೆ. ಈ ವಿಲೀನವು ಎರಡು ಸಂಸ್ಥೆಗಳನ್ನು ಒಂದೇ ಛತ್ರಿಯಡಿ ತರುತ್ತದೆ.

ಗ್ರಾಹಕರು 12 ನವೆಂಬರ್ 2024ರಂದು ಅಥವಾ ನಂತರದ ಪ್ರಯಾಣದ ದಿನಾಂಕಗಳಿಗಾಗಿ ವಿಸ್ತಾರಾದಲ್ಲಿ ಬುಕಿಂಗ್ ಮಾಡುವ ಬದಲು ಏರ್‌ ಇಂಡಿಯಾದಲ್ಲಿ ಮಾಡಬೇಕಾಗಲಿದೆ. ವಿಸ್ತಾರಾವನ್ನು ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸುವುದರಿಂದ ಸಿಂಗಾಪುರ್ ಏರ್ಲೈನ್ಸ್ ಏಕೀಕೃತ ವಿಮಾನಯಾನದಲ್ಲಿ ಶೇಕಡಾ 25.1 ರಷ್ಟು ಪಾಲನ್ನು ಹೊಂದಿರುತ್ತದೆ.

ಏರ್ ಇಂಡಿಯಾದೊಂದಿಗಿನ ವಿಲೀನವು ಫ್ಲೀಟ್ ಮತ್ತು ನೆಟ್ವರ್ಕ್ ಅನ್ನು ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ವಿಸ್ತಾರಾ ಸಿಇಒ ವಿನೋದ್ ಕಣ್ಣನ್ ಹೇಳಿದ್ದಾರೆ.