Friday, 15th November 2024

Benjamin Netanyahu: ಲೆಬನಾನ್‌ನಲ್ಲಿ 40 ಜನರ ಬಲಿ ಪಡೆದ ಪೇಜರ್‌ ದಾಳಿಗೆ ನಾನೇ ಆದೇಶ ನೀಡಿದ್ದೆ; ಬೆಂಜಮಿನ್‌ ನೆತಾನ್ಯಾಹು

ಟೆಲ್‌ ಅವಿವ್‌: ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಎರಡು ತಿಂಗಳ ಹಿಂದೆ ನಡೆದಿದ್ದ ಭೀಕರ ಪೇಜರ್‌ ಮತ್ತು ವಾಕಿಟಾಕಿಗಳ ಸ್ಫೋಟ ತಮ್ಮ ಆದೇಶದ ಮೇರೆಗೆ ನಡೆದಿರುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು(Benjamin Netanyahu) ಒಪ್ಪಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸುಮಾರು 40 ಜನರನ್ನು ಬಲಿ ಪಡೆದ ಮತ್ತು 3,000 ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರನ್ನು ಗಾಯಗೊಳಿಸಿದ ಪೇಜರ್‌ ದಾಳಿ(pager, walkie-talkie attacks)ಗೆ ತಮ್ಮ ಆದೇಶ ಇತ್ತು ನೆತಾನ್ಯಾಹು ಸ್ಪಷ್ಟಪಡಿಸಿದೆ.

ಇಸ್ರೇಲ್‌ ಸರ್ಕಾರದ ವಕ್ತಾರ ಓಮರ್‌ ದೋಸ್ತ್ರಿ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲೆಬನಾನ್‌ ಪೇಜರ್‌ ದಾಳಿಗೆ ನೆತಾನ್ಯಾಹು ಹಸಿರು ನಿಶಾನೆ ತೋರಿದ್ದರು ಎಂದು ಹೇಳಿದ್ದಾರೆ. ಈ ದಾಳಿ ಬೆನ್ನಲ್ಲೇ ಇದು ಇಸ್ರೇಲ್‌ ಕೃತ್ಯ ಎಂದಯ ಇರಾನ್‌ ಆರೋಪಿಸಿತ್ತು. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಸ್ರೇಲ್‌ನಿಂದ ಬಂದಿರಲಿಲ್ಲ. ಇದೀಗ ಸ್ವತಃ ಪ್ರಧಾನಿ ಬೆಂಜಮಿನ್‌ ನೆತಾನ್ಯಾಹು ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.‌

ಏನಿದು ಪೇಜರ್‌ ಸ್ಫೋಟ?

ಸೆಪ್ಟೆಂಬರ್ 17 ಮತ್ತು 18 ರಂದು ಹೆಜ್ಬೊಲ್ಲಾಗಳ ಭದ್ರಕೋಟೆಗಳಲ್ಲಿ ಸಾವಿರಾರು ಪೇಜರ್‌ಗಳು ಏಕ ಕಾಲದಲ್ಲಿ ಸ್ಫೋಟಗೊಂಡಿದ್ದವು. ಇರಾನ್ ಮತ್ತು ಹಿಜ್ಬುಲ್ಲಾ ಇಸ್ರೇಲ್ ಮೇಲೆ ಆರೋಪಿಸಿದರು. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 3000ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಗೊಂಡ ಕೆಲವು ಹಿಜ್ಬುಲ್ಲಾ ಸದಸ್ಯರು ತಮ್ಮ ಬೆರಳುಗಳನ್ನು ಕಳೆದುಕೊಂಡಿದ್ದರೆ, ಕೆಲವರು ದೃಷ್ಟಿ ಕಳೆದುಕೊಂಡಿದ್ದರು ಎಂದು ವರದಿಯಾಗಿತ್ತು.

ಒಂದು ಸಿಸಿಟಿವಿ ದೃಶ್ಯಾವಳಿಯಲ್ಲಿ, ಅಂಗಡಿಯೊಂದರಲ್ಲಿ ಖರೀದಿ ನಡೆಸಿ, ಹಣ ಪಾವತಿ ನಡೆಸಲು ನಿಂತಿದ್ದ ವ್ಯಕ್ತಿಯೊಬ್ಬನ ಜೇಬಿನಲ್ಲಿ ಸ್ಫೋಟ ಸಂಭವಿಸುವುದು ಕಂಡುಬಂದಿದೆ.ವರದಿಗಳ ಪ್ರಕಾರ, ಆರಂಭಿಕ ಸ್ಫೋಟ ಸಂಭವಿಸಿದ ಬಳಿಕ, ಬಹುತೇಕ ಒಂದು ಗಂಟೆಯಷ್ಟು ಹೊತ್ತು ನಿರಂತರವಾಗಿ ಸ್ಫೋಟಗಳು ಸಂಭವಿಸುತ್ತಲೇ ಇದ್ದವು.

ಈ ಸುದ್ದಿಯನ್ನೂ ಓದಿ: Israel Airstrike: ಇಸ್ರೇಲ್‌ ಸೇನೆಯಿಂದ ಮತ್ತೆ ಏರ್‌ಸ್ಟ್ರೈಕ್‌; ಲೆಬನಾನ್‌ನಲ್ಲಿ 40 ಜನರ ಮಾರಣಹೋಮ!