Sunday, 24th November 2024

Viral Photo: ಬಿಗ್‌ ಬಾಸ್‌ ಮನೆಯಲ್ಲಿ ಒಂದೇ ಬೆಡ್ ಮೇಲೆ ಜೋಡಿಯ ಖುಲ್ಲಾಂಖುಲ್ಲಾ ರೊಮ್ಯಾನ್ಸ್‌! ಫೋಟೋ ಭಾರೀ ವೈರಲ್‌-ನೆಟ್ಟಿಗರು ಕಿಡಿ

ಮುಂಬೈ: ಕನ್ನಡದ ಬಿಗ್ ಬಾಸ್ ಪ್ರಾರಂಭಗೊಂಡು ಸ್ಪರ್ಧಿಗಳ ಕಿರಿಕ್ ಸೇರಿದಂತೆ ಹಲವಾರು ವಿಷಯಗಳಲ್ಲಿ ಸದ್ದು ಮಾಡುತ್ತಿರುವ ನಡುವೆ ಹಿಂದಿಯ ಬಿಗ್ ಬಾಸ್ 18ನೇ (Big Boss 18) ಸೀಸನ್‌ನಲ್ಲಿ ನಡೆದ ಸಂಗತಿಯೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಬಿಗ್‌ಬಾಸ್‌ ಸ್ಪರ್ಧಿಗಳಾದ ಅಲೀಸ್ ಕೌಶಿಕ್ (Alice Kaushik) ಮತ್ತು ಅವಿನಾಶ್ ಮಿಶ್ರಾ (Avinash Mishra) ಅವರ ಫೊಟೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Phot) ಆಗುತ್ತಿದ್ದು, ಇವರಿಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಕಮೆಂಟ್ ಗಳನ್ನು ಹಾಕೋದ್ರಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯಕ್ಕೆ, ಅಲೀಸ್ ಮತ್ತು ಅವಿನಾಶ್ ಅವರು ಬಿಗ್ ಬಾಸ್ ಮನೆಯಲ್ಲಿ ಒಂದೇ ಬೆಡ್ ನಲ್ಲಿ ಒಬ್ರಿಗೊಬ್ರು ಅಂಟಿಕೊಂಡು ಮಲಗಿಕೊಂಡಿರುವ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ‘ಹಾಟ್ ಟ್ರೆಂಡಿಂಗ್’ ಆಗಿದೆ! ಇನ್ನೊಂದೆಡೆ, ಇವರಿಬ್ರೂ ಇದು ನಮ್ಮಿಬ್ಬರ ನಡುವಿನ ಕ್ಲೋಸ್ ಫ್ರೆಂಡ್ ಶಿಪ್ ನ ಪ್ರತೀಕವಷ್ಟೇ, ಇದ್ರಲ್ಲಿ ಬೇರೇನೂ ಇಲ್ಲ ಎಂದು ಹೇಳಿಕೊಳ್ಳುವ ಮೂಲಕ ‘ಸೈಲೆಂಟಾಗಿ’ ಗೇಮ್ ಚಾಲೂ ಮಾಡಿದ್ದಾರೆ!

ಇದನ್ನೇ ಆಧಾರವಾಗಿಟ್ಟುಕೊಂಡು ಇವರಿಬ್ಬರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಲ್ಲಿ ಬ್ಯುಸಿಯಾಗಿದ್ದು, ಕೆಲವರು ಇದನ್ನು ಕ್ಲೋಸ್ ಬಾಂಡಿಂಗ್ ನ ಪ್ರತೀಕ ಎಂದು ಸಮರ್ಥಿಸಿಕೊಂಡಿದ್ದರೆ, ಇನ್ನು ಕೆಲವರು ‘ಗೆಳೆತನ’ದ ಸೀಮಾರೇಖೆಯನ್ನೇ ಪ್ರಶ್ನಿಸಿದ್ದಾರೆ. ನಟಿ ಅಲಿಸ್ ತಮ್ಮ ‘ಪಾಂಡ್ಯಾ ಸ್ಟೋರ್’ ಚಿತ್ರದ ಸಹ ನಟ ಕನ್ವಾರ್ ಧಿಲ್ಲೋನ್ (Kanwar Dhillon) ಜೊತೆ ಡೇಟಿಂಗ್ ನಡೆಸುವ ಮೂಲಕ ಸುದ್ದಿಯಾಗಿದ್ದರು.

ಇನ್ನು, ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವ ಈ ಫೊಟೋದಲ್ಲಿರುವಂತೆ, ಅಲೀಸ್ ಮತ್ತು ಅವಿನಾಶ್ ಒಂದೇ ಬೆಡ್ ನಲ್ಲಿ ಒಟ್ಟಿಗೆ ಬಿದ್ದುಕೊಂಡಿದ್ದು, ಬ್ಲಾಂಕೆಟ್ ಹೊದ್ದುಕೊಂಡಿರುವಂತೆ ಅಲೀಸ್ ಅವರು ಅವಿನಾಶ್ ಅವರ ತೋಳಲ್ಲಿ ಆರಾಮವಾಗಿ ನಿದ್ರೆಗೆ ಜಾರಿರುವುದನ್ನು ಕಾಣಬಹುದಾಗಿದೆ.
ಈ ವೈರಲ್ ಫೊಟೋ ಇಲ್ಲಿದೆ ನೋಡಿ:

https://twitter.com/BiggBoss_Tak/status/1855687274878337096

ಈ ಫೊಟೋ ಬಗ್ಗೆ ಕಮೆಂಟ್ ಮಾಡಿರುವ ಕೆಲವರು, ಇದ್ರಲ್ಲಿ ಅಂಥದ್ದೇನೂ ಇಲ್ಲ ಕ್ಲೋಸಾಗಿ ಇಬ್ಬರು ಇರೋದೇನೂ ತಪ್ಪಲ್ಲವಲ್ಲ ಎಂದು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಕೆಲವರು ಕನ್ವರ್ ಅವರ ಸೋಷಿಯಲ್ ಮೀಡಿಯಾ ಪೇಜ್ ಗೆ ಈ ಫೊಟೋವನ್ನು ಟ್ಯಾಗ್ ಮಾಡಿ, ‘ಇದು ಸಹಜವಾದುದೇ..!?’ ಎಂದು ಪ್ರಶ್ನಿಸುವ ಮೂಲಕ ಇದಕ್ಕೆ ಇನ್ನಷ್ಟು ಉಪ್ಪು-ಖಾರ ಹಚ್ಚುವ ಕೆಲಸವನ್ನು ಮಾಡಿದ್ದಾರೆ! ಅವರ ಪ್ರಕಾರ, ಅಲೀಸ್ ಅವರು ಬಿಗ್ ಬಾಸ್ ಮನೆಯ ಹೊರಗಡೆ ಒಂದು ಸಂಬಂಧವನ್ನು ಈಗಾಗಲೇ ಹೊಂದಿರುವಾಗ, ಈ ರೀತಿಯಾಗಿ ಇನ್ನೊಬ್ರೊಂದಿಗೆ ‘ಆಪ್ತ’ವಾಗಿರೋದು ಅಷ್ಟು ಸರಿಯಲ್ಲ ಎಂಬುದು ಅವರ ವಾದ!

‘ನಾವು ಅವ್ರ ಬಗ್ಗೆ ಯೋಚಿಸೋದು ಸರಿಯಲ್ಲ, ಅವರಿಬ್ರೂ ವಯಸ್ಕರು. ಅವರ ನಿರ್ಧಾರವನ್ನು ಅವರೇ ಮಾಡಲಿ”, ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Murder Case: ಸಂಶಯಪಿಶಾಚಿ ಗಂಡನ ಮೇಲೆ ಸಿಟ್ಟಿಗೆದ್ದು ಮಗುವನ್ನೇ ಇರಿದು ಕೊಂದ ತಾಯಿ

“ಒಂದು ಹಂತದಲ್ಲಿ ಹೀಗೆ ಕ್ಲೋಸಾಗಿ ಇರೋದು ಓಕೆ. ಆದ್ರೆ, ರಾತ್ರಿ ಒಂದೇ ಬೆಡ್ ಹಂಚಿಕೊಂಡಿರುವುದು ಮತ್ತು ಅದ್ರಲ್ಲೂ ಇಷ್ಟು ಅಂಟಿಕೊಂಡ ರೀತಿಯಲ್ಲಿ ಮಲಗಿರೋದು, ಅದೂ ಒಬ್ರು ಮದುವೆಯಾಗಿರೋರು. ಅವನ ಸಂಗಾತಿಗೆ ಇದ್ರಲ್ಲಿ ಹೇಗೆ ಸಮಸ್ಯೆ ಬರೋದಿಲ್ವೋ ನಂಗೊತ್ತಿಲ್ಲ” ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನೊಬ್ಬರ ಕಮೆಂಟ್ ಹೀಗಿದೆ: “ಈತ ಕೆಲವು ದಿನಗಳ ಹಿಂದೆ ಆಕೆಯ ಹೊಟ್ಟೆ ಭಾಗಕ್ಕೆ ‘ಕಿಸ್’ ಮಾಡಿದ್ದ, ಅವರಿಬ್ರೂ ಸಿಂಗಲ್ ಆಗಿದ್ದಿದ್ರೆ ಇದೆಲ್ಲಾ ಓಕೆ, ಆದ್ರೆ ಅಲೀಸ್ ಹೊರಗಡೆ ಮದುವೆಯ ಪ್ಲ್ಯಾನ್ ಹಾಕ್ಕೊಂಡಿದ್ದಾಳೆ ಮತ್ತು ಅವಿನಾಶ್ ಇಲ್ಲಿ ಆಕೆಯನ್ನು ಸೆಳೀತಿದ್ದಾನೆ.. ಇದು ವಿಚಿತ್ರವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಕೆಲವೊಂದು ಕಮೆಂಟ್‌ಗಳು ಇಲ್ಲಿವೆ ಓದ್ಕೊಳ್ಳಿ:

ಅಲೀಸ್ ಅವರು ಕಳೆದ ಕೆಲವು ವರ್ಷಗಳಿಂದ ಕನ್ವರ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ರು. ಮಾತ್ರವಲ್ಲದೇ, ಕನ್ವರ್ ತನಗೆ ಹೇಗೆ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದ ಎಂಬುದನ್ನು ಈಕೆ ಬಿಗ್ ಬಾಸ್ ನ ಪ್ರಾರಂಭದಲ್ಲಿ ಹೇಳಿಕೊಂಡೂ ಇದ್ದರು. ಆದರೆ ಹೊರಗಡೆ ಕನ್ವರ್ ತಾನು ಈಕೆಗೆ ಪ್ರಪೋಸ್ ಮಾಡಿದ್ದನ್ನು ನಿರಾಕರಿಸಿದ್ದ. ಇದನ್ನು ‘ವೀಕೆಂಡ್ ವಾರ್’ ಎಪಿಸೋಡ್ ನಲ್ಲಿ ಖುದ್ದು ಸಲ್ಮಾನ್ ಖಾನ್ ಬಿಗ್ ಬಾಸ್ ಮನೆಯಲ್ಲಿದ್ದ ಅಲೀಸ್ ಗೆ ತಿಳಿಸಿದ್ದರು ಮತ್ತು ಇದನ್ನು ಕೇಳಿ ಆಕೆ ಕಣ್ಣೀರಾಗಿದ್ದರು.

ಇನ್ನು, ಈ ವೈರಲ್ ಫೊಟೋಗೆ ಸಂಬಂಧಿಸಿದಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಕನ್ವರ್, “ಇದು ಜಗತ್ತಿನ ಕೆಲಸ, ಹಂಚೂ ಕಾದಿದೆ ಎಂದು ರೊಟ್ಟಿ ಕಾಯಿಸಿಕೊಳ್ಳಲು ಎಲ್ಲರೂ ಬಂದಿದ್ದಾರೆ. ಅವರು ಕೇವಲ ಪ್ರೋಮೋ ಮಾತ್ರ ನೋಡಿದ್ದಾರೆ, ನಾನೇನು ಹೇಳ್ತಿದ್ದೇನೆಂದು ಕೇಳಿಸಿಕೊಳ್ಳಲು ಯಾರೂ ತಯಾರಿಲ್ಲ..’ ಎಂದು ಪ್ರತಿಕ್ರಿಯಿಸಿದ್ದಾರೆ.