Saturday, 23rd November 2024

IND vs SA: 5 ವಿಕೆಟ್‌ ಸಾಧನೆ ಮಾಡಿದ ವರುಣ್‌ ಚಕ್ರವರ್ತಿ ಬಗ್ಗೆ ಸೂರ್ಯಕುಮಾರ್‌ ಹೇಳಿದ್ದಿದು!

IND sv SA: Getting five-for while defending 125 is incredible, says Suryakumar on Varun’s spell against South Africa

ಮೆಬೇಕ (ದಕ್ಷಿಣ ಆಫ್ರಿಕಾ) : ದಕ್ಷಿಣ ಆಫ್ರಿಕಾ ವಿರುದ್ಧ (IND vs SA) ಎರಡನೇ ಟಿ20ಐ ಪಂದ್ಯದಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಭಾರತ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರನ್ನು ನಾಯಕ ಸೂರ್ಯಕುಮಾರ್‌ ಯಾದವ್‌ ಮುಕ್ತಕಂಠದಿಂದ ಗುಣಗಾಣ ಮಾಡಿದ್ದಾರೆ. ದೀರ್ಘಾವಧಿಯಿಂದ ವರುಣ್‌ ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ ಹಾಗೂ ಅವರದು ಇದು ಅದ್ಭುತ ಕಮ್‌ಬ್ಯಾಕ್‌ ಎಂದು ಹೇಳಿದ್ದಾರೆ.

ಭಾನುವಾರ ಇಲ್ಲಿನ ಸೇಂಟ್‌ ಜಾರ್ಜ್‌ ಪಾರ್ಕ್‌ ಸ್ಟೇಡಿಯಂನಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್‌ಗಳ ಕಠಿಣ ಗುರಿ ನೀಡದ ಹೊರತಾಗಿಯೂ ಭಾರತ ತಂಡದ ಬೌಲರ್‌ಗಳು ಕಠಿಣ ಹೋರಾಟ ನಡೆಸಿದ್ದರು. ಅದರಲ್ಲಿಯೂ ವರುಣ್‌ ಚಕ್ರವರ್ತಿ ತಮ್ಮ ಸ್ಪಿನ್‌ ಮೋಡಿಯ ಮೂಲಕ 4 ಓವರ್‌ಗಳಿಗೆ ಕೇವಲ 17 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಭಾರತ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರು. ಆದರೆ, ಡೆತ್‌ ಓವರ್‌ಗಳಲ್ಲಿ ವೇಗಿಗಳು ಎಡವಿದ ಕಾರಣ ಭಾರತ ತಂಡ ಸೋಲು ಅನುಭವಿಸಬೇಕಾಯಿತು.

ವರುಣ್‌ ಬಗ್ಗೆ ಸೂರ್ಯಕುಮಾರ್‌ ಯಾದವ್‌ ಹೇಳಿದ್ದೇನು?

ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌, “ಟಿ20 ಪಂದ್ಯದಲ್ಲಿ 125 ರನ್‌ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸುವ ವೇಳೆ 5 ವಿಕೆಟ್‌ ಸಾಧನೆ ಮಾಡುವುದು ಅದ್ಬುತವಾಗಿದೆ. ಈ ಪ್ರದರ್ಶನಕ್ಕಾಗಿ ವರುಣ್‌ ದೀರ್ಘಾವಧಿಯಿಂದ ಕಾಯುತ್ತಿದ್ದರು. ಅವರು ತುಂಬಾ ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ. ಅವರ ಬೌಲಿಂಗ್‌ ಅನ್ನು ಪ್ರತಿಯೊಬ್ಬರು ಆನಂದಿಸುತ್ತಿದ್ದಾರೆ,” ಎಂದು ಶ್ಲಾಘಿಸಿದ್ದಾರೆ.

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ ಕೇವಲ 124 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 125 ರನ್‌ಗಳ ಗುರಿಯನ್ನು ನೀಡಿತ್ತು. ಈ ಬಗ್ಗೆ ಮಾತನಾಡಿದ ಸೂರ್ಯ, “ನೀವು ಎಷ್ಟೇ ಮೊತ್ತದ ಗುರಿಯನ್ನು ನೀಡಿದರೂ ಎದುರಾಳಿ ತಂಡವನ್ನು ಚೇಸಿಂಗ್‌ ವೇಳೆ ಕಟ್ಟಿ ಹಾಕಲು ಪ್ರಯತ್ನಿಸಬೇಕಾಗುತ್ತದೆ. ಹೌದು, ಟಿ20 ಪಂದ್ಯದಲ್ಲಿ 120 ರನ್‌ಗಳನ್ನು ಯಾರೂ ಇಷ್ಟಪಡುವುದಿಲ್ಲ ಆದರೆ, ನಾವು ಬೌಲಿಂಗ್‌ ಪ್ರದರ್ಶನದ ಬಗ್ಗೆ ನನಗೆ ಹೆಮ್ಮೆ ಇದೆ,” ಎಂದು ಹೇಳಿದ್ದಾರೆ.

ಏಡೆನ್‌ ಮಾರ್ಕ್ರಮ್‌ ಹೇಳಿಕೆ

“ಈಗ ಎರಡು ಪಂದ್ಯಗಳು ಮಾತ್ರ ಮುಗಿದಿವೆ ಹಾಗೂ ಸಾಕಷ್ಟು ಮನರಂಜನೆ ನಮ್ಮಮ ಮುಂದೆ ಉಳಿದಿದೆ. ಟಿ20ಐ ಸರಣಿಯಲ್ಲಿ ನಾವು 1-1 ಮೂಲಕ ಜೋಹನ್ಸ್‌ಬರ್ಗ್‌ಗೆ ಹೋಗಲಿದ್ದೇವೆ ಹಾಗೂ ಮುಂದೆ ಸಾಕಷ್ಟು ಮೋಜಿನಿಂದ ಕೂಡಿದೆ,” ಎಂದು ದಕ್ಷಿಣ ಆಫ್ರಿಕಾ ತಂಡದ ಕಪ್ತಾನ ಏಡೆನ್‌ ಮಾರ್ಕ್ರಮ್‌ ತಿಳಿಸಿದ್ದಾರೆ.

125 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ, ವರುಣ್‌ ಸ್ಪಿನ್‌ ಮೋಡಿಗೆ ನಲುಗಿ 86ಕ್ಕೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಕೊನೆಯಲ್ಲಿ ಜೆರಾಲ್ಡ್‌ ಕೋಯೆಡ್ಜಿ ಅಜೇಯ 19ರನ್‌ ಸಿಡಿಸಿದರೆ, ಟ್ರಿಸ್ಟನ್‌ ಸ್ಟಬ್ಸ್‌ ಅಜೇಯ 47ರನ್‌ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

“ಜೆರಾಲ್ಡ್‌ ಕೋಯೆಡ್ಜಿ ಕೊನೆಯಲ್ಲಿ ಬಂದ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದರು ಹಾಗೂ ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರು ಕ್ರೀಸ್‌ಗೆ ತೆರಳುವಾಗ ನಾವು ಪಂದ್ಯವನ್ನು ಗೆಲ್ಲುತ್ತೇವೆಂದು ಹೇಳಿದ್ದರು. ಅವರು ಹೇಳಿದಂತೆ ನಮಗೆ ಕೇವಲ ಎರಡು ದೊಡ್ಡ ಹೊಡೆತಗಳ ಅಗತ್ಯವಿತ್ತು. ಈ ವೇಳೆ ನಾನು ಉಸಿರಾಡಲು ಪ್ರಯತ್ನಿಸುತ್ತಿದ್ದೆ. ಏಕೆಂದರೆ ಇಂದು (ಭಾನುವಾರ) ನನ್ನ ಅಮ್ಮನ ಹುಟ್ಟು ಹಬ್ಬ. ನಮ್ಮ ಕುಟುಂಬದ 20-30 ಮಂದಿ ಕ್ರೀಡಾಂಣಗಣಕ್ಕೆ ಬಂದು ಪಂದುವನ್ನು ವೀಕ್ಷಿಸಿದ್ದರು. ನಾನು ನರ್ವಸ್‌ ಆಗಿದ್ದೆ ಹಾಗೂ ನನ್ನ ಉಸಿರಾಟವನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದ್ದೆ,” ಎಂದು ಏಡೆನ್‌ ಮಾರ್ಕ್ರಮ್‌ ತಿಳಿಸಿದ್ದಾರೆ.