ಮಕ್ಕಳ ಬೆಳವಣಿಗೆಗೆ ಪೌಷ್ಟಿಕಾಂಶಗಳ ಅಗತ್ಯವಿರುತ್ತದೆ. ಮಕ್ಕಳು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸಿದಾಗ ಅವರ ದೇಹಕ್ಕೆ ಪೋಷಕಾಂಶಗಳು ದೊರೆತು ಅವರು ಆರೋಗ್ಯವಾಗಿ ಬೆಳೆಯುತ್ತಾರೆ. ಆದರೆ ಮಕ್ಕಳು ಕೆಲವೊಂದು ಆಹಾರಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಅವರ ಬೆಳವಣಿಗೆ ಕುಂಠಿತವಾಗುತ್ತದೆ. ಆದಕಾರಣ ಮಕ್ಕಳಿಗೆ ಪೋಷಕಾಂಶಗಳನ್ನು ದೊರಕಿಸಲು ಅವರಿಗೆ ಕೆಲವೊಂದು ಪಾನೀಯಗಳನ್ನು ನೀಡಿ. ಇವು ಅವರ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆ ಪಾನೀಯಗಳ(Healthy Drinks For Child) ಬಗ್ಗೆ ತಿಳಿದುಕೊಳ್ಳೋಣ.
ಮಜ್ಜಿಗೆ: ಮಜ್ಜಿಗೆ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ತಡೆಯುವ ಪ್ರಯೋಜನಕಾರಿ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತದೆ. ಇದನ್ನು ನೈಸರ್ಗಿಕ ಪ್ರೋಬಯಾಟಿಕ್ ಎಂದೂ ಪರಿಗಣಿಸಲಾಗುತ್ತದೆ. ಇದನ್ನು ನಿಮ್ಮ ಮಗುವಿಗೆ ಪ್ರತಿದಿನ ಕುಡಿಸುವುದರಿಂದ ನಿಮ್ಮ ಮಗು ಆರೋಗ್ಯವಾಗಿ ಬೆಳೆಯುತ್ತದೆ.
ಎಳನೀರು: ಎಳನೀರು ಬಹಳ ಆರೋಗ್ಯಕರವಾದಂತಹ ನೈಸರ್ಗಿಕವಾದ ಪಾನೀಯವಾಗಿದೆ. ಇದು ಸೂಪರ್ ಹೈಡ್ರೇಟಿಂಗ್ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದ್ದರೂ, ಇದು ವಿವಿಧ ಪೋಷಕಾಂಶಗಳು ಮತ್ತು ಎಲೆಕ್ಟ್ರೋಲೈಟ್‍ಗಳನ್ನು ಸಹ ಹೊಂದಿರುತ್ತದೆ, ಇದು ಮಕ್ಕಳಲ್ಲಿ ನಿರ್ಜಲೀಕರಣ ಸಮಸ್ಯೆಯನ್ನು ಹೋಗಲಾಡಿಸುತ್ತದೆ.
ಬಾದಾಮಿ ಹಾಲು: ಬಾದಾಮಿಯಲ್ಲಿ ಮೆಗ್ನೀಸಿಯಮ್, ವಿಟಮಿನ್ ಇ, ಫೋಲೇಟ್, ಕ್ಯಾಲ್ಸಿಯಂ ಮತ್ತು ಇತರ ಹಲವಾರು ಪೋಷಕಾಂಶಗಳಿವೆ. ಈ ಅಂಶಗಳು ಮಕ್ಕಳ ದೇಹ ಮತ್ತು ಮನಸ್ಸಿನ ಆರೋಗ್ಯಕರ ಬೆಳವಣಿಗೆಯನ್ನು ತುಂಬಾ ಪ್ರಯೋಜನಕಾರಿ. ಬಾದಾಮಿ ಹೆಚ್ಚಿನ ಪ್ರಮಾಣದ ಪ್ರೋಟೀನ್ ಅನ್ನು ಸಹ ಒದಗಿಸುತ್ತದೆ. ಮಿಲ್ಕ್ ಶೇಕ್ ತಯಾರಿಸಿ ಅಥವಾ ನಿಮ್ಮ ಮಗುವಿಗೆ ಚಾಕೊಲೇಟ್ ಪುಡಿಯೊಂದಿಗೆ ಒಂದು ಲೋಟ ಬಾದಾಮಿ ಹಾಲು ಕುಡಿಸಿ.
ತಾಜಾ ಹಣ್ಣಿನ ಜ್ಯೂಸ್: ಹಣ್ಣುಗಳು ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಕ್ಕಳು ಹಣ್ಣುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಹಣ್ಣಿನಿಂದ ತಾಜಾ ಜ್ಯೂಸ್ ತಯಾರಿಸಿ ಕುಡಿಸಿರಿ. ಒಂದು ಲೋಟ ಹಣ್ಣಿನ ರಸ ಮಕ್ಕಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಆದರೆ ಪ್ಯಾಕೇಟ್‍ನಲ್ಲಿ ದೊರೆಯುವ ಹಣ್ಣಿನ ಜ್ಯೂಸ್ ಅನ್ನು ಕೊಡಬೇಡಿ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
ತರಕಾರಿ ಸ್ಮೂಥಿ: ತರಕಾರಿಗಳಲ್ಲಿ ಮಕ್ಕಳ ಆರೋಗ್ಯಕ್ಕೆ ಬೇಕಾದ ಹಲವು ಪೋಷಕಾಂಶಗಳಿರುತ್ತವೆ. ಆದರೆ ತರಕಾರಿಗಳನ್ನು ಮಕ್ಕಳು ತಿನ್ನುವುದಿಲ್ಲ. ಹಾಗಾಗಿ ಇವರಿಗೆ ತರಕಾರಿಯಲ್ಲಿರುವ ಪೋಷಕಾಂಶಗಳು ದೊರೆಯಬೇಕಾದರೆ ಅದರಿಂದ ಸ್ಮೂಥಿ ತಯಾರಿಸಿ ಕೊಡಿ. ಇದನ್ನು ಮಕ್ಕಳು ಇಷ್ಟಪಡುತ್ತಾರೆ. ಯಾವುದೇ ತರಕಾರಿಗಳನ್ನು ತಿನ್ನಲು ಬಯಸದ ಮಕ್ಕಳಿಗೆ ಇದು ಸೂಕ್ತವಾಗಿದೆ.
ಇದನ್ನೂ ಓದಿ:ತೂಕ ಇಳಿಸಿಕೊಳ್ಳಬೇಕೆ? ಖರ್ಜೂರ ಸೇವಿಸಿ ನೋಡಿ!
ಈ ಪಾನೀಯಗಳನ್ನು ನಿಮ್ಮ ಮಕ್ಕಳಿಗೆ ನೀಡುವ ಮೂಲಕ ಅವರನ್ನು ಆರೋಗ್ಯವಂತರಾಗಿ ನೀವು ಮಾಡಬಹುದು.