ಗಾಜಾ: 2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು (Hamas Terrorists) ನಡೆಸಿದ ದಾಳಿಗೆ ತೀವ್ರ ಪ್ರಮಾಣದಲ್ಲಿ ಪ್ರತಿದಾಳಿ (Israel Hamas War) ನಡೆಸುತ್ತಿರುವ ಇಸ್ರೇಲ್ ಸೈನಿಕರು ಇಂದಿಗೂ ಕದನ ವಿರಾಮ ಘೋಷಿಸಿಲ್ಲ. ಈ ನಡುವೆ ಹಮಾಸ್ ಉಗ್ರರ ಕ್ರೌರ್ಯದ ವಿಡಿಯೋವೊಂದು ವೈರಲ್ ಆಗುತ್ತಿದೆ. ತಾವು ಒತ್ತೆಯಾಳುಗಳನ್ನಾಗಿರಿಸಿಕೊಂಡಿರುವ ಅಮಾಯಕ ಜನರಿಗೆ ಹಮಾಸ್ ಉಗ್ರರು ಯಾವ ರೀತಿ ಚಿತ್ರಹಿಂಸೆ(Hamas Torture Tactics) ಎಂಬುದು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇನ್ನು ಈ ವಿಡಿಯೋ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.
ಇಸ್ರೇಲ್ ರಕ್ಷಣಾ ಪಡೆ (IDF) ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ಉತ್ತರ ಗಾಜಾದಲ್ಲಿ 2018 ಮತ್ತು 2020 ರ ನಡುವೆ ಸೆರೆಹಿಡಿಯಲಾದ ತುಣುಕನ್ನು ಜಬಾಲಿಯಾದಲ್ಲಿನ ಹಿಂದಿನ ಹಮಾಸ್ ನೆಲೆಯಿಂದ ಹಿಂಪಡೆಯಲಾಗಿದೆ ಮತ್ತುಹಮಾಸ್ ಉಗ್ರರ ಕ್ರೌರ್ಯ ಎಷ್ಟಿದೆ ಎಂಬುದು ಇದರಿಂದ ಬಯಲಾಗಿದೆ ಎಂದು IDF ಹೇಳಿಕೆಯಲ್ಲಿ ತಿಳಿಸಿದೆ. ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸುವ ನಡೆಯಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ.
WATCH: IDF discovered footage of Hamas terrorists torturing Palestinians. pic.twitter.com/zErfREsHnY
— Gera. Belik ( גרשון ) (@gershon27) November 10, 2024
X ನಲ್ಲಿ IDF ಹಂಚಿಕೊಂಡ ಸುಮಾರು 47 ನಿಮಿಷಗಳ ವೀಡಿಯೊದಲ್ಲಿ, ಒತ್ತೆಯಾಳುಗಳ ಕೈ ಕಾಲುಗಳನ್ನು ಕಟ್ಟಿ ಕ್ರೂರವಾಗಿ ಚಿತ್ರಹಿಂಸೆ ನೀಡುತ್ತಾ ಹಮಾಸ್ ಉಗ್ರರು ಅವರ ವಿಚಾರಣೆ ಮಾಡುವುದು, ಅವರ ಕಾಲಿಗೆ ನಿರ್ದಯೆಯಿಂದ ಒಂದೇ ಸಮಾನೆ ಕೋಲಿನಿಂದ ಬಾರಿಸುತ್ತಿರುವ ದೃಶ್ಯ ಕಾಣಬಹುದಾಗಿದೆ.
ಕೆಲವು ದೃಶ್ಯಗಳಲ್ಲಿ, ಬಂಧಿತರು ಒಂದು ಕಾಲಿನ ಮೇಲೆ ನಿಲ್ಲಲು ಹೆಣಗಾಡುತ್ತಾರೆ. ಆದರೆ ಅವರ ಇನ್ನೊಂದು ಕಾಲನ್ನು ಮೇಲಕ್ಕೆ ಎಳೆದು ಕಟ್ಟಲಾಗಿರುತ್ತದೆ. ಇಸ್ರೇಲ್‌ನೊಂದಿಗೆ ಸಹಕರಿಸುವ ಅಥವಾ ಹಮಾಸ್ ಅನ್ನು ವಿರೋಧಿಸುವ ನಾಗರಿಕರನ್ನು ಗುರಿಯಾಗಿಸಿಕೊಂಡಿದೆ ಎಂದು ಹಮಾಸ್ ಈ ಕ್ರೌರ್ಯ ಎಸಗುತ್ತಿದೆ ಎನ್ನಲಾಗಿದೆ.
ಕೆಲವು ತಿಂಗಳ ಹಿಂದೆ ಸೆರೆ ಸಿಕ್ಕಿರುವ ಇಸ್ರೇಲ್ ಯೋಧರ ಮೇಲೆ ಹಮಾಸ್ ಉಗ್ರರ ಕ್ರೌರ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಿ ಭಾರೀ ವೈರಲ್ ಆಗಿತ್ತು. ಗಾಯಗೊಂಡ ಇಸ್ರೇಲಿ ಮಹಿಳಾ ಸೈನಿಕರ ಮೇಲೆ ಹಮಾಸ್ ಉಗ್ರರು ಲೈಂಗಿಕ ದೌರ್ಜನ್ಯ ನಡೆಸುವ ವಿಡಿಯೊ ಇದಾಗಿದ್ದು, ಅವರ ಕ್ರೂರತೆಗೆ ಜಗತ್ತೇ ಬೆಚ್ಚಿ ಬಿದ್ದಿತ್ತು.
ಒತ್ತೆಯಾಳುಗಳು ಮತ್ತು ಕಾಣೆಯಾದವರ ಕುಟುಂಬ ವೇದಿಕೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಈ ಆಘಾತಕಾರಿ ದೃಶ್ಯ ಕಂಡು ಬಂದಿತ್ತು. ಕಳೆದ ವರ್ಷ ಅಕ್ಟೋಬರ್ 7ರಂದು ನಡೆದ ದಾಳಿಯ ವೇಳೆ ಹಮಾಸ್ ಉಗ್ರರು ಸೆರೆಸಿಕ್ಕ ಇಸ್ರೇಲ್‌ನ 5 ಮಹಿಳಾ ಸೈನಿಕರಿಗೆ ಕೈಕೋಳ ತೊಡಿಸಿ ಗೋಡೆಗೆ ಒತ್ತಿ ಹಿಡಿದಿರುವುದು ಕಂಡು ಬರುತ್ತಿದೆ. ಹತರಾದ ಇತರ ಸೈನಿಕರ ಶವವೂ ಪಕ್ಕದಲ್ಲೇ ಕಂಡು ಬಂದಿತ್ತು.
ಈ ಸುದ್ದಿಯನ್ನೂ ಓದಿ: Israel–Hamas war : ಹಮಾಸ್ ಉಗ್ರರ ದಾಳಿಯಲ್ಲಿ ಬದುಕುಳಿದವಳು ಜನ್ಮದಿನದಂದೇ ಆತ್ಮಹತ್ಯೆ ಮಾಡಿಕೊಂಡಳು!