-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ಬಾರಿಯಂತೆ ಈ ಬಾರಿಯೂ ನಾನಾ ಬಗೆಯ ಸ್ಕಾರ್ಫ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಡಿಸೈನ್‌ಗೆ ತಕ್ಕಂತೆ ಅವುಗಳನ್ನು ಧರಿಸಿದಾಗ ಹಾಗೂ ಸೂಕ್ತ ಸ್ಟೈಲಿಂಗ್ ಫಾಲೋ ಮಾಡಿದಾಗ ಚಳಿಗಾದಲ್ಲೂ (Winter Scarf Fashion Ideas) ನೋಡಲು ಆಕರ್ಷಕವಾಗಿ ಕಾಣಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸ್ಟೈಲಿಶ್ ಲುಕ್‌ಗೆ ಸಾಥ್
“ಚಳಿಗಾಲ ಬಂತೆಂದರೆ ಸಾಕು, ಸ್ಕಾರ್ಫ್‌ಗೆ ಪ್ರಮುಖ ಸ್ಥಾನ. ಸ್ವೆಟರ್, ಜಾಕೆಟ್‌ನಂತೆಯೇ ಸ್ಕಾರ್ಫ್ ಕೂಡ ಇದೀಗ ಮಹಿಳೆಯರ ಫ್ಯಾಷನ್‌ವೇರ್‌ಗೆ ಜತೆಯಾಗಿವೆ. ಕೊಂಚ ಸ್ಟೈಲಾಗಿ ಕಾಣಿಸಲು ಸಾಥ್ ನೀಡುತ್ತಿವೆ. ಬೆಳಗ್ಗೆ ಹಾಗೂ ಸಂಜೆಯ ಚಳಿಗಾಳಿಗೆ ಬೆಚ್ಚಗಿಡಲು ಸಹಕರಿಸುತ್ತಿವೆ. ಇವನ್ನು ಸ್ಟೈಲಿಶ್ ಆಗಿ ಧರಿಸಿದಾಗ ಆಕರ್ಷಕವಾಗಿ ಬಿಂಬಿಸುತ್ತಿವೆ”ಎನ್ನುತ್ತಾರೆ ಇಮೇಜ್ ಕನ್ಸಲ್ಟೆಂಟ್ ರಾಜಿ.
ಅವರ ಪ್ರಕಾರ, ಇದೀಗ ಲಾಂಗ್ ಹಾಗೂ ಶಾರ್ಟ್ ಸ್ಕಾರ್ಫ್‌ಗಳು ಟ್ರೆಂಡಿಯಾಗಿದ್ದು, ನಾನಾ ಬಗೆಯ ಪ್ರಿಂಟ್ಸ್‌ನಲ್ಲಿ ಲಭ್ಯವಿದೆ. ಅದರಲ್ಲೂಸಾಫ್ಟ್ ಫ್ಯಾಬ್ರಿಕ್‌ನ ಸ್ಕಾರ್ಫ್‌ಗಳು ಹೆಚ್ಚು ಪ್ರಚಲಿತದಲ್ಲಿವೆ ಎನ್ನುತ್ತಾರೆ.
ಸ್ಕಾರ್ಫ್ ಕಟ್ಟುವುದು ಒಂದು ಕಲೆ
ನೀವು ಸ್ಕಾರ್ಫ್ ಅನ್ನು ಸುತ್ತಿಕೊಳ್ಳಬಹುದು, ಹೊದ್ದುಕೊಳ್ಳಬಹುದು, ತಲೆ ಮೇಲೆ ಬ್ಯಾಂಡ್‌ನಂತೆ ಕಟ್ಟಿಕೊಳ್ಳಬಹುದು. ಇನ್ನು ಚೊಟುದ್ದದ ಸ್ಕಾರ್ಫ್‌ನ್ನು ಹೇಗೆ ಹಾಕಿಕೊಂಡರೂ ಫ್ಯಾಷನ್ ಆಗುವುದು. ಅದರಲ್ಲೂ ಚಳಿಗಾಲದ ನಡುಗುವ ಸಂಜೆಗೆ ಇದು ಹೇಳಿ ಮಾಡಿಸಿದ ಫ್ಯಾಷನ್ ಆಕ್ಸೆಸರೀಸ್ ಇದು ಎಂದರೂ ಅತಿಶಯೋಕ್ತಿಯಾಗದು.
ಔಟ್‌ಫಿಟ್‌ಗೆ ತಕ್ಕಂತಿರಲಿ ಸ್ಕಾರ್ಫ್ ಸ್ಟೈಲಿಂಗ್
ಸಾದಾ ಔಟ್‌ಫಿಟ್ ಆದಲ್ಲಿ ಕಾಂಟ್ರಸ್ಟ್ ಕಲರ್‌ನ ಪ್ರಿಂಟ್ಸ್‌ನ ಸ್ಕಾರ್ಫ್ ಧರಿಸಿ. ಪ್ರಿಂಟ್ಸ್ ಇರುವಂತಹ ಔಟ್‌ಫಿಟ್ ಆದಲ್ಲಿ ಸಾದಾ ಅಥವಾ ಮಾನೋಕ್ರೋಮ್ ಶೇಡ್‌ನ ಸ್ಕಾರ್ಫ್ ಧರಿಸಿ. ನೋಡಲು ಟ್ರೆಂಡಿಯಾಗಿ ಕಾಣಿಸುವುದು.
ಉಡುಪಿಗೆ ಮ್ಯಾಚ್ ಮಾಡಿ
ಫ್ಲೋರಲ್, ಜಿಯಾಮೆಟ್ರಿಕಲ್, ಟ್ರಾಪಿಕಲ್ ಸೇರಿದಂತೆ ನಾನಾ ಬಗೆಯ ಪ್ರಿಂಟ್ಸ್ ಹಾಗೂ ಬಣ್ಣಗಳಲ್ಲಿ ದೊರಕುವ ಇವು ನೋಡಲು ಸ್ಟೈಲಿಶ್ ಆಗಿ ಧರಿಸಿದಾಗ ನೋಡಲು ಮನಮೋಹಕವಾಗಿ ಕಾಣಿಸುತ್ತವೆ. ಹಾಗಾಗಿ ಔಟ್‌ಫಿಟ್‌ಗೆ ಸೂಟ್ ಆಗುವಂತೆ ಸ್ಕಾರ್ಫ್ ಧರಿಸಿ.
ಬಂದನಾ ಸ್ಟೈಲ್ ಮಾಡಿ
ಅಂದಹಾಗೆ, ಇದು ತೀರಾ ಸಾಮಾನ್ಯವಾದ ಸ್ಟೈಲ್. ಆದರೆ, ಎವರ್‌ಗ್ರೀನ್ ಸ್ಟೈಲ್ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು ಕತ್ತಿನ ಹಿಂಭಾಗದಿಂದ ಮುಂಭಾಗ ನೆಲ ಕಾಣುವಂತೆ ಸ್ಕಾರ್ಫ್ ತುದಿಯನ್ನು ಸುತ್ತಿ ಹಾಕಿ. ಬಂದನಾ ಸ್ಟೈಲ್ ಮಾಡಿ ನೋಡಿ.
ಹೆಡ್‌ಬ್ಯಾಂಡ್ ಸ್ಕಾರ್ಫ್ ಸ್ಟೈಲ್
ಮುಂಭಾಗದ ಕೂದಲಿಗೆ ಹೆಡ್‌ಬ್ಯಾಂಡ್‌ನಂತೆ ಬಿಂಬಿಸುವ ಸ್ಟೈಲಿಂಗ್ ಇದು. ಹೌದು, ಮುಂದಲೆಯ ಮೇಲಿನಿಂದ ಕೆಳಗೆ ಕಾಣುವಂತೆ ಗಂಟು ಹಾಕುವ ಹೆಡ್‌ಬ್ಯಾಂಡ್ ಸ್ಟೈಲ್ ಕೂಡ ಡಿಫರೆಂಟ್ ಲುಕ್ ನೀಡುವುದು.
ಲೂಪ್ಡ್ ಸ್ಟೈಲ್
ಹಗ್ಗದ ಸುರಳಿಯಂತೆ ಸುತ್ತಿದ ಲೂಪ್ಡ್ ಸ್ಕಾರ್ಫ್ ಸ್ಟೈಲ್ ನೋಡಲು ಚೆನ್ನಾಗಿ ಕಾಣಿಸುತ್ತದೆ. ಇದೇ ರೀತಿ ಶಾಲಿನಂತೆ ಹೊದ್ದ ಶಾಲ್ಡ್ ಶ್ರಗ್ ಸ್ಟೈಲ್ ಕೂಡ ಟ್ರೈ ಮಾಡಿ, ನೋಡಬಹುದು.
ಈ ಸುದ್ದಿಯನ್ನೂ ಓದಿ | Winter Cardigans Fashion: ಚಳಿಗಾಲಕ್ಕಾಗಿ ಬಂತು ವೈವಿಧ್ಯಮಯ ಕಾರ್ಡಿಗಾನ್ಸ್!
ನೆಕ್ಕರ್‌ಚಿಫ್ ಸ್ಟೈಲ್
ನಿಮ್ಮ ಕತ್ತನ್ನು ಬಳಸಿ, ನೇತಾಡುವ ನೆಕ್ಕರ್‌ಚಿಫ್ ಸ್ಟೈಲ್ ಕಾರ್ಪೋರೇಟ್ ಕ್ಷೇತ್ರದ ಮಹಿಳೆಯರಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ. ಕ್ಯಾಶುವಲ್ ಔಟ್‌ಫಿಟ್‌ನ ಡ್ರೆಪ್ಡ್ ಸ್ಕಾರ್ಫ್‌ನಂತಹ ಈ ಫ್ಯಾಷನ್ ಸ್ಟೇಟ್‌ಮೆಂಟ್ ಪ್ರೊಫೆಷನಲ್ ಮಹಿಳೆಯರಿಗೆ ಸೂಕ್ತ.
(ಲೇಖಕಿ ಫ್ಯಾಷನ್ ಪತ್ರಕರ್ತೆ)