ಬೆಂಗಳೂರು: ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರ ಸಹಾಯದಿಂದ ಜೈಲಿನಿಂದ ಹೊರಗೆ ಬಂದಿದ್ದ ಆರೋಪಿಯೊಬ್ಬ, ಇದೀಗ ಜೋಡಿ ಕೊಲೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ಘಟನೆ (Duniya Vijay) ನಗರದಲ್ಲಿ ನಡೆದಿದೆ. ನಗರದ ಹೊರವಲಯ ಬಾಗಲೂರಿನಲ್ಲಿ ನವೆಂಬರ್ 8ರಂದು ನಡೆದ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಬಂಧಿತ ಆರೋಪಿಯಾಗಿದ್ದಾನೆ. ನವೆಂಬರ್ 8ರ ರಾತ್ರಿ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗೇಶ್ (51) ಮತ್ತು ಮಂಜುನಾಥ್ (50) ಎನ್ನುವವರ ಭೀಕರವಾಗಿ ಹತ್ಯೆಯಾಗಿತ್ತು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸುರೇಶ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಈ ಸುರೇಶ್ ಯಾರು ಎನ್ನುವುದರ ಹಿನ್ನೆಲೆ ಬಹಿರಂಗವಾಗಿದೆ.
ಈ ಹಿಂದೆ ಆರೋಪಿ ಸುರೇಶ್, ಕೊಲೆ ಹಾಗೂ ಅತ್ಯಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಈತ ಜೈಲಿನಿಂದ ಹೊರಬರಲು ಶ್ಯೂರಿಟಿ ಹಣ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆಗ ನಟ ದುನಿಯಾ ವಿಜಯ್ ಅವರು ಒಂದಷ್ಟು ಅಪರಾಧಿಗಳಿಗೆ ತಲಾ 3 ಲಕ್ಷದಂತೆ ಶ್ಯೂರಿಟಿ ಹಣ ಕೊಟ್ಟು ಜೈಲಿನಿಂದ ರಿಲೀಸ್ ಮಾಡಿಸಿದ್ದರು.
ಜೈಲಿನಿಂದ ಹೊರಬಂದ ಬಳಿಕ ಸುರೇಶ್ ಕೊತ್ತಂಬರಿ ಸೊಪ್ಪು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಮಾರ್ಕೆಟ್ ಪಕ್ಕದಲ್ಲಿದ್ದ ನಾಗೇಶ್ ಮತ್ತು ಮಂಜುನಾಥ್ ಎಂಬುವವರು ನೀನು ಕಳ್ಳ, ಕೊಲೆಗಾರ ಎಂದು ಸುರೇಶ್ಗೆ ಆಗಾಗ ಹೀಯಾಳಿಸುತ್ತಿದ್ದರು ಎನ್ನಲಾಗಿದೆ. ಇದದಿಂದ ಸಿಟ್ಟಾದ ಸುರೇಶ್ ಆ ಇಬ್ಬರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿ ಸುರೇಶ್‌ನನ್ನು ಬಂಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bandi Sanjay Kumar: ಲಾರಿಯಡಿಯಲ್ಲಿ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಹಿಳೆಯ ರಕ್ಷಣೆ; ಕೇಂದ್ರ ಸಚಿವರ ಕಾರ್ಯಕ್ಕೆ ಮೆಚ್ಚುಗೆ ಮಹಾಪೂರ!
ಬೆಂಗಳೂರಲ್ಲಿ ನಿಲ್ಲದ ಬಿಎಂಟಿಸಿ ಬಸ್ ಸಿಬ್ಬಂದಿ ಮೇಲೆ ಹಲ್ಲೆ; ಚಾಲಕನನ್ನು ಥಳಿಸಿದ ಬೈಕ್ ಸವಾರ
ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಚಾಲಕ, ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳು (Assault case) ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಇತ್ತೀಚೆಗೆ ನಿರ್ವಾಹಕನಿಗೆ ಪ್ರಯಾಣಿಕನೊಬ್ಬ ಕಲ್ಲಿನಿಂದ ಹಲ್ಲೆ ಮಾಡಿದ ಬೆನ್ನಲ್ಲೇ ಇದೀಗ ಬೈಕ್ ಸವಾರನೊಬ್ಬ, ಬಿಎಂಟಿಸಿ ಬಸ್ ಡ್ರೈವರ್ ಮೇಲೆ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಇದು ಕಳೆದ ಮೂರು ತಿಂಗಳಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ನಡೆದ 6ನೇ ಹಲ್ಲೆ ಪ್ರಕರಣವಾಗಿದೆ.
ಸೋಮವಾರ ರಾತ್ರಿ 8 ಗಂಟೆಗೆ ಘಟನೆ ನಡೆದಿದೆ. ಮೈಸೂರು ರಸ್ತೆಯ ಹಳೆಗುಡ್ಡದಹಳ್ಳಿ ಬಳಿ ಘಟನೆ ನಡೆದಿದ್ದು., ವಿಜಯನಗರದಿಂದ ಜಯನಗರ ಸಂಚಾರ ಮಾಡುತ್ತಿದ್ದ ಬಸ್ಗೆ ಬೈಕ್ ಸವಾರ ಹತ್ತಿ ಡ್ರೈವರ್ ಮುರ್ತುಜಾ ಸಾಬ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ.
ಚಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ಮಾಡಿದ ಬೈಕ್ ಸವಾರನ ಬೈಕ್ ಸಂಖ್ಯೆ- KA-02JS1916 ಆಗಿದ್ದು, ಚಾಲಕನ ದೂರಿನ ಮೇರೆಗೆ ಬ್ಯಾಟರಾಯನಪುರ ಪೋಲಿಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.