Friday, 22nd November 2024

Term Deposit: ಅಂಚೆ ಕಚೇರಿ ಅವಧಿ ಠೇವಣಿ; 1 ಲಕ್ಷ ರೂ. ಠೇವಣಿ ಮಾಡಿದರೆ ಎಷ್ಟು ಆದಾಯ ಪಡೆಯಬಹುದು?

Term Deposit

ಭಾರತೀಯ ಅಂಚೆ ಕಚೇರಿಯಲ್ಲಿರುವ (Post office) ಹಲವು ಯೋಜನೆಗಳು (Term Deposit) ಸಣ್ಣ ಮತ್ತು ದೊಡ್ಡ ಹೂಡಿಕೆದಾರರನ್ನು (Investors) ಆಕರ್ಷಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಅಂಚೆ ಕಚೇರಿ ಉಳಿತಾಯ ಯೋಜನೆಗಳನ್ನು (Post Office Scheme) ಸರ್ಕಾರವೇ ನಿರ್ವಹಿಸುತ್ತದೆ. ಹೀಗಾಗಿ ಇದರಲ್ಲಿ ಮಾಡುವ ಹೂಡಿಕೆಗೆ ಯಾವುದೇ ಅಪಾಯವಿರುವುದಿಲ್ಲ.

ಭಾರತೀಯ ಆಂಚೆ ಕಚೇರಿಯಲ್ಲಿರುವ ಉಳಿತಾಯ ಯೋಜನೆಯ ಬಡ್ಡಿಯು ಬ್ಯಾಂಕುಗಳಿಗಿಂತ ಹೆಚ್ಚಾಗಿರುತ್ತದೆ. ಅದರಲ್ಲೂ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (ಟಿಡಿ) ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ.

ಬ್ಯಾಂಕ್ ಎಫ್‌ಡಿಯಂತೆ ಇರುವ ಹೂಡಿಕೆ ಯೋಜನೆ ಇದಾಗಿದ್ದು, ಇದರಲ್ಲಿ ಹೂಡಿಕೆದಾರರು ತಮ್ಮ ಹಣವನ್ನು 1 ರಿಂದ 5 ವರ್ಷಗಳವರೆಗೆ ಹೂಡಿಕೆ ಮಾಡಬಹುದು.

ಈ ಉಳಿತಾಯ ಯೋಜನೆಯಲ್ಲಿ 1 ವರ್ಷಕ್ಕೆ ಶೇ. 6.9, 2 ವರ್ಷಕ್ಕೆ ಶೇ. 7.0, 3 ವರ್ಷಗಳಿಗೆ ಶೇ. 7.1 ಮತ್ತು 5 ವರ್ಷಗಳಿಗೆ ಶೇ. 7.5ರಷ್ಟು ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ ಎಷ್ಟು ಹಣ ಪಡೆಯಬಹುದು ನೋಡೋಣ.

ವಿವಿಧ ಅವಧಿಗಳಲ್ಲಿ 1 ಲಕ್ಷ ಮತ್ತು 2 ಲಕ್ಷ ರೂ. ಹೂಡಿಕೆ ಮಾಡಿದರೆ ಅದರಿಂದ ಬರುವ ಆದಾಯದ ವಿವರ ಇಂತಿದೆ.

Term Deposit

1 ಲಕ್ಷ ರೂ. ಅನ್ನು 1 ವರ್ಷದ ಅವಧಿಗೆ ಠೇವಣಿ ಮಾಡಿದರೆ 7,080 ರೂ. ಬಡ್ಡಿಯೊಂದಿಗೆ ಮೆಚ್ಯೂರಿಟಿ ಮೊತ್ತ 1,07,080 ರೂ. ಅನ್ನು ಪಡೆಯಬಹುದು.

2 ವರ್ಷದ ಠೇವಣಿಗೆ 14,888 ಬಡ್ಡಿರೂ. ಬಡ್ಡಿ, ಮೆಚ್ಯೂರಿಟಿ ಮೊತ್ತ 1,14,888 ರೂ., 3 ವರ್ಷದ ಠೇವಣಿಗೆ 23,508 ಬಡ್ಡಿ ರೂ. ಬಡ್ಡಿ ಮೆಚ್ಯೂರಿಟಿ ಮೊತ್ತ 1,23,508 ರೂ., 5 ವರ್ಷದ ಠೇವಣಿಗೆ 44,995 ರೂ. ಬಡ್ಡಿಯೊಂದಿಗೆ ಮೆಚ್ಯೂರಿಟಿ ಮೊತ್ತ 1,44,995 ರೂ. ಅನ್ನು ಪಡೆಯಬಹುದು.

2 ಲಕ್ಷ ರೂ. ಅನ್ನು 1 ವರ್ಷದ ಅವಧಿಗೆ ಠೇವಣಿ ಮಾಡಿದರೆ 14,161 ರೂ. ಬಡ್ಡಿ, ಮೆಚ್ಯೂರಿಟಿ ಮೊತ್ತ 2,14,161 ರೂ., 2 ವರ್ಷದ ಅವಧಿಗೆ 29,776 ಬಡ್ಡಿ, ಮೆಚ್ಯೂರಿಟಿ ಮೊತ್ತ 2,29,776 ರೂ., 3 ವರ್ಷದ ಅವಧಿಗೆ 47,015 ಬಡ್ಡಿ ರೂ., ಮೆಚ್ಯೂರಿಟಿ ಮೊತ್ತ 2,47,015 ರೂ., 5 ವರ್ಷದ ಠೇವಣಿಗೆ 89,989 ರೂ. ಬಡ್ಡಿಯೊಂದಿಗೆ ಮೆಚ್ಯೂರಿಟಿ ಮೊತ್ತ 2,89,989 ರೂ. ಅನ್ನು ಪಡೆಯಬಹುದಾಗಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಅಂಚೆ ಕಚೇರಿಗೆ ಭೇಟಿ ನೀಡಿ ಯೋಜನೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಗುರುತು ದಾಖಲೆ, ವಿಳಾಸ ಪುರಾವೆ, ಫೋಟೋ ಮತ್ತು ಇತರ ಅಗತ್ಯ ದಾಖಲೆಗಳನ್ನು ಸಲ್ಲಿಸಿ. ಅಗತ್ಯವಿರುವ ಕನಿಷ್ಠ ಮೊತ್ತವನ್ನು ಠೇವಣಿ ಮಾಡಿ. ಅರ್ಜಿ ಪರಿಶೀಲನೆಯ ಅನಂತರ ಖಾತೆಯನ್ನು ಸಕ್ರಿಯಗೊಳಿಸಲಾಗುತ್ತದೆ. ಇದಕ್ಕಾಗಿ ದೃಢೀಕರಣವನ್ನು ಪಡೆಯಬಹುದು.

ಇದಕ್ಕಾಗಿ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಸುವ ಅವಕಾಶವಿದೆ.

ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಬಳಸಿಕೊಂಡು ಇಂಡಿಯಾ ಪೋಸ್ಟ್ ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿ. ಬಳಿಕ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಅನಂತರ ನೆಟ್ ಬ್ಯಾಂಕಿಂಗ್ ಮೂಲಕ ನಿರ್ದಿಷ್ಟ ಮೊತ್ತವನ್ನು ಪಾವತಿಸಿ.

PAN Card Update: ಪಾನ್ ಕಾರ್ಡ್ ತಿದ್ದುಪಡಿಗೆ ಇಲ್ಲಿದೆ ಸುಲಭ ವಿಧಾನ

ಖಾತೆ ತೆರೆಯುವಿಕೆ ದೃಢೀಕರಿಸಿ ಮತ್ತು ಆನ್‌ಲೈನ್ ಪೋರ್ಟಲ್ ಮೂಲಕ ಹೂಡಿಕೆ ಬಗ್ಗೆ ಟ್ರ್ಯಾಕ್ ಮಾಡಬಹುದು.
ಆನ್‌ಲೈನ್‌ನಲ್ಲಿ ಈ ಹಂತಗಳನ್ನು ಅನುಸರಿಸುವ ಮೂಲಕ ಸುಲಭವಾಗಿ ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ ಖಾತೆಯನ್ನು ತೆರೆಯಬಹುದು ಮತ್ತು ಹೂಡಿಕೆಯ ಮೇಲೆ ಸುರಕ್ಷಿತ ಆದಾಯವನ್ನು ಪಡೆಯಬಹುದು.