Friday, 15th November 2024

Vastu Tips: ಜಾಗವಿಲ್ಲವೆಂದು ದೇವರ ಮಂಟಪವನ್ನು ಗೋಡೆ ಮೇಲೆ ತೂಗು ಹಾಕುವುದು ಸರಿಯೇ?

Vastu Tips

ಮನೆಯಲ್ಲಿ ಪೂಜಾ ಸ್ಥಳವನ್ನು (Home Temple) ಅತ್ಯಂತ ಪವಿತ್ರ ಮತ್ತು ವಿಶೇಷವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ಪೂಜಾ ಕೊಠಡಿ ಇದ್ದೇ ಇರುತ್ತದೆ. ವಾಸ್ತು ಶಾಸ್ತ್ರದಲ್ಲೂ (Vastu Tips) ಪೂಜಾ ಕೋಣೆಗೆ ವಿಶೇಷ ಸ್ಥಳ ಇರಬೇಕು ಎಂದು ಹೇಳಲಾಗಿದೆ. ಮನೆಯಲ್ಲಿರುವ ದೇವಾಲಯದ ಸ್ಥಳವು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಹೀಗಾಗಿ ವಾಸ್ತು ಶಾಸ್ತ್ರದ ಪ್ರಕಾರ ಪೂಜಾ ಕೋಣೆಗೆ ಸಂಬಂಧಿಸಿ ನಿರ್ದಿಷ್ಟ ನಿಯಮ ಮತ್ತು ತತ್ತ್ವಗಳ ಪಾಲನೆ ಬಹುಮುಖ್ಯವಾಗಿರುತ್ತದೆ.

ಮನೆಯಲ್ಲಿ ಪೂಜಾ ಸ್ಥಳವನ್ನು ಈಶಾನ್ಯ ದಿಕ್ಕಿನಲ್ಲಿ ಇರಿಸಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ಯಾಕೆಂದರೆ ಈ ದಿಕ್ಕು ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.

Vastu Tips

ಮನೆ ಸಣ್ಣದಾಗಿದ್ದರೆ ಪ್ರತ್ಯೇಕ ದೇವರ ಕೋಣೆ ಮಾಡುವುದು ಸಾಧ್ಯವಿಲ್ಲದೇ ಇದ್ದಾಗ, ಇನ್ನು ಕೆಲವರು ಮನೆಯಲ್ಲಿ ಪುಟ್ಟ ದೇಗುಲವಿದ್ದರೆ ಸಾಕು ಎಂದುಕೊಳ್ಳುತ್ತಾರೆ. ಹೀಗಾಗಿ ಗೋಡೆಯಲ್ಲಿ ತೂಗು ಹಾಕುವ ದೇವರ ಸ್ಟ್ಯಾಂಡ್ (Home Temple On A Wall) ಅನ್ನು ಇಡುತ್ತಾರೆ. ಆದರೆ ಈ ರೀತಿ ದೇವರ ಮನೆ ಮಾಡುವುದು ಸರಿಯೇ? ಈ ಬಗ್ಗೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ ನೋಡೋಣ.

ಮನೆಯಲ್ಲಿ ದೇವಾಲಯವನ್ನು ಇಟ್ಟುಕೊಳ್ಳುವುದಕ್ಕೆ ಸಂಬಂಧಿಸಿ ಅನೇಕ ನಿಯಮಗಳಿವೆ. ಆದರೂ ಕೆಲವರು ದೇವರ ಮಂಟಪವನ್ನು ಗೋಡೆಯ ಮೇಲೆ ನೇತು ಹಾಕುತ್ತಾರೆ. ಇದಕ್ಕೆ ಹಲವು ನಿಯಮಗಳಿವೆ. ಅದನ್ನು ಅನುಸರಿಸುವುದರಿಂದ ಮಾತ್ರ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ವೃದ್ಧಿಯಾಗಲು ಸಾಧ್ಯ.

ಜ್ಯೋತಿಷಿ ಶೀತಲ್ ಶಪಾರಿಯಾ ಅವರು ಮನೆಯಲ್ಲಿ ದೇವರ ಮಂಟಪವನ್ನು ಹೇಗೆ ಇಡಬೇಕು, ಗೋಡೆಯ ಮೇಲೆ ಮಂಟಪವನ್ನು ಇರಿಸುವುದು ವಾಸ್ತು ಪ್ರಕಾರ ಮಂಗಳಕರವೇ ಅಥವಾ ಇಲ್ಲವೇ ಎಂಬುದರ ಕುರಿತು ಹೇಳಿರುವುದು ಹೀಗೆ: ಜ್ಯೋತಿಷಿ ಶೀತಲ್ ಅವರ ಪ್ರಕಾರ ಮನೆಯಲ್ಲಿ ದೇವರ ಮಂಟಪ ಇಡಲು ಸರಿಯಾದ ಸ್ಥಳವೆಂದರೆ ಈಶಾನ್ಯ ಮೂಲೆ. ಇದಲ್ಲದೆ ದೇವಾಲಯವನ್ನು ಯಾವತ್ತೂ ಮೆಟ್ಟಿಲುಗಳ ಕೆಳಗೆ ಇಡಬಾರದು ಎನ್ನುತ್ತಾರೆ.

ವಾಸ್ತು ಶಾಸ್ತ್ರದ ತತ್ತ್ವಗಳ ಪ್ರಕಾರ ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಮತ್ತು ಮೂಲೆಯಲ್ಲಿ ಪ್ರತ್ಯೇಕವಾದ ಪೂಜಾ ಕೊಠಡಿಯನ್ನು ಹೊಂದಿರುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ದೇವಾಲಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಅಲ್ಲದೇ ಸ್ನಾನಗೃಹದ ಬಳಿಯೂ ಅದನ್ನು ಇರಿಸಬೇಡಿ ಎನ್ನುತ್ತಾರೆ ಶಪರಿಯಾ ಸಲಹೆ ನೀಡಿದ್ದಾರೆ.

Vastu Tips

ಗೋಡೆಯ ಮೇಲೆ ಇರಿಸಬಹುದೇ?

ಆಧುನಿಕ ಮನೆಗಳಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಕೆಲವರು ದೇವರ ಮಂಟಪವನ್ನು ಗೋಡೆಯ ಮೇಲೆ ನೇತು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಮಾಡುವುದರಿಂದ ಯಾವುದೇ ಋಣಾತ್ಮಕ ಪರಿಣಾಮ ಬೀರುವುದಿಲ್ಲ. ಆದರೂ ಗೋಡೆಯಲ್ಲಿ ಸರಿಯಾದ ದಿಕ್ಕನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಧರಿಸುವುದು ಮುಖ್ಯವಾಗಿದೆ.

ಮನೆಯ ಗೋಡೆಯ ಮೇಲೆ ದೇವರ ಮಂಟಪವನ್ನು ಪೂರ್ವ ಗೋಡೆಯ ಮೇಲೆ ಅಥವಾ ಈಶಾನ್ಯ ಮೂಲೆಯಲ್ಲಿ ನೇತುಹಾಕಬಹುದು. ದೇವರ ಮಂಟಪವನ್ನು ಗೋಡೆಯ ಮೇಲೆ ತೂಗು ಹಾಕಿ ಪೂಜೆ ಮಾಡುವಾಗ ನಿಮ್ಮ ಮುಖವು ಪೂರ್ವ ದಿಕ್ಕಿಗೆ ಇರುತ್ತದೆ. ಪೂರ್ವ ದಿಕ್ಕು ಸೂರ್ಯ ದೇವರು ಮತ್ತು ಭಗವಾನ್ ಇಂದ್ರ ದೇವರಿಗೆ ಸಂಬಂಧಿಸಿದೆ.

Vastu Tips: ಫ್ರಿಡ್ಜ್‌ ಮೇಲೆ ಈ ವಸ್ತುಗಳನ್ನು ಇಟ್ಟರೆ ಲಾಸ್ ಲಾಸ್ ಲಾಸ್!

ಪೂರ್ವಕ್ಕೆ ಮುಖ ಮಾಡಿ ದೇವರನ್ನು ಪ್ರಾರ್ಥಿಸುವುದರಿಂದ ಅದೃಷ್ಟ ಮತ್ತು ಅಭಿವೃದ್ಧಿ ಉಂಟಾಗುತ್ತದೆ.
ಅಲ್ಲದೇ ದೇವರ ಮಂಟಪವನ್ನು ಪಶ್ಚಿಮ ಗೋಡೆಯ ಮೇಲೂ ನೇತು ಹಾಕಬಹುದು. ಇದರಿಂದ ಪ್ರಾರ್ಥನೆ ಮಾಡುವಾಗ ನಿಮ್ಮ ಮುಖವು ಪಶ್ಚಿಮಕ್ಕೆ ಇರುತ್ತದೆ. ಆದರೆ ದೇವರ ಮಂಟಪವನ್ನು ಇಡಲು ದಕ್ಷಿಣ ದಿಕ್ಕನ್ನು ತಪ್ಪಿಸಿ ಎನ್ನುತ್ತಾರೆ ಶೀತಲ್ ಶಪಾರಿಯಾ.