Friday, 15th November 2024

Star Fashion: ಸ್ಟಾರ್‌ ಸ್ಕರ್ಟ್ ಫ್ಯಾಷನ್‌ನಲ್ಲಿ ನಟಿ ಸಾನ್ಯಾ ಅಯ್ಯರ್ ಗ್ಲಾಮರಸ್‌ ಲುಕ್‌!

Star Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಟಾರ್‌ ಸ್ಕರ್ಟ್ ಫ್ಯಾಷನ್‌ನಲ್ಲಿ ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಅಯ್ಯರ್‌ (Star Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಹೌದು, ಮಿನುಗುವ ಸ್ಟಾರ್ಸ್ ಹೊಂದಿರುವ ಮಿನಿ ಸ್ಕರ್ಟ್, ಬ್ರಾಲೆಟ್‌ ಜತೆಗೆ ಧರಿಸಿರುವ ಕ್ರಾಪ್‌ ಕೋಟ್‌ನಲ್ಲಿ ಸಖತ್‌ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಾನ್ಯಾ, ನೋಡಲು ಥೇಟ್‌ ಬಾಲಿವುಡ್‌ ಹೀರೋಯಿನ್‌ನಂತೆ ಮಿಂಚಿದ್ದಾರೆ.

ಚಿತ್ರಗಳು: ಸಾನ್ಯಾ ಅಯ್ಯರ್‌, ಸ್ಯಾಂಡಲ್‌ವುಡ್‌ ನಟಿ

ಫ್ಯಾಷನ್‌ ಗರ್ಲ್‌ ಸಾನ್ಯಾ

ಅಂದಹಾಗೆ, ಎಲ್ಲರಿಗೂ ಗೊತ್ತಿರುವಂತೆ, ಸ್ಯಾಂಡಲ್‌ವುಡ್‌ ನಟಿ ಸಾನ್ಯಾ ಬಾಲನಟಿ. ಧಾರಾವಾಹಿಗಳ ಮೂಲಕ ನಟನೆಗೆ ಕಾಲಿಟ್ಟು, ನಂತರ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಮೂಲಕ ಮತ್ತಷ್ಟು ಜನಪ್ರಿಯರಾದರು. ಸಾಕಷ್ಟು ಫ್ಯಾಷನ್‌ ವೀಕ್‌ಗಳಲ್ಲೂ ರ‍್ಯಾಂಪ್‌ ವಾಕ್‌ ಮಾಡಿ ಮಾಡೆಲಿಂಗ್‌ಗೂ ಸೈ ಎನಿಸಿಕೊಂಡರು. ಇತ್ತೀಚೆಗೆ ನಟ ಸಮರ್‌ಜೀತ್‌ ಜತೆ ಸಿನಿಮಾವೊಂದರಲ್ಲೂ ನಾಯಕಿಯಾಗಿ ಕಾಣಿಸಿಕೊಂಡರು.

ಡಿಸೈನರ್‌ ಲಕ್ಷ್ಮಿ ಕೃಷ್ಣ ಡಿಸೈನರ್‌ವೇರ್‌ನಲ್ಲಿ ಸಾನ್ಯಾ

ಸಾನ್ಯಾ ಧರಿಸಿರುವ ಈ ಡಿಸೈನರ್‌ವೇರನ್ನು ಸೆಲೆಬ್ರೆಟಿ ಡಿಸೈನರ್‌ ಲಕ್ಷ್ಮಿ ಕೃಷ್ಣ ಅವರು ವಿನ್ಯಾಸ ಮಾಡಿದ್ದು, ಕಾರ್ಪೋರೇಟ್‌ ಲುಕ್‌ಗೆ ಗ್ಲಾಮರಸ್‌ ಟಚ್‌ ನೀಡಿದ್ದಾರೆ. ಸಿಂಪಲ್‌ ಡೀಪ್‌ ಬ್ರಾಲೆಟ್‌ನೊಂದಿಗೆ ಕ್ರಾಪ್‌ ಕೋಟ್‌, ಸ್ಟಾರ್ಸ್ ಮಿನಿ ಸ್ಕರ್ಟ್ ಮ್ಯಾಚ್‌ ಮಾಡಿದ್ದಾರೆ. ಇವೆಲ್ಲದರ ಕಾಂಬಿನೇಷನ್‌ನಲ್ಲಿ ಸಾನ್ಯಾ ಜೆನ್‌ ಜಿ ಫ್ಯಾಷನ್‌ ಸ್ಟೇಟ್‌ಮೆಂಟ್‌ನಲ್ಲಿ, ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಸಾನ್ಯಾ ಗ್ಲಾಮರಸ್‌ ಲುಕ್‌

ಸಾನ್ಯಾ ಅಯ್ಯರ್‌ ಟ್ರೆಡಿಷನಲ್‌ ಹಾಗೂ ವೆಸ್ಟರ್ನ್‌ ವೇರ್‌ ಸೇರಿದಂತೆ ಎರಡೂ ಬಗೆಯ ಫ್ಯಾಷನ್‌ವೇರ್‌ಗಳಲ್ಲೂ ಅಂದವಾಗಿ ಕಾಣಿಸುತ್ತಾರೆ. ಅದರಲ್ಲೂ ವೆಸ್ಟರ್ನ್‌ ಔಟ್‌ಫಿಟ್ಸ್‌ನಲ್ಲಂತೂ ಕೊಂಚ ಗ್ಲಾಮರಸ್‌ ಆಗಿಯೇ ಕಾಣಿಸುತ್ತಾರೆ. ಇನ್ನು ಅವರ ಈ ಚೀಕ್‌ ಲುಕ್‌ಗೆ ಹೈ ಪೋನಿಟೇಲ್‌ ಹೇರ್‌ಸ್ಟೈಲ್‌, ಕನ್ನಡಕ ಹಾಗೂ ಬ್ಲ್ಯಾಕ್‌ ಫ್ಯಾಬ್ರಿಕ್‌ ಚೋಕರ್‌ ಸಾಥ್‌ ನೀಡಿವೆ. ಒಟ್ಟಾರೆ, ಅವರು ಈ ವಿಭಿನ್ನ ಲುಕ್‌ನಲ್ಲಿ ಸಖತ್‌ ಆಗಿ ಕಾಣಿಸುತ್ತಿದ್ದಾರೆ ಎನ್ನುತ್ತಾರೆ ಲಕ್ಷ್ಮಿ ಕೃಷ್ಣ.

ಈ ಸುದ್ದಿಯನ್ನೂ ಓದಿ | Winter Scarf Fashion Ideas: ಹೀಗಿರಲಿ ಚಳಿಗಾಲದ ನಿಮ್ಮ ಸ್ಕಾರ್ಫ್‌ ಸ್ಟೈಲಿಂಗ್‌!

ಸಾನ್ಯಾ ಫ್ಯಾಷನ್‌ ಟಾಕ್‌

ತಮ್ಮ ಈ ಲುಕ್‌ ಬಗ್ಗೆ ವಿಶ್ವವಾಣಿ ಡಿಜಿಟಲ್‌ ನ್ಯೂಸ್‌ನೊಂದಿಗೆ ಮಾತನಾಡಿದ ನಟಿ ಸಾನ್ಯಾ, ಇದೊಂದು ಪ್ರಯೋಗಾತ್ಮಕ ಲುಕ್‌! ಇದಕ್ಕೂ ಮುನ್ನ, ಡಿಸೈನರ್‌ ಲಕ್ಷ್ಮಿ ಕೃಷ್ಣ ಹಾಗೂ ನಾನು ಸಾಕಷ್ಟು ಚರ್ಚಿಸಿದ್ದೆವು. ಸಾಕಷ್ಟು ಲುಕ್‌ಗಳನ್ನು ಟ್ರೈ ಮಾಡಿದ್ದೆವು. ಆದರೆ, ಯಾವುದೂ ಫೈನಲ್‌ ಮಾಡಿರಲಿಲ್ಲ! ಅವರು ಡಿಸೈನ್‌ ಮಾಡಿದ್ದ, ಸ್ಟಾರ್‌ ಸ್ಕರ್ಟ್ ನನಗಿಷ್ಟವಾಯಿತು. ಇದರೊಂದಿಗೆ ಯೂನಿಕ್‌ ಕಾರ್ಪೋರೇಟ್‌ ಚೀಕ್‌ ಲುಕ್‌ ಕಾನ್ಸೆಪ್ಟ್‌ಗೆ ಸೈ ಎನ್ನಲಾಯಿತು. ಒಟ್ಟಾರೆ, ಅಂದುಕೊಂಡಿದ್ದಕ್ಕಿಂತ ಅತ್ಯಾಕರ್ಷಕವಾಗಿ ನ್ಯೂ ಲುಕ್‌ ಸಿಕ್ಕಿತು ಎಂದು ಹಂಚಿಕೊಂಡಿದ್ದಾರೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)