Saturday, 16th November 2024

NIA Raid: ಕರ್ನಾಟಕ ಸೇರಿ 9 ರಾಜ್ಯಗಳಲ್ಲಿ NIA ರೇಡ್‌- ಮಹತ್ವದ ದಾಖಲೆ ವಶಕ್ಕೆ

NIA Raid

ನವದೆಹಲಿ: ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಬೆಳ್ಳಂ ಬೆಳಗ್ಗೆ ರಾಷ್ಟ್ರೀಯ ತನಿಖಾ ದಳ(NIA Raid) ಅಧಿಕಾರಿಗಳು ದಾಳಿ ಭರ್ಜರಿ ರೇಡ್‌ ನಡೆಸಿದೆ. ಅಲ್ ಖೈದಾ ಉಗ್ರ ಸಂಘಟನೆಯ ಜೊತೆಗೆ ನಂಟು ಆರೋಪ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಈ ಕುರಿತು ಸ್ವತಃ ಎನ್‌ಐಎ ಇಂಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಭಾರತದಲ್ಲಿ ನೆಲೆಸಿರುವ ಬಾಂಗ್ಲಾ ಪ್ರಜೆಗಳ ಜೊತೆಗೆ ಅಲ್ ಖೈದಾ ನಂಟು ಹಿನ್ನಲೆಯಲ್ಲಿ ಬಾಂಗ್ಲಾ ಪ್ರಜೆಗಳು ನೆಲೆಸಿರುವ ಪ್ರದೇಶಗಳ ಮೇಲೆ ಎನ್‌ಐಎ ಏಕಕಾಲಕ್ಕೆ ದಾಳಿ ನಡೆಸಿದೆ. ಅಲ್ ಖೈದಾ ಉಗ್ರ ಸಂಘಟನೆ ಕುರಿತು ಪ್ರಚಾರ, ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಧನಸಹಾಯ ಮಾಡುವ ವ್ಯಕ್ತಿಗಳ ವಿರುದ್ದ ಜಮ್ಮು-ಕಾಶ್ಮೀರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ಆಸ್ಸಾಂನ 9 ಕಡೆ ದಾಳಿ ಮಾಡಲಾಗಿದೆ.

ಯಾವ್ಯಾವ ರಾಜ್ಯಗಳಲ್ಲಿ ರೇಡ್‌?

ಕರ್ನಾಟಕ, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳ, ಬಿಹಾರ, ತ್ರಿಪುರ, ಅಸ್ಸಾಂ ರಾಜ್ಯ ಸೇರಿದಂತೆ 9 ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಳೆ ಹಾಕಿದ್ದಾರೆ. ಎನ್​ಐಎ ಅಧಿಕಾರಿಗಳು ಕಾರ್ಯಾಚಾರಣೆ ವೇಳೆ ಬ್ಯಾಂಕಿಂಗ್ ವಹಿವಾಟುಗಳು, ಮೊಬೈಲ್ ಫೋನ್, ಡಿಜಿಟಲ್ ಸಾಧನಗಳು ಮತ್ತು ಭಯೋತ್ಪಾದಕ ನಿಧಿ ಚಟುವಟಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡರು. 2023ರಲ್ಲಿ ಪ್ರಕರಣದ ತನಿಖೆ ನಡೆಸಿ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿತ್ತು. ಈ ಪ್ರಕರಣದ ಸಂಬಂಧ ಮುಂದುವರೆದ ತನಿಖೆಯ ಭಾಗವಾಗಿ ಎನ್‌ಐಎ ದಾಳಿ ನಡೆಸಿದೆ ಎನ್ನಲಾಗಿದೆ.

ಕಳೆದ ವರ್ಷವೇ ಚಾರ್ಜ್‌ಶೀಟ್‌ ಸಲ್ಲಿಕೆ

2023ರ ನವೆಂಬರ್‌ನಲ್ಲಿ, ಮೊಹಮ್ಮದ್ ಎಂದು ಗುರುತಿಸಲಾದ ನಾಲ್ವರು ಬಾಂಗ್ಲಾದೇಶಿ ಪ್ರಜೆ ಸೇರಿದಂತೆ ಐವರು ಆರೋಪಿಗಳ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ ಅಲಿಯಾಸ್​ ಮುನ್ನಾ ಖಾನ್, ಅಜರುಲ್ ಇಸ್ಲಾಂ ಅಲಿಯಾಸ್​ ಜಹಾಂಗೀರ್ ಅಥವಾ ಆಕಾಶ್ ಖಾನ್, ಅಬ್ದುಲ್ ಲತೀಫ್ ಅಲಿಯಾಸ್​ ಮೊಮಿನುಲ್ ಅನ್ಸಾರಿ ಮತ್ತು ಐದನೇ ಆರೋಪಿ ಫರೀದ್ ಭಾರತೀಯ ಪ್ರಜೆಯಾನ್ನು ಬಂಧಿಸಲಾಗಿತ್ತು ಎಂದು ಎನ್​ಐಎ ತಿಳಿಸಿದೆ. ಐವರು ಆರೋಪಿಗಳು ತಮ್ಮ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂಬುದು ಅವರ ಪೂರ್ವಾಪರದ ಬಗ್ಗೆ ಎನ್‌ಐಎ ತನಿಖೆ ನಡೆಸಿದಾಗ ತಿಳಿದು ಬಂದಿತ್ತು.

ಈ ಸುದ್ದಿಯನ್ನೂ ಓದಿ: Harassment: ರಾಮೇಶ್ವರಂ ಕೆಫೆ ಕ್ಯೂನಲ್ಲಿ ಲೈಂಗಿಕ ಕಿರುಕುಳ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯ ಅಳಲು