ಬೈರುತ್: ಪೇಜರ್ ದಾಳಿ(Pager, walkie-talkie attacks)ಗೆ ಸ್ವತಃ ತಾವೇ ಆದೇಶ ನೀಡಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಒಪ್ಪಿಕೊಂಡಿರುವ ಬೆನ್ನಲ್ಲೇ ಲೆಬನಾನ್ ಮೂಲದ ಭಯೋತ್ಪಾದಕ ಗುಂಪು ಹೆಜ್ಬೊಲ್ಲಾ ಇಸ್ರೇಲ್ ಮೇಲೆ ಹೊಸ ದಾಳಿ(Hezbollah Rocket Attack)ಯನ್ನು ನಡೆಸಿದೆ. ಹೈಫಾ ನಗರವನ್ನು ಗುರಿಯಾಗಿಟ್ಟುಕೊಂಡು 90ಕ್ಕೂ ಹೆಚ್ಚು ರಾಕೆಟ್‌ಗಳು ಅಪ್ಪಳಿಸಿದ್ದು, ಅನೇಕ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ಪ್ರದೇಶದಲ್ಲಿನ ಕಟ್ಟಡಗಳು ಮತ್ತು ವಾಹನಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ.
ವರದಿಯ ಪ್ರಕಾರ, ದಾಳಿಯಲ್ಲಿ ಒಂದು ಮಗು ಸೇರಿದಂತೆ ಕನಿಷ್ಠ ನಾಲ್ಕು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನ ರಕ್ಷಣಾ ವ್ಯವಸ್ಥೆ ಐರನ್ ಡೋಮ್ ಸಹಾಯದಿಂದ ಹೆಜ್ಬೊಲ್ಲಾ ರಾಕೆಟ್‌ಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಇನ್ನು ಇದಕ್ಕೆ ಪ್ರತಿದಾಳಿ ಕೈಗೆತ್ತಿಕೊಂಡ ಇಸ್ರೇಲ್ ರಕ್ಷಣಾ ಪಡೆಗಳು (IDF) ಗೆಲಿಲೀ ಪ್ರದೇಶದಲ್ಲಿ ರಾಕೆಟ್ ದಾಳಿ ನಡೆಸಿದೆ. ಹಲವಾರು ರಾಕೆಟ್‌ಗಳು ಕಾರ್ಮಿಯೆಲ್ ಪ್ರದೇಶ ಮತ್ತು ಹತ್ತಿರದ ಪಟ್ಟಣಗಳನ್ನು ಧ್ವಂಸಗೊಳಿಸಿವೆ.
57,000 Acres of Israeli Forests Destroyed From Hezbollah Rockets
— Bhambrisahil94🇮🇳 (@Bhambrisahil941) November 12, 2024
Hezbollah’s sustained attacks have devastated northern Israel’s environment. Upper Galilee & Golan Heights suffered the most losing 43,500 acres. Wildlife habitats & infrastructure severely impacted. pic.twitter.com/H2VBmfwehp
ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಎರಡು ತಿಂಗಳ ಹಿಂದೆ ನಡೆದಿದ್ದ ಭೀಕರ ಪೇಜರ್ ಮತ್ತು ವಾಕಿಟಾಕಿಗಳ ಸ್ಫೋಟ ತಮ್ಮ ಆದೇಶದ ಮೇರೆಗೆ ನಡೆದಿರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಒಪ್ಪಿಕೊಂಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸುಮಾರು 40 ಜನರನ್ನು ಬಲಿ ಪಡೆದ ಮತ್ತು 3,000 ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರನ್ನು ಗಾಯಗೊಳಿಸಿದ ಪೇಜರ್ ದಾಳಿಗೆ ತಮ್ಮ ಆದೇಶ ಇತ್ತು ನೆತಾನ್ಯಾಹು ಸ್ಪಷ್ಟಪಡಿಸಿದೆ.
ಇಸ್ರೇಲ್ ಸರ್ಕಾರದ ವಕ್ತಾರ ಓಮರ್ ದೋಸ್ತ್ರಿ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಲೆಬನಾನ್ ಪೇಜರ್ ದಾಳಿಗೆ ನೆತಾನ್ಯಾಹು ಹಸಿರು ನಿಶಾನೆ ತೋರಿದ್ದರು ಎಂದು ಹೇಳಿದ್ದಾರೆ. ಈ ದಾಳಿ ಬೆನ್ನಲ್ಲೇ ಇದು ಇಸ್ರೇಲ್ ಕೃತ್ಯ ಎಂದಯ ಇರಾನ್ ಆರೋಪಿಸಿತ್ತು. ಆದರೆ ಆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಸ್ರೇಲ್‌ನಿಂದ ಬಂದಿರಲಿಲ್ಲ. ಇದೀಗ ಸ್ವತಃ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಸೆಪ್ಟೆಂಬರ್ 17 ಮತ್ತು 18 ರಂದು ಹೆಜ್ಬೊಲ್ಲಾಗಳ ಭದ್ರಕೋಟೆಗಳಲ್ಲಿ ಸಾವಿರಾರು ಪೇಜರ್‌ಗಳು ಏಕ ಕಾಲದಲ್ಲಿ ಸ್ಫೋಟಗೊಂಡಿದ್ದವು. ಇರಾನ್ ಮತ್ತು ಹಿಜ್ಬುಲ್ಲಾ ಇಸ್ರೇಲ್ ಮೇಲೆ ಆರೋಪಿಸಿದರು. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 3000ಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗಳಾಗಿದ್ದವು. ಗಾಯಗೊಂಡ ಕೆಲವು ಹಿಜ್ಬುಲ್ಲಾ ಸದಸ್ಯರು ತಮ್ಮ ಬೆರಳುಗಳನ್ನು ಕಳೆದುಕೊಂಡಿದ್ದರೆ, ಕೆಲವರು ದೃಷ್ಟಿ ಕಳೆದುಕೊಂಡಿದ್ದರು ಎಂದು ವರದಿಯಾಗಿತ್ತು.
ಈ ಸುದ್ದಿಯನ್ನೂ ಓದಿ: Israel Airstrike: ಇಸ್ರೇಲ್ ಸೇನೆಯಿಂದ ಮತ್ತೆ ಏರ್‌ಸ್ಟ್ರೈಕ್; ಲೆಬನಾನ್‌ನಲ್ಲಿ 40 ಜನರ ಮಾರಣಹೋಮ!