ಏಳನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಟಾಸ್ಕ್ನ ಕಾವು ಏರುತ್ತಿದೆ. ಈವರೆಗೆ ಗುಂಪಿನಿಂದ ಕೂಡಿದ್ದ ಸ್ಪರ್ಧಿಗಳು ಈಗ ದೂರದೂರ ಆಗುತ್ತಿದ್ದು, ಇಂಡಿವ್ಯೂಜುವಲ್ ಗೇಮ್ ಆಡೋಕೆ ಶುರುಮಾಡಿಕೊಂಡಿದ್ದಾರೆ. ಇದರ ನಡುವೆ ದೊಡ್ಮನೆಯಲ್ಲಿ ಜೋಡಿ ಟಾಸ್ಕ್ ಭರ್ಜರಿ ಸೌಂಡ್ ಮಾಡುತ್ತಿದೆ. ಜೋಡಿ ಟಾಸ್ಕ್ ಎಂದರೆ ಇಬ್ಬರು ಸ್ಪರ್ಧಿಗಳು ಸದಾ ಅಂಟಿಕೊಂಡೇ ಇರುವ ಟಾಸ್ಕ್ ಇದಾಗಿದೆ.
ಈ ವಾರ ಜೋಡಿ ಜೋಡಿಯಾಗಿಯೇ ಎಲ್ಲ ಟಾಸ್ಕ್ ಆಡಬೇಕಿದೆ. ಇದರಲ್ಲಿ ಯಾರು ಗೆಲ್ಲುತ್ತಾರೊ ಎಂಬ ಕುತೂಹಲವಿದೆ. ವಿಶೇಷ ಎಂದರೆ ಕಳೆದ ಎರಡು ವಾರಗಳಿಂದ ಟಾಸ್ಕ್ನಲ್ಲಿ ಮಿಂಚುತ್ತಿರುವ ಹನುಮಂತ ಅವರಿಗೆ ಗೌತಮಿ ಜಾಧವ್ ಜೋಡಿ ಆಗಿದ್ದಾರೆ. ಇವರ ಆಟ ಮತ್ತು ಮಾತು ಎರಡೂ ನೋಡುಗರಿಗೆ ಸಖತ್ ಮಜಾ ಕೊಡುವಂತೆ ಇವೆ.
ವಿಶೇಷ ಎಂದರೆ ಗೌತಮಿ ಹಾಗೂ ಹನುಮಂತ ಲುಕ್ಗೆ ಸಖತ್ ಫಿದಾ ಆಗಿದ್ದಾರೆ ವೀಕ್ಷಕರು. ಹನುಮಂತ್ ಹಾಗೂ ಗೌತಮಿ ಇಬ್ಬರೂ ಲುಂಗಿ ಉಟ್ಟುಕೊಂಡು ಸಖತ್ ಖದರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಗೌತಮಿ ಅವರು ಹನುಮಂತನ ಶರ್ಟ್ ಲುಂಗಿಯುಟ್ಟಿದ್ದಾರೆ. ಥೇಟ್ ಹನುಮಂತನ ರೀತಿ ಗೆಟ್ ಅಪ್ ಧರಿಸಿದ್ದಾರೆ.
ಲುಂಗಿ ಶರ್ಟ್ ಜೊತೆಗೆ ಗೌತಮಿ ಅವರ ಹಾವಭಾವ ಮಾತು ಕಥೆ ಎಲ್ಲವು ಹನುಮಂತನ ಹಾಗೆ ಇದೆ. ಉಳಿದ ಸ್ಪರ್ಧಿಗಳು ಇದರಲ್ಲಿ ಹನುಮ ಯಾರು ಅಂತನೇ ಗೊತ್ತಾಗ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಏನು ಶಿಶೀರ್ ಕಾಕಾ? ಜಗ್ಗ ನಡೆತೈತಿ, ಹೈ ಹುಲಿ ಅಂತ ಅವಾಜ್ ಹಾಕಿದ್ದಾರೆ. ಗೌತಮಿ ಉತ್ತರ ಕರ್ನಾಟಕ ಭಾಷೆಯಲ್ಲೇ ಡೈಲಾಗ್ ಹೊಡೆದಿದ್ದಾರೆ. ಇದನ್ನು ಕಂಡ ವೀಕ್ಷಕರು ಈ ವಾರದ ಕಿಚ್ಚನ ಚಪ್ಪಾಳೆ ಗೌತಮಿ ಅವರಿಗೆ ಎಂದು ಹೇಳುತ್ತಿದ್ದಾರೆ.
ಇನ್ನು ಈ ಜೋಡಿ ಟಾಸ್ಕ್ಗೆ ಜೋಡಿಯನ್ನು ಸೆಲೆಕ್ಟ್ ಮಾಡಿದ್ದು ಸ್ವತಃ ಬಿಗ್ ಬಾಸ್. ಬಿಗ್ ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆ ತಾವೇ ಜೋಡಿಗಳನ್ನು ಸೆಲೆಕ್ಟ್ ಮಾಡಿದ್ದಾರೆ. ಹನುಮಂತ-ಗೌತಮಿ ಜಾಧವ್, ಉಗ್ರಂ ಮಂಜು-ಭವ್ಯಾ ಗೌಡ, ಶಿಶಿರ್-ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್-ಐಶ್ವರ್ಯಾ ಸಿಂಧೋಗಿ, ಅನುಷಾ ರೈ-ಗೋಲ್ಡ್ ಸುರೇಶ್ ಹಾಗೂ ಧನರಾಜ್-ಮೋಕ್ಷಿತಾ ಪೈ ಅವರನ್ನು ಜೋಡಿಗಳನ್ನಾಗಿ ಮಾಡಿ ಈ ವಾರದ ಟಾಸ್ಕ್ ನೀಡಲಾಗುತ್ತಿದೆ. ತ್ರಿವಿಕ್ರಮ್ ಮನೆಯ ಕ್ಯಾಪ್ಟನ್ ಆಗಿದ್ದಾರೆ.
BBK 11: ಬಿಗ್ ಬಾಸ್ ಮನೆಯಲ್ಲಿ ತಾಳ್ಮೆ ಕಳೆದುಕೊಂಡ ಗೋಲ್ಡ್ ಸುರೇಶ್: ಉಳಿದ ಸ್ಪರ್ಧಿಗಳು ಗಪ್-ಚುಪ್