ಧರ್ಮಾ ಕೀರ್ತಿರಾಜ್ (Dharma KeerthiRaj) ಕಳೆದ ಎರಡು-ಮೂರು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ಬೇಸರದಲ್ಲಿದ್ದಾರೆ. ಆಕ್ಟಿವ್ ಆಗಿಲ್ಲ, ಎಲ್ಲೋ ಮೂಲೆಯಲ್ಲಿ ಇರ್ತಾರೆ, ನಾಲಾಯಕ್, ಚಪಾತಿ ಈ ರೀತಿಯ ಪದ ಕೇಳಿ ಕೇಳಿ ರೋಸಿ ಹೋಗಿದ್ದಾರೆ. ಈವರೆಗೆ ಧರ್ಮಾ ಮನೆಯೊಳಗೆ ಖಡಕ್ ಆಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಆದರೆ, ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಎಲ್ಲ ಜವಾಬ್ದಾರಿ, ಟಾಸ್ಕ್ ನಿರ್ವಸಿದ್ದಾರೆ.
ಆದರೆ, ನಾಮಿನೇಷನ್ ಅಂತ ಬಂದಾಗ ಮನೆಯವರು ಧರ್ಮಾ ಅವರ ಹೆಸರು ತೆಗೆದುಕೊಂಡು ಅದೇ ಆಕ್ಟಿವ್ ಇಲ್ಲ ಎಂಬ ಕಾರಣ ನೀಡುತ್ತಿದ್ದಾರೆ. ಈ ವಾರ ಕೂಡ ನಾಮಿನೇಷನ್ ಬಂದಾಗ ಹೆಚ್ಚಿನವರು ಧರ್ಮಾ ಹೆಸರು ತೆಗೆದುಕೊಂಡಿದ್ದಾರೆ. ಜೊತೆಗೆ ಮತ್ತದೆ ಆಕ್ಟಿವ್ ಆಗಿಲ್ಲ ಎಂಬ ಕಾರಣ ಕೊಟ್ಟಿದ್ದಾರೆ. ಇದರಿಂದ ಧರ್ಮಾ ರೊಚ್ಚಿಗೆದ್ದಿದ್ದಾರೆ. ತನ್ನ ಸ್ನೇಹಿತೆ ಅನುಷಾ ರೈ ವಿರುದ್ಧ ಕೂಡ ಕೋಪ ತೋರ್ಪಡಿಸಿದ್ದಾರೆ.
ಬಿಗ್ ಬಾಸ್ ನೀಡಿದ ಟಾಸ್ಕ್ನಂತೆ ಮನೆಯಲ್ಲಿ ಡೈರೆಕ್ಟ್ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಐಶ್ವರ್ಯ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಅವರನ್ನು ನಾಮಿನೇಟ್ ಮಾಡುತ್ತಾರೆ.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನುಷಾ, ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಎಂದು ಕೇಳುತ್ತಾರೆ. ನಂತರ ಧರ್ಮ ವಿಚಾರಕ್ಕೆ ಬಂದ ಅನುಷಾ, ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ? ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಎಷ್ಟು ಇನ್ವಾಲ್ ಆಗಿದ್ದೀರಾ? ಎಂದು ಕೇಳಿದ್ದಾರೆ.
ಅನುಷಾ ಅವರ ಈ ಮಾತಿಗೆ ಸಿಟ್ಟಾದ ಧರ್ಮಾ, ನಾನೂ ಒಪ್ಪಿಕೊಳ್ತಿದ್ದೀನಿ. ಎಲ್ಲರೂ ಕ್ಯಾಕರಿಸಿ ಉಗಿದ್ರಲ್ಲ. ನಾಲಾಯಕ್, ಬೇ*ರ್ಸಿ ಅಂತಲೇ ಉಗಿದ್ರಲ್ಲ ಎಂದು ಹೇಳಿದ್ದಾರೆ. ಧರ್ಮಾ- ಅನುಷಾ ನಡುವೆ ವಾದ ವಿವಾದ ಜೋರಾಗಿದೆ. ಈ ಹೇಳಿಕೆ ಕಂಡು ಮನೆಯವರೆಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ.
ಬೇಸರದಲ್ಲಿ ಧರ್ಮಾ:
ಮನೆಮಂದಿ ನಾಲಾಯಕ್ ಎಂಬ ಪಟ್ಟ ಕೊಟ್ಟಿದ್ದಕ್ಕೆ ಧರ್ಮಾ ತುಂಬಾ ಬೇಸರಗೊಂಡಿದ್ದಾರೆ. ಅದೇನೋ ಮಹಾನ್ ತಪ್ಪು ನಾನು ಮಾಡಿಲ್ಲ. ಅದೇ ಒಂದು ರೀಸನ್ ಇಟ್ಕೊಂಡು ಪ್ರತಿ ಬಾರಿ ಹೇಳಿದ್ರೆ ನನಗೂ ಬೇಸರವಿದೆ ಎಂದು ಧರ್ಮಾ ಹೇಳಿದ್ದಾರೆ. ಎಲ್ಲರೂ ಅವರ ಫೀಲ್ಡ್ ನಲ್ಲಿ ಕಷ್ಟಪಟ್ಟು ಮುಂದೆ ಬಂದಿರ್ತಾರೆ. ಆ ವರ್ಡ್ ನನಗೆ ತುಂಬಾ ನಾಟಿಗೆ, ಮನಸ್ಸಿಗೆ ಚುಚ್ಚಿದೆ ಎಂದು ಹೇಳಿ ಕಣ್ಣೀರು ಹಾಕಿದ್ದರು. ಇಲ್ಲಿಗೆ ಬಂದು ಈ ರೀತಿಯೆಲ್ಲ (ನಾಲಾಯಕ್) ಹೇಳಿಸಿಕೊಳ್ಳಬಾರದು. ಇನ್ಮೇಲೆ ಬದಲಾಗಬೇಕು. ಇಲ್ಲವಾದರೆ ಈ ಭಾನುವಾರ ಹೊರಗೆ ಹೋಗಿಬಿಡಬೇಕು ಎಂದು ಹೇಳಿದ್ದಾರೆ.
BBK 11: ಹನುಮಂತನ ಲುಂಗಿಯುಟ್ಟು ಮಿಂಚಿದ ಗೌತಮಿ ಜಾಧವ್: ಕಿಚ್ಚನ ಚಪ್ಪಾಳೆ ಖಚಿತ