Friday, 22nd November 2024

Business Idea: ತಿಂಗಳಿಗೆ ಲಕ್ಷ ಲಕ್ಷ ಆದಾಯ ತಂದುಕೊಡುತ್ತದೆ ಈ ವ್ಯವಹಾರ!

Business Idea

ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ (monthly lakh income) ಕೊಡುವ ವಹಿವಾಟಿಗೆ (Business Idea) ಕೈ ಹಾಕಬೇಕೆಂದಿದ್ದರೆ ಈ ಒಂದು ವ್ಯವಹಾರದ ಬಗ್ಗೆ ಯೋಚಿಸಬಹುದು. ಒಂದು ಕಡೆ ಜಗತ್ತು ಕೃತಕ ಬುದ್ಧಿಮತ್ತೆಯ (artificial intelligence) ಕಡೆಗೆ ಸೆಳೆಯುತ್ತಿದ್ದರೆ ಇನ್ನೊಂದು ಕಡೆ ವರ್ಚುವಲ್ ರಿಯಾಲಿಟಿ (virtual reality) ಜನರನ್ನು ಸಂಮೋಹನಗೊಳಿಸುತ್ತಿದೆ.

ನಗರದ ಸದ್ದುಗದ್ದಲದ ನಡುವೆ ಕುರ್ಚಿಯಲ್ಲಿ ಕುಳಿತು ಕಾಶ್ಮೀರವನ್ನು ನೋಡಲು, ಅಲ್ಲಿ ನಲಿದಾಡಲು ಬಯಸುವವರಿಗೆ ವರ್ಚುವಲ್ ರಿಯಾಲಿಟಿ ಒಂದು ಅದ್ಬುತ ಅವಕಾಶವನ್ನು ಕೊಡುತ್ತದೆ. ಕುಳಿತಲ್ಲಿಯೇ ನೀವು ಕಾಶ್ಮೀರವನ್ನು ಸುತ್ತಾಡಿ ಬರಬಹುದು.

ಕೇವಲ 300 ರೂ.ನ ಟಿಕೇಟ್ ಪಡೆದು ಕುಳಿತರೆ ಸಂಪೂರ್ಣ ಕಾಶ್ಮೀರ ಸುತ್ತಾಡಿ ಬಂದಂತಹ ಅನುಭವ ಕೊಡುತ್ತದೆ.
ಕೇವಲ ಕಾಶ್ಮೀರವಲ್ಲ ನೆಚ್ಚಿನ ಪ್ರವಾಸಿ ತಾಣಗಳು, ತೀರ್ಥ ಯಾತ್ರೆ ಕ್ಷೇತ್ರಗಳಿಗೂ ಭೇಟಿ ನೀಡಬಹುದು. ಇಂತಹ ಒಂದು ಅದ್ಬುತ ಅನುಭವ ಪಡೆಯಲು ಯಾರು ತಾನೇ ನಿರಾಕರಿಸುತ್ತಾರೆ.

ಇದರಲ್ಲಿ ಸಿಗುವ ಅನುಭವ ಮತ್ತು ಖುಷಿ ಗ್ರಾಹಕರನ್ನು ಸೆಳೆಯುತ್ತದೆ ಮಾತ್ರವಲ್ಲ ಆದಾಯವನ್ನೂ ಹೆಚ್ಚಿಸುತ್ತದೆ.

ವಿಆರ್ ಕೆಫೆ ಬಗ್ಗೆ ತಿಳಿದಿದೆಯೇ?

ದೇಶದ ಕೆಲವು ಪ್ರಮುಖ ನಗರಗಳಲ್ಲಿರುವ ವಿಆರ್ ಕೆಫೆ ಬಗ್ಗೆ ಕೇಳಿರಬಹುದು ಅಥವಾ ನೋಡಿರಬಹುದು. ಒಂದು ವೇಳೆ ನೋಡಿಲ್ಲದಿದ್ದರೆ ಒಮ್ಮೆ ಇಲ್ಲಿಗೆ ಭೇಟಿ ನೀಡಿ ಇಲ್ಲಿನ ಅನುಭವ ಪಡೆಯಿರಿ.

ಕಾಶ್ಮೀರದಂತಹ ಚಳಿಯನ್ನು ಎಸಿ ಮತ್ತು ಮರುಭೂಮಿಯ ಶಾಖವನ್ನು ಹೀಟರ್ ಸಹಾಯದಿಂದ ಉತ್ಪಾದಿಸುವ ಈ ಸಂಪೂರ್ಣ ಸೆಟಪ್ ಗೆ ಹೆಚ್ಚೆಂದರೆ ಗರಿಷ್ಠ 15 ಲಕ್ಷ ರೂ. ಖರ್ಚಾಗಬಹುದು. ಭಾರತದ ಯಾವುದೇ ಸಣ್ಣ ನಗರಗಳಲ್ಲಿ ಇದನ್ನು ತೆರೆಯಬಹುದು. ಇದಕ್ಕೆ ಯಾವುದೇ ಪ್ರಮುಖ ಅಥವಾ ದೊಡ್ಡ ಸ್ಥಳದ ಅಗತ್ಯವಿಲ್ಲ. ಎಲ್ಲಿ ಆರಂಭಿಸಿದರೂ ಜನ ಸಾಲುಗಟ್ಟಿ ನಿಲ್ಲುತ್ತಾರೆ.

Business Idea

ದೊಡ್ಡ ನಗರದಲ್ಲಿದ್ದರೆ ಮುಖ್ಯ ಸ್ಥಳವನ್ನು ಆರಿಸಿಕೊಳ್ಳಿ. ವಿಆರ್ ಕೆಫೆಗಾಗಿ ಅತ್ಯುತ್ತಮ ಸಾಫ್ಟ್‌ವೇರ್, ಪೀಠೋಪಕರಣ, ಉಪಕರಣ, ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಇಂಟರ್ನೆಟ್‌ ಸಂಪರ್ಕವಿದ್ದರೆ ಸಾಕಷ್ಟು ಮಾಹಿತಿ ಇದರಲ್ಲಿ ಪಡೆಯಬಹುದು.

ಮೊದಲಿಗೆ ನೀವೇ ಇದರ ಅನುಭವ ಪಡೆಯಿರಿ. ಅದರ ಅನಂತರ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುವಾಗ ಅನೇಕ ಇತರ ವಿಆರ್ ಕೆಫೆಗಳನ್ನು ಅನುಭವಿಸಿ. ಯಾಕೆಂದರೆ ಪ್ರತಿಯೊಂದು ಕೆಫೆಯು ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. 10- 20 ವಿಆರ್ ಕೆಫೆ ವೀಕ್ಷಣೆಯ ಬಳಿಕ ನಿಮಗೆ ವ್ಯವಹಾರದ ಬಗ್ಗೆ ಸಂಪೂರ್ಣ ಅನುಭವ ಸಿಗಲು ಮತ್ತು ವ್ಯವಹಾರ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳುವುದು ಸುಲಭವಾಗುತ್ತದೆ.

Gold price decline: ಗಗನಕ್ಕೇರಿದ್ದ ಬಂಗಾರದ ದರದಲ್ಲಿ ಭಾರಿ ಇಳಿಕೆ, ಕಾರಣವೇನು?

ಭಾರತದಲ್ಲಿ ವಿಆರ್ ಕೆಫೆಯಲ್ಲಿ ವಿಧಿಸಲಾಗುವ ಶುಲ್ಕ 300 ರಿಂದ 500 ರೂ. ಒಬ್ಬರಿಗೆ 300 ರೂ. ಶುಲ್ಕ ವಿಧಿಸಿದರೆ ದಿನಕ್ಕೆ 50 ಜನರು ಬರುತ್ತಾರೆ. ಈ ಯೋಜನೆಯಲ್ಲಿ ದಿನಕ್ಕೆ 15,000 ರೂ. ಗಳಿಸಿದರೆ ತಿಂಗಳಿಗೆ 4,50,000 ರೂ. ಗಳಿಸಲು ಸಾಧ್ಯವಿದೆ. ಸಂಪೂರ್ಣ ಕೆಫೆಯ ಗರಿಷ್ಠ ವೆಚ್ಚವು ತಿಂಗಳಿಗೆ 2,00,000 ರೂ. ಗಿಂತ ಹೆಚ್ಚಾಗುವುದಿಲ್ಲ. ಅಂದರೆ ತಿಂಗಳ ನಿವ್ವಳ ಲಾಭ ಎರಡೂವರೆ ಲಕ್ಷ ರೂಪಾಯಿ!