Monday, 25th November 2024

BBK 11: ಬಿಗ್ ಬಾಸ್ ಮನೆಯಲ್ಲಿ ಮುರಿದುಬಿತ್ತು ಮತ್ತೊಂದು ಫ್ರೆಂಡ್​ಶಿಪ್: ದೂರವಾದ ಧರ್ಮಾ-ಅನುಷಾ

Dharma Anusha breakup

ಬಿಗ್ ಬಾಸ್ (Bigg Boss Kannada 11) ಮನೆಯಲ್ಲಿ ಸ್ನೇಹ-ಪ್ರೀತಿ ಹುಟ್ಟಿಕೊಳ್ಳುವುದು ಕಾಮನ್. ಆದರೆ, ಅದನ್ನು ಉಳಿಸಿಕೊಳ್ಳುವುದು ದೊಡ್ಡ ಕಷ್ಟ. ಟಾಸ್ಕ್ ಮಧ್ಯೆ ಜಗಳ ನಡೆದಾಗ ಅಥವಾ ನಾಮಿನೇಷನ್ ಎಂಬ ಪ್ರಕ್ರಿಯೆ ಬಂದಾಗ ಆ ಸ್ನೇಹಕ್ಕೆ- ಪ್ರೀತಿಗೆ ಕುತ್ತು ಬಂದಿರುವುದು ಈ ಹಿಂದೆ ಅನೇಕ ಬಾರಿ ನಾವು ಕಂಡಿದ್ದೇವೆ. ಅದರಂತೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲೂ ಇಬ್ಬರ ಬಹುಕಾಲದ ಫ್ರೆಂಡ್​ಶಿಪ್ ಕೊನೆಗೊಂಡಿದೆ. ಬಿಗ್ ಬಾಸ್ ಸೀಸನ್ 11 ಆರಂಭಕ್ಕೂ ಮುನ್ನವೇ ಕ್ಲೋಸ್ ಆಗಿದ್ದ ಧರ್ಮಾ ಕೀರ್ತಿರಾಜ್ ಹಾಗೂ ಅನುಷಾ ರೈ ನಡುವಣ ಸಂಬಂಧದಲ್ಲಿ ಈಗ ಬಿರುಕು ಮೂಡಿದೆ.

ಧರ್ಮಾ-ಅನುಷಾ ದೂರ ದೂರ:

ಧರ್ಮಾ ಕಳೆದ ಎರಡು-ಮೂರು ದಿನಗಳಿಂದ ಬಿಗ್ ಬಾಸ್ ಮನೆಯಲ್ಲಿ ಬೇಸರದಲ್ಲಿದ್ದಾರೆ. ಆಕ್ಟಿವ್ ಆಗಿಲ್ಲ, ಎಲ್ಲೋ ಮೂಲೆಯಲ್ಲಿ ಇರ್ತಾರೆ, ನಾಲಾಯಕ್, ಚಪಾತಿ ಈ ರೀತಿಯ ಪದ ಕೇಳಿ ಕೇಳಿ ರೋಸಿ ಹೋಗಿದ್ದಾರೆ. ಈ ವಾರ ಡೈರೆಕ್ಟ್ ನಾಮಿನೇಷನ್ ಎಂದು ಬಂದಾಗಿ ಧರ್ಮ-ಐಶ್ವರ್ಯ ಜೋಡಿ ಅತ್ತ ಗೋಲ್ಡ್ ಸುರೇಶ್ ಹಾಗೂ ಅನುಷಾ ಜೋಡಿಯ ಹೆಸರು ತೆಗೆದುಕೊಳ್ಳುತ್ತದೆ. ಇದಕ್ಕೆ ಧರ್ಮಾ ಅವರು ಅನುಷಾ ವಿಚಾರದಲ್ಲಿ ಕೆಲ ಕಾರಣ ನೀಡುತ್ತಾರೆ. ಇದು ಅನುಷಾ ಅವರನ್ನು ಕೆರಳಿಸಿದೆ.

ಧರ್ಮಾ ಅವರೇ ನೀವು ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಹೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ? ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಎಷ್ಟು ಇನ್ವಾಲ್ ಆಗಿದ್ದೀರಾ? ಎಂದು ಕೇಳಿದ್ದಾರೆ. ಅನುಷಾ ಅವರ ಈ ಮಾತಿಗೆ ಸಿಟ್ಟಾದ ಧರ್ಮಾ, ನಾನೂ ಒಪ್ಪಿಕೊಳ್ತಿದ್ದೀನಿ. ಎಲ್ಲರೂ ಕ್ಯಾಕರಿಸಿ ಉಗಿದ್ರಲ್ಲ. ನಾಲಾಯಕ್, ಬೇ*ರ್ಸಿ ಅಂತಲೇ ಉಗಿದ್ರಲ್ಲ ಎಂದು ಹೇಳಿದ್ದಾರೆ. ಹೀಗೆ ಧರ್ಮಾ- ಅನುಷಾ ನಡುವೆ ವಾದ ವಿವಾದ ಜೋರಾಗಿದೆ.

ಜಗಳ ನಡೆದ ಬಳಿಕ ಅನುಷಾ ರೈ ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡರು. ಧರ್ಮಾ ಅವರು ಅನುಷಾ ಬಳಿ ಬಂದು ಎಷ್ಟೇ ಮಾತನಾಡಿಸಲು ಪ್ರಯತ್ನ ಪಟ್ಟರೂ ಅವರು ಮಾತಾಡಿಲ್ಲ. ಸಮಧಾನ ಮಾಡಲು ಬಂದರೂ ತಿರಸ್ಕರಿಸಿದರು. ತಮ್ಮ ಮಾತಿನಲ್ಲಿ ಯಾವುದೇ ಬೇರೆ ಉದ್ದೇಶ ಇರಲಿಲ್ಲ ಎಂದು ಧರ್ಮ ಅವರು ಮನವರಿಕೆ ಮಾಡಲು ಪ್ರಯತ್ನಿಸಿದರೂ ಕೂಡ ಅನುಷಾ ಒಪ್ಪಿಕೊಳ್ಳಲಿಲ್ಲ. ಇವನಿಗೆ ಬೇರೆಯವರ ಎದುರು ಮಾತನಾಡಲು ಧಮ್ ಇಲ್ಲ, ನನ್ನ ಮುಂದೆ ರೇಗಾಡುತ್ತಾನೆ ಎಂದು ಅನುಷಾ ಹೇಳಿದ್ದಾರೆ. ಈ ಮೂಲಕ ಇವರಿಬ್ಬರ ಬಹುಕಾಲದ ಸ್ನೇಹ ಬಹುತೇಕ ಕೊನೆಗೊಂಡಂತಿದೆ.

BBK 11: ಈ ವಾರ ಮನೆಯಿಂದ ಹೊರಹೋಗಲು ಬರೋಬ್ಬರಿ 10 ಮಂದಿ ನಾಮಿನೇಟ್: ಯಾರೆಲ್ಲ?