Sunday, 24th November 2024

Team India: ವಿಂಡೀಸ್-ಐರ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

ಮುಂಬಯಿ: ತವರಿನಲ್ಲಿ ನಡೆಯಲಿರುವ ವೆಸ್ಟ್‌ ಇಂಡೀಸ್‌ ಹಾಗೂ ಐರ್ಲೆಂಡ್ ಎದುರಿನ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯ ವೇಳಾಪಟ್ಟಿ ಪ್ರಕಟಗೊಂಡಿದೆ. ಭಾರತ ಮಹಿಳಾ ತಂಡ ಮೊದಲು ವಿಂಡೀಸ್‌ ವಿರುದ್ಧ ತಲಾ ಮೂರು ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ. ಸರಣಿಯ ಮೊದಲ ಪಂದ್ಯ ಡಿ.15ರಿಂದ ಆರಂಭಗೊಳ್ಳಲಿದೆ. ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮುಂದಿನ ವರ್ಷಾರಂಭದಲ್ಲಿ ಆರಂಭಗೊಳ್ಳಲಿದೆ.

ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದ ಬಳಿಕ ಭಾರತ ಐಸಿಸಿ ಮಹಿಳಾ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಮವಾಗಿ 18 ಮತ್ತು 21 ಪಂದ್ಯಗಳಿಂದ ತಲಾ 28 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿವೆ.

ಇದನ್ನೂ ಓದಿ IND vs SA: ಬುಮ್ರಾ, ಭುವನೇಶ್ವರ್‌ ದಾಖಲೆ ಮುರಿದ ಅರ್ಷದೀಪ್‌

ವಿಂಡೀಸ್‌ ವಿರುದ್ಧದ ವೇಳಾಪಟ್ಟಿ

ಮೊದಲ ಟಿ20: ಡಿಸೆಂಬರ್ 15- ಸಂಜೆ 7.00 ಗಂಟೆ, ಸ್ಥಳ; ಮುಂಬೈ

ದ್ವಿತೀಯ ಟಿ20: ಡಿಸೆಂಬರ್ 17- ಸಂಜೆ 7.00 ಗಂಟೆ, ಸ್ಥಳ; ಮುಂಬೈ

ಮೂರನೇ ಟಿ20: ಡಿಸೆಂಬರ್ 19- ಸಂಜೆ 7.00 ಗಂಟೆ, ಸ್ಥಳ; ಮುಂಬೈ

ಮೊದಲ ಏಕದಿನ: ಡಿಸೆಂಬರ್ 22- ಮಧ್ಯಾಹ್ನ 1.30 ಗಂಟೆ, ಸ್ಥಳ; ಬರೋಡಾ

ದ್ವಿತೀಯ ಏಕದಿನ: ಡಿಸೆಂಬರ್ 24- ಮಧ್ಯಾಹ್ನ 1.30 ಗಂಟೆ, ಸ್ಥಳ; ಬರೋಡಾ

ಮೂರನೇ ಏಕದಿನ: 27 ಡಿಸೆಂಬರ್ ಮಧ್ಯಾಹ್ನ 1.30 ಗಂಟೆ, ಸ್ಥಳ; ಬರೋಡಾ

ಐರ್ಲೆಂಡ್ ವಿರುದ್ಧದ ವೇಳಾಪಟ್ಟಿ

ಮೊದಲ ಏಕದಿನ: ಜನವರಿ 10, ಬೆಳಗ್ಗೆ 11.00 ಗಂಟೆ, ಸ್ಥಳ; ರಾಜ್‌ಕೋಟ್‌

ದ್ವಿತೀಯ ಏಕದಿನ: ಜನವರಿ 12, ಬೆಳಗ್ಗೆ 11.00 ಗಂಟೆ, ಸ್ಥಳ; ರಾಜ್‌ಕೋಟ್‌

ಮೂರನೇ ಏಕದಿನ: ಜನವರಿ 15, ಬೆಳಗ್ಗೆ 11.00 ಗಂಟೆ, ಸ್ಥಳ; ರಾಜ್‌ಕೋಟ್‌