Monday, 25th November 2024

Heavy Smog: ದೆಹಲಿ ತುಂಬೆಲ್ಲಾ ಆವರಿಸಿದ ದಟ್ಟ ಹೊಗೆ; 300ಕ್ಕೂ ಹೆಚ್ಚು ವಿಮಾನಗಳ ಸಂಚಾರ ವಿಳಂಬ

Delhi Airport

ದೆಹಲಿ: ಗುರುವಾರ ಬೆಳಗಿನ ಜಾವ ದೆಹಲಿಯಲ್ಲಿ( Delhi) ದಟ್ಟವಾದ ಹೊಗೆ(Heavy Smog) ಆವರಿಸಿದ್ದರಿಂದ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿತು.  ದೆಹಲಿ ವಿಮಾನ ನಿಲ್ದಾಣದಲ್ಲಿ(Delhi Airport) 300 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ, ನಡುರಾತ್ರಿ 12 ರಿಂದ ದೆಹಲಿಗೆ ಒಟ್ಟು 115 ವಿಮಾನಗಳು ಆಗಮಿಸುತ್ತಿದ್ದು, ರಾಷ್ಟ್ರ ರಾಜಧಾನಿಯಿಂದ ಹೊರಡುವ 226 ವಿಮಾನಗಳು ವಿಳಂಬವಾಗಿವೆ ಎನ್ನಲಾಗಿದೆ.

ಪರಿಸ್ಥಿತಿಯನ್ನು ಗಮನಿಸಿದ ದೆಹಲಿ ವಿಮಾನ ನಿಲ್ದಾಣ ಗುರುವಾರ ಪ್ರಯಾಣಿಕರಿಗೆ ಸಲಹೆಯನ್ನು ನೀಡಿದೆ. ಆಗಸದಲ್ಲಿ ದಟ್ಟ ಹೊಗೆ ಆವರಿಸಿರುವುದರಿಂದ ಗೋಚರತೆಯ ಸಾಧ್ಯತೆ ಕಡಿಮೆ ಇದ್ದು, ವಿಮಾನ ಹಾರಾಟದ ಸಮಯದಲ್ಲಿ ಸ್ಪಲ್ಪ ವಿಳಂಬವಾಗಬಹುದು. ವಿಮಾನಯಾನದ ಕುರಿತು ಮತ್ತಷ್ಟು ಮಾಹಿತಿಗಾಗಿ ವಿಮಾನ ನಿಲ್ದಾಣವನ್ನು ಸಂಪರ್ಕಿಸಿ ಎಂದು ಟ್ವೀಟ್‌ ಮಾಡಿದೆ.

ಬುಧವಾರದಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆಯಾದ ಕಾರಣ ಎಂಟು ವಿಮಾನಗಳ ಮಾರ್ಗವನ್ನು ಬದಲಿಸಲಾಗಿತ್ತು. ಇಂಡಿಗೋ ಏರ್‌ಲೈನ್ಸ್‌ ಕೂಡ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ವಿಮಾನಗಳ ವಿಳಂಬದ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಚಳಿಯ ಕಾರಣದಿಂದಾಗಿ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ದೆಹಲಿಯಿಂದ ಹೊರಡುವ ಅಮೃತಸರ, ವಾರಣಾಸಿ ಮತ್ತು ವಿಮಾನಗಳು ಕೊಂಚ ವಿಳಂಬವಾಗಬಹುದು ಎಂದು ಮಾಹಿತಿ ನೀಡಿದೆ.

ಚಳಿಗಾಲ ಪ್ರಾರಂಭವಾದ ನಂತರ ದೆಹಲಿಯ ವಾತಾವರಣ ಸಂಪೂರ್ಣ ಹದಗೆಟ್ಟಿದ್ದು, ವಾಯುಗುಣ ಸೂಚ್ಯಾಂಕವು ಕಳಪೆ ಗುಣಮಟ್ಟಕ್ಕೆ ಇಳಿದದೆ. ದೆಹಲಿಯ ಲೋಧಿ ರಸ್ತೆ, ಅರಬಿಂದೋ ಮಾರ್ಗ,  ಮಥುರಾ ರಸ್ತೆ ಸೇರಿದಂತೆ ಹಲವು ಕಡೆ ವಾಯುಗುಣ ತೀವ್ರ ಕಳಪೆ ಗುಣಮಟ್ಟಕ್ಕೆ ಇಳಿದಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ಗ್ರೇಡ್‌ ರೆಸ್ಪಾನ್ಸ್‌ ಆ್ಯಕ್ಷನ್‌ ಪ್ಲಾನ್‌ ಮೂರನೇ ಹಂತವನ್ನು ಸದ್ಯ ಜಾರಿಗೊಳಿಸುವುದಿಲ್ಲ ಎಂದು ದೆಹಲಿ ಪರಿಸರ ಸಚಿವ ಗೋಪಾಲ ರೈ ತಿಳಿಸಿದ್ದಾರೆ.

ಇದನ್ನೂ ಓದಿ : Air Pollution: ದೀಪಾವಳಿ ಆಚರಣೆ ಬಳಿಕ ವಿಶ್ವದಲ್ಲೇ ದೆಹಲಿ ಅತ್ಯಂತ ಕಲುಷಿತ ನಗರ