ಹೊಸ ಸ್ವರೂಪ ಮಳಿಗೆಗಳ ಮೂಲಕ ಪ್ರೀಮಿಯಮೀಕರಣ ಪ್ರಕ್ರಿಯೆ ವೇಗಗೊಳಿಸಿದ ಟೈಟಾನ್ ಐ
ಬೆಂಗಳೂರು:ಟೈಟಾನ್ ಕಂಪನಿ ಲಿಮಿಟೆಡ್ ಅಧೀನದ ಭಾರತದ ಪ್ರಮುಖ ರಿಟೇಲ್ ಕನ್ನಡಕ ಬ್ರಾಂಡ್ ಆಗಿರುವ ಟೈಟಾನ್ ಐ+ ಬೆಂಗಳೂರಿನಲ್ಲಿ ತನ್ನ ಮೊದಲ ಪ್ರಮುಖ ಮಳಿಗೆಯನ್ನು ಉದ್ಘಾಟನೆ ಮಾಡುವುದರ ಮೂಲಕ ಪ್ರೀಮಿಯಂ ಸ್ವರೂಪದ ಮಳಿಗೆಗಳನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದೆ.
1800 ಚದರ ಅಡಿ ವಿಸ್ತಾರದ ಈ ಮಳಿಗೆಯು ಟೈಟಾನ್ ಐ+ ಸಂಸ್ಥೆಯ ಪ್ರೀಮಿಯಮೀಕರಣ ಪ್ರಯಾಣದಲ್ಲಿ ಮಹತ್ವದ ಮಳಿಗೆಯಾಗಿದ್ದು, ಈ ಮಳಿಗೆಯು ಅತ್ಯಾಧುನಿಕ ಐ ಕೇರ್ ತಂತ್ರಜ್ಞಾನ ಮತ್ತು ಅಂತರಾಷ್ಟ್ರೀಯ ಐಷಾರಾಮಿ ಬ್ರ್ಯಾಂಡ್ ಗಳ ಉತ್ಪನ್ನಗಳನ್ನು ಹೊಂದಿದೆ. ಈ ಮೂಲಕ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಕನ್ನಡಕ ಶಾಪಿಂಗ್ ಅನುಭವ ಒದಗಿಸುತ್ತದೆ.
ಪ್ರಖ್ಯಾತ ಡಿಸೈನರ್ ಮೈಕೆಲ್ ಫೋಲೆ ಅವರ ಪರಿಕಲ್ಪನೆಯಲ್ಲಿರುವ ರೂಪುಗೊಂಡಿರುವ ಹೊಸ ಸ್ವರೂಪ ಮಳಿಗೆಯು ಅದ್ಭುತವಾದ ವಾತವರಣವನ್ನು ಕಟ್ಟಿಕೊಟ್ಟಿದೆ. ಈ ಮಳಿಗೆ ನಾಲ್ಕು ವಿಭಿನ್ನ ಜೀವನಶೈಲಿ ವಿಭಾಗವನ್ನು ಹೊಂದಿದ್ದು, ಪ್ರತೀ ವಿಭಾಗದಲ್ಲಿ ಮಕ್ಕಳು, ಯಂಗ್ ಅಡಲ್ಟ್ ಗಳು, ಪುರುಷರು ಮತ್ತು ಮಹಿಳೆಯರ ಅಂತರರಾಷ್ಟ್ರೀಯ ಬ್ರ್ಯಾಂಡ್ ಗಳ ಉತ್ಪನ್ನವನ್ನು ಹೊಂದಿದೆ. ಮಳಿಗೆಯು ಕಾರ್ಟಿಯರ್, ಗುಚ್ಚಿ ಮತ್ತು ಟಾಮ್ ಫೋರ್ಡ್ ಸೇರಿದಂತೆ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಐಷಾರಾಮಿ ಕನ್ನಡ ಬ್ರ್ಯಾಂಡ್ ಗಳ ವ್ಯಾಪಕ ಶ್ರೇಣಿಯ ಉತ್ಪನ್ನ ಸಂಗ್ರಹವನ್ನು ಪ್ರದರ್ಶಿಸುತ್ತದೆ ಮತ್ತು ಮಾರಾಟ ಮಾಡುತ್ತದೆ.
ಟೈಟಾನ್ ಅಧೀನದ ಟೈಟಾನ್, ಫಾಸ್ಟ್ರ್ಯಾಕ್ ಮತ್ತು ಡ್ಯಾಶ್ ಬ್ರಾಂಡ್ ಗಳ ಪ್ರೀಮಿಯಂ ಉತ್ಪನ್ನಗಳನ್ನು ಕೂಡ ಇಲ್ಲಿ ಪಡೆಯಬಹುದಾಗಿದೆ. ಸಾಂಪ್ರದಾಯಿಕ ಟೈಟಾನ್ ಐ+ ಮಳಿಗೆಗಳಿಂತ ವಿಭಿನ್ನವಾಗಿ ರೂಪುಗೊಂಡಿರುವ ಈ ಹೊಸ ಸ್ವರೂಪ ಮಳಿಗೆಯು ಕಾಫಿ ಶಾಪ್ ಥೀಮ್ ನ ವಹಿವಾಟು ಏರಿಯಾದಂತಹ ಹೊಸ ಹೊಸ ಅಂಶಗಳನ್ನು ಒಳಗೊಂಡಿದ್ದು, ಗ್ರಾಹಕರಿಗೆ ಆರಾಮದಾಯಕವಾಗಿ, ವಿರಾಮವಾಗಿ, ಆಹ್ಲಾದಕರವಾಗಿ ಶಾಪಿಂಗ್ ಮಾಡಲು ಅನುವು ಮಾಡಿಕೊಡುತ್ತದೆ.
ಈ ಹೊಸ ಮಳಿಗೆಯ ವಿನ್ಯಾಸವನ್ನು ಗ್ರಾಹಕರು ಉತ್ತಮ ಅನುಭವ ಹೊಂದುವಂತೆ ಉದ್ದೇಶಪೂರ್ವಕವಾಗಿ ವಿನ್ಯಾಸ ಮಾಡಲಾಗಿದೆ. ಇಲ್ಲಿ ವಿಶೇಷ ವಲಯಗಳಿದ್ದು, ವಿವಿಧ ವಿಭಾಗಗಳ ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತದೆ. ಮೂರು ಪರಿಣಿತ ಆಪ್ಟೋಮೆಟ್ರಿಸ್ಟ್ ಗಳನ್ನು ಒಳಗೊಂಡಂತೆ ಒಟ್ಟು 11 ಮಂದಿ ವಿಶೇಷ ಸಿಬ್ಬಂದಿ ಸದಸ್ಯರ ತಂಡವು ಪ್ರತಿ ಗ್ರಾಹಕರಿಗೆ ವೈಯಕ್ತಿಕವಾಗಿ ಗಮನ ನೀಡುತ್ತದೆ ಮತ್ತು ಉತ್ತಮ ಸೇವೆಯನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ಐಕೇರ್ ವಿಭಾಗದ ಸಿಇಓ ಶ್ರೀ ಎನ್.ಎಸ್. ರಾಘವನ್ ಅವರು, “ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿ, ವಿವಿಧ ವಿಭಾಗಗಳಲ್ಲಿ ಪ್ರೀಮಿಯಮೀಕರಣ ಪ್ರಕ್ರಿಯೆ ಉಂಟಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಈ ಕಾಲದ ಗ್ರಾಹಕರು ಜಾಗತಿಕ ಮಟ್ಟದ ಅಭಿರುಚಿಗಳನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ಮತ್ತು ಅನುಭವಗಳನ್ನು ಬಯಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ನಮ್ಮ ಹೊಸ ಸ್ವರೂಪದ ಹೊಸ ಮಳಿಗೆಯು ರೂಪುಗೊಂಡಿದೆ. ಈ ಟ್ರೆಂಡ್ ಗೆ ತಕ್ಕಂತೆ ವಿವೇಚನಾಯುಕ್ತ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಅಂತರರಾಷ್ಟ್ರೀಯ ಬ್ರಾಂಡ್ ಗಳ ಉತ್ಪನ್ನಗಳನ್ನು ಒದಗಿಸಲಾಗುತ್ತದೆ ಮತ್ತು ಇಂದಿನ ಭಾರತೀಯ ಗ್ರಾಹಕರ ಅತ್ಯಾಧುನಿಕ ಅಗತ್ಯಗಳನ್ನು ಪೂರೈಸಲು ನಾವು ನಮ್ಮ ರಿಟೇಲ್ ಮಾರಾಟ ವಿಧಾನವನ್ನು ಬದಲಿಸುತ್ತಿದ್ದೇವೆ ಮತ್ತು ಬೆಳೆಸುತ್ತಿದ್ದೇವೆ. ಈ ಹೊಸ ಮಳಿಗೆಯ ಆರಂಭವು ನಮ್ಮ ಪ್ರೀಮಿಯಮೀಕರಣ ಪ್ರಕ್ರಿಯೆಯ ಪ್ರಯಾಣದಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಮಳಿಗೆಯು ಝೀಸ್ ವಿಸುಕೋರ್ 500 ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುವ ವಿಶಿಷ್ಟವಾದ, ಅತ್ಯಾಧುನಿಕ ಕಣ್ಣಿನ ಆರೈಕೆ ಒದಗಿಸುವ ಕ್ಲಿನಿಕ್ ಅನ್ನು ಸಹ ಹೊಂದಿದೆ. ಕಣ್ಣಿಗೆ ಸಂಬಂಧಿಸಿದ ರೋಗನಿರ್ಣಯ ಕ್ಷೇತ್ರದಲ್ಲಿ ಇದು ಬಹಳ ದೊಡ್ಡ ಬೆಳವಣಿಗೆಯಾಗಿದೆ. ಈ ಅತ್ಯಾಧುನಿಕ ಹೆಚ್ಚು ನಿಖರವಾಗಿ ಕಾರ್ಯ ನಿರ್ವಹಿಸುವ ಸ್ವಯಂಚಾಲಿತ ಘಟಕವು ಒಮ್ಮೆಲೇ ಒಬ್ಜೆಕ್ಟಿವ್ ಮತ್ತು ಸಬ್ಜೆಕ್ಟಿವ್ ರಿಫ್ರಾಕ್ಷನ್ ಅನ್ನು ಟೆಸ್ಟ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ. ಅತ್ಯುತ್ತಮ ನಿಖರತೆಯನ್ನು ಕಾಪಾಡಿಕೊಂಡು 5 ನಿಮಿಷಗಳಿಗಿಂತ ಕಡಿಮೆ ಸಮಯದಲ್ಲಿ ಸಮಗ್ರ ಕಣ್ಣಿನ ಪರೀಕ್ಷೆ ನಡೆಸುತ್ತದೆ. ಈ ಕ್ಲಿನಿಕ್ ನಲ್ಲಿ 1.1 ಲಕ್ಷಕ್ಕೂ ಹೆಚ್ಚು ಕಣ್ಣಿನ ಪರೀಕ್ಷೆಗಳನ್ನು ನಡೆಸಿರುವ ಅನುಭವಿ ನೇತ್ರಶಾಸ್ತ್ರಜ್ಞರು ಲಭ್ಯರಿರುತ್ತಾರೆ. ನಿಮ್ಮ ಕಣ್ಣಿನ ಪರೀಕ್ಷೆಯನ್ನು ಸೂಕ್ತ ಸಮಯ ತೆಗೆದುಕೊಂಡು ಇಲ್ಲಿ ಉತ್ತಮ ರೀತಿಯಲ್ಲಿ ಮಾಡಬಹುದಾಗಿದೆ.
ಈ ಕುರಿತು ಮಾತು ಮುಂದುವರಿಸಿದ ಶ್ರೀ ರಾಘವನ್ ಅವರು, “ಭಾರತೀಯ ಗ್ರಾಹಕರು ಪ್ರೀಮಿಯಂ ಜೀವನಶೈಲಿಯನ್ನು ತಮ್ಮದಾಗಿಸಿಕೊಳ್ಳುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಉತ್ತಮ ಕಾರ್ಯನಿರ್ವಹಣೆ ಜೊತೆ ಫ್ಯಾಷನೇಬಲ್ ಆಗಿರುವ ಅತ್ಯುತ್ತಮ ಗುಣಮಟ್ಟದ ಕನ್ನಡಕಗಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಮ್ಮ ಹೊಸ ಸ್ವರೂಪದ ಮಳಿಗೆಯು ಗ್ರಾಹಕರಿಗೆ ವಿಶ್ವ ಮಟ್ಟದ ಕಣ್ಣಿನ ಆರೈಕೆ