Friday, 22nd November 2024

Book Release: ಬೆಂಗಳೂರಿನಲ್ಲಿ ನ.16ರಂದು ಮಂಜುನಾಥ ಅಜ್ಜಂಪುರ ರಚಿತ ಪುಸ್ತಕಗಳ ಬಿಡುಗಡೆ

book release

ಬೆಂಗಳೂರು: ಲೇಖಕ ಮತ್ತು ಸಂಪಾದಕ ಮಂಜುನಾಥ ಅಜ್ಜಂಪುರ ಅವರ ಎರಡು ಪುಸ್ತಕಗಳು ಲೋಕಾರ್ಪಣೆ ಕಾರ್ಯಕ್ರಮವು (Book Release) ನಗರದ ರಾಷ್ಟ್ರೋತ್ಥಾನ ಪರಿಷತ್‌ನ ʼಕೇಶವಶಿಲ್ಪʼ ಸಭಾಂಗಣದಲ್ಲಿ ಸಂಸ್ಕಾರಭಾರತೀ ಸಹಯೋಗದಲ್ಲಿ ನ.16ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನವು ಪುಸ್ತಕಗಳನ್ನು ಪ್ರಕಟಿಸಿವೆ. ಇವು ʼವಾಯ್ಸ್‌ ಆಫ್‌ ಇಂಡಿಯಾʼ ಸರಣಿಯ ಗ್ರಂಥಗಳಾಗಿದ್ದು ಓದುಗರಲ್ಲಿ ಕುತೂಹಲವನ್ನು ಸೃಷ್ಟಿಸಿದೆ. ಭಾರತದ ಪ್ರಭಾವಶಾಲಿ ಲೇಖಕ ಸೀತಾರಾಮ ಗೋಯಲ್‌ ಅವರ‌ ಪ್ರಸಿದ್ಧ ಕೃತಿಯಾದ ʼHindu Temples-What Happened to Themʼ ಪುಸ್ತಕವನ್ನು ʼಹಿಂದೂ ದೇವಾಲಯಗಳು : ಇಸ್ಲಾಮೀ ವಿಧ್ವಂಸದ ಇತಿಹಾಸ : ಪ್ರಥಮ ಸಂಪುಟ, ಒಂದು ಪೂರ್ವಭಾವಿ ಸರ್ವೇಕ್ಷಣʼ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಮಂಜುನಾಥ ಅಜ್ಜಂಪುರ ಅವರು ಅನುವಾದಿಸಿದ್ದಾರೆ. ಅವರ ʼಸರಿಯಾಗಿ ದಾಖಲಾಗಬೇಕಾದ ಭಾರತದ ನಿಜ-ಇತಿಹಾಸʼ ಸ್ವತಂತ್ರ ಕೃತಿಯೂ ಲೋಕಾರ್ಪಣೆ ಆಗಲಿದೆ.

ಈ ಸುದ್ದಿಯನ್ನೂ ಓದಿ | Job Guide: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ 275 ಹುದ್ದೆ; ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

ಪರಮಪೂಜ್ಯ ಸ್ವಾಮಿ ವೀರೇಶಾನಂದಜಿ ಮಹಾರಾಜ್‌ ಅವರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಖ್ಯಾತ ವಾಗ್ಮಿ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ ಕೃತಿಗಳ ಕುರಿತು ಮಾತನಾಡಲಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್‌ ಹೆಗ್ಡೆ ಮತ್ತು ಲೇಖಕ ಬಿ.ಪಿ. ಪ್ರೇಮಕುಮಾರ್‌ ಉಪಸ್ಥಿತರಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.